Asianet Suvarna News Asianet Suvarna News

ತಾಯಿ ಸ್ಥಾನದಲ್ಲಿ‌ ನಿಂತು ನಿಮ್ಮ ಬೇಡಿಕೆ ಈಡೇರಿಸುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳು 24 ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು‌ ನೀಡಿದ್ದೇನೆ‌. ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ 

Minister Lakshmi Hebbalkar Talks Over Disabled People Problems grg
Author
First Published Nov 30, 2023, 2:00 AM IST

ಬೆಳಗಾವಿ(ನ.30): ವಿಶೇಷಚೇತನ ಮಕ್ಕಳೆಂದರೇ ದೇವರ ಮಕ್ಕಳು, ಕರುಣಾಮಯಿಗಳು, ನಿಮ್ಮ ಉಜ್ವಲ ಭವಿಷ್ಯಕ್ಕೆ ಸರ್ಕಾರ ಕಂಕಣಬದ್ಧವಾಗಿ ನಿಲ್ಲುತ್ತದೆ. ತಾಯಿಯ ಸ್ಥಾನದಲ್ಲಿ‌ ನಿಂತು‌ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ನಗರದಲ್ಲಿ ಬುಧವಾರ ವಿಕಲಚೇತನರ ಕ್ರೀಡಾಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳು 24 ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು‌ ನೀಡಿದ್ದೇನೆ‌. ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಚಿಕ್ಕೋಡಿ: ಕನ್ನಡ ನೆಲದಲ್ಲೇ ಕನ್ನಡ ಶಾಲೆಗೆ ಮರಾಠಿಗರ ವಿರೋಧ..!

ಯುವಸಬಲೀಕರ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ, ಮಹಿಳಾ ಮತ್ತು‌‌ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ವಿಕಲಚೇತನರ ಇಲಾಖೆಯ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಯುವರಾಜ ಕದಂ, ಶಂಕರಗೌಡ ಪಾಟೀಲ, ವಿಶೇಷ ಚೇತನ ಶಾಲೆಗಳ ಸಿಬ್ಬಂದಿ ಹಾಗೂ ಮಕ್ಕಳು‌ ಉಪಸ್ಥಿತರಿದ್ದರು.

ವಿಕಲಚೇತನರು ಯಾವುದೇ ವಿಷಯದಲ್ಲಿ ಹಿಂದೆ ಉಳಿಯಬಾರದೆಂದು ಇಲಾಖೆ ನಿರಂತರವಾಗಿ ನಿಮ್ಮ ಜತೆ ನಿಂತು ಕೆಲಸ ಮಾಡುತ್ತಿದೆ. ಇಲಾಖೆಯಿಂದ ಎಲ್ಲ ಸೌಲಭ್ಯವನ್ನು ಒದಗಿಸಲಾಗುವುದು. ನಿಮಗೆ ಸಂಬಂಧಿಸಿದ ಯಾವುದೇ ಪ್ರಸ್ತಾವನೆಗಳು 24 ಗಂಟೆಗಳಲ್ಲಿ ಕ್ಲಿಯರ್ ಆಗಬೇಕೆಂದು ಸೂಚನೆಯನ್ನು‌ ನೀಡಿದ್ದೇನೆ‌. ಈ ವಿಶೇಷ ಮಕ್ಕಳ ಭವಿಷ್ಯದ ಸಲುವಾಗಿ ಕೆಲಸ ಮಾಡುತ್ತಿರುವ ಎಲ್ಲ ಶಿಕ್ಷಕರಿಗೂ ಸಹ ಧನ್ಯವಾದಗಳು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ. 

Follow Us:
Download App:
  • android
  • ios