'ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮ'

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಮಾತಿನಂತೆ ನಡೆದುಕೊಂಡಿದ್ದರು| ರಮೇಶ್ ಕುಮಾರ್ ಹರಿಬರಿ ತೀರ್ಮಾನ ಕೈಗೊಂಡು ಎಲ್ಲ ಶಾಸಕರನ್ನು ಅನರ್ಹತೆ ಮಾಡಿದ್ದರು| ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ನೀಡುವ ತೀರ್ಮಾನಕ್ಕೆ ಬದ್ಧ| ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗುವ ಭರವಸೆ ಇದೆ| 

Minister KS Eshwarappa Talked about Former CM Siddaramaiah

ಶಿವಮೊಗ್ಗ:(ಸೆ.28) ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿನಂತೆ ನಡೆದುಕೊಂಡಿದ್ದರು. ರಮೇಶ್ ಕುಮಾರ್ ಹರಿಬರಿ ತೀರ್ಮಾನ ಕೈಗೊಂಡು ಎಲ್ಲ ಶಾಸಕರನ್ನು ಅನರ್ಹತೆ ಮಾಡಿದ್ದರು ಎಂದು ಸಚಿವ ಕೆ. ಎಸ್. ಈಶ್ವರಪ್ಪ ಅವರು ಆರೋಪಿಸಿದ್ದಾರೆ. 

ಶನಿವಾರ ನಗರದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ನೀಡುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ, ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ವಿದ್ಯುತ್ ಉತ್ಪಾದನೆಗಾಗಿ ವಿನಾಕಾರಣ ಆರಣ್ಯ  ನಾಶ ಮಾಡಬೇಕೆಂದಿಲ್ಲ. ಈ ಬಗ್ಗೆ ಶರಾವತಿ ನದಿ ಕಣಿವೆ ಪ್ರದೇಶಗಳಲ್ಲಿ ತಜ್ಞರ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲಿದೆ. ವರದಿ ಬಂದ ಬಳಿಕ ಸಂಪುಟದ ಮುಂದೆ ಬರಲಿದ್ದು ಸಂಪುಟ ತೀರ್ಮಾನ ಕೈಗೊಳ್ಳಲಿದೆ. ಈ ಯೋಜನೆ ಜಾರಿಯಾದರೆ ಕಗ್ಗತ್ತಲೆ ಇರುವ ಕುಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಬಹುದು ಎಂದು ಹೇಳಿದ್ದಾರೆ. 

ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ಎಂದ ಆನಂದ್ ಸಿಂಗ್ 

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ(ಹೊಸಪೇಟೆ) ಜಿಲ್ಲೆ ಮಾಡಬೇಕೆಂದು ಆನಂದ್ ಸಿಂಗ್ ಅವರು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ  ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ವಿಭಜನೆ ಬೇಕೇ? ಬೇಡವೇ? ಎಂಬುದರ ಬಗ್ಗೆ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಅಧಿಕಾರ ಯಾರಿಗೂ ಶಾಶ್ವತವಲ್ಲ 

ನನಗೂ, ಸಿದ್ದರಾಮಯ್ಯ, ಬಿಎಸ್ವೈ , ಹೆಚ್ಡಿಕೆ ಸೇರಿ ಯಾವುದೇ ವ್ಯಕ್ತಿಗೂ ಸ್ಥಾನಮಾನ ಶಾಶ್ವತ ಅಲ್ಲ ಎಂದು ತಿಳಿಸಿದ್ದಾರೆ. 

ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಿರ್ನಾಮ

ಸಿದ್ದರಾಮಯ್ಯನವರ ಸರ್ವಾಧಿಕಾರಿ ಧೋರಣೆ, ಕುತಂತ್ರದ ರಾಜಕಾರಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮಕ್ಕೆ ಕಾರಣವಾಗಿದೆ. ಅವರು ಸೋತರೂ , ಕಾಂಗ್ರೆಸ್ ಗೂ ಸೋಲಾಯಿತು. ಇದು ಎಲ್ಲರಿಗೂ ಪಾಠವಾಗಿದೆ, ಸಿದ್ದರಾಮಯ್ಯನವರು ಒಂದು ಪಕ್ಷ ಕಟ್ಟಿದ್ದರೂ ಮೂರು ಮತ್ತೊಂದು ಸೀಟು, ಯಡಿಯೂರಪ್ಪನವರೂ ಒಂದು ಪಕ್ಷ ಕಟ್ಟಿದ್ದರು ಮೂರು ಮತ್ತೊಂದು ಸೀಟು. ಸಂಘಟನೆಯನ್ನು ಮೀರಿ ಯಾವುದೇ ವ್ಯಕ್ತಿ ಉದ್ಧಾರ ಅಗೋಕೆ ಸಾಧ್ಯವೇ ಇಲ್ಲ. ಇದು ಅಧಿಕಾರಕ್ಕೆ ಹೋಗುವ ಜನಪ್ರತಿಯೊಬ್ಬ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು.

ಸಿದ್ದರಾಮಯ್ಯನವರಿಗೆ ಸೊಕ್ಕು, ನಾನೇ ಅಧಿಕಾರಕ್ಕೆ ತಂದಿದ್ದು ಎಂಬ ದುರಂಹಕಾರ ಇದೆ. ಮುನಿಯಪ್ಪನವರು ರಮೇಶ್ ಕುಮಾರ್ ನನ್ನ ಸೋಲಿಗೆ ಕಾರಣ ಎಂದ ಮೇಲೂ ತಮ್ಮ ಪಕ್ಕಕ್ಕೆ ಪಕ್ಷದ್ರೋಹಿಗಳಿಗೆ ಕೂರಿಸಿಕೊಂಡು ಸಿದ್ದರಾಮಯ್ಯ ಬೆಂಬಲ ಕೊಡಬಾರದು ಎಂದು ಹೇಳಿದ್ದಾರೆ. 

ಮಾಜಿ ಸಚಿವ .ಟಿ.ಖಾದರ್ ರವರು ಅರ್.ಎಸ್.ಎಸ್.ನಂತಹ ಸಂಘಟನೆ ಬೇಕಾದರೇ ಮಾಡಲಿ, ಅದರೆ ಸಂಘಟನೆಗೆ ರಾಷ್ಟ್ರ ಭಕ್ತಿ ಪ್ರಾದಾನವಾಗಿರಬೇಕು. ವ್ಯಕ್ತಿ ಆಧಾರಿತವಾಗಿರಬಾರದು ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios