ಶಿವಮೊಗ್ಗ (ಜ.05):   ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಿದ್ದಕ್ಕೆ ನನಗೆ ಬೆದರಿಕೆ ಕರೆ ಬಂದಿದೆ. ನಾನು ಈ ರೀತಿಯ ಯಾವುದೇ ಬೆದರಿಕೆಗಳಿಗೂ ಬಗ್ಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಈಶ್ವರಪ್ಪ  ಇಂತಹ ಬೆದರಿಕೆಗಳಿಂದ ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡಲು ಹಿಂಜರಿಯುವುದಿಲ್ಲ ಎಂದಿದ್ದಾರೆ. 

ಅಪರಿಚಿತನೋರ್ವ ಮಾತನಾಡಿ ಜೀವ ಬೆದರಿಕೆ ಹಾಕಿ ಸಿಎಎ ಹಾಗೂ ಎನ್.ಆರ್.ಸಿ. ಬಗ್ಗೆ ಕೇವಲ ಹಿಂದುತ್ವ ಕುರಿತು ಮಾತನಾಡುತ್ತಿರಾ?  48 ಗಂಟೆಯ ಒಳಗೆ ಇವೆಲ್ಲ ನಿಲ್ಲಿಸದಿದ್ದರೆ ಜೀವಕ್ಕೆ ಅಪಾಯವಾಗಲಿದೆ ಎಂದು ಬೆದರಿಕೆ ಹಾಕಿದ್ದ. ಈ ಕುರಿತು ರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ಹೆಚ್ಚುವರಿ ಭದ್ರತೆ ಒದಗಿಸಿದ್ದಾರೆ ಎಂದರು. 

ಸಚಿವ ಈಶ್ವರಪ್ಪಗೆ ಜೀವ ಬೆದರಿಕೆ : ವಿಶೇಷ ಭದ್ರತೆ..

ಕಳೆದ ವರ್ಷವೂ ಹೀಗೆ ದುಬೈನಿಂದ ಓರ್ವ ಕರೆ ಮಾಡಿ ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ.  ಆದರೆ ಇಂತಹ ಬೆದರಿಕೆಗಳಿಗೆಲ್ಲಾ ತಾವು ಬಗ್ಗುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು. 

ಜ.8ರಂದು ಬಂದ್ ಆಗಲಿದೆ ಕರ್ನಾಟಕ ? ಏನಾಗಲಿದೆ ಎಫೆಕ್ಟ್...

ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಅಲ್ಪಸಂಖ್ಯಾತರ ಬಗ್ಗೆ ನೀಡಿದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾವುದೇ ವ್ಯಕ್ತಿಯಾಗಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ ಹೇಳಿಕೆ ನೀಡಿದರೆ ಒಳಿತು. ಯು.ಟಿ ಖಾದರ್ ಕೂಡ ರಾಜ್ಯದಲ್ಲಿ NRC ಜಾರಿಯಾದ್ರೆ ಕರ್ನಾಟಕ ಹೊತ್ತಿ ಉರಿಯುತ್ತೆ ಎಂದಿದ್ದರು. ಇಂತಹ ಹೇಳಿಕೆಗಳ ಅವಶ್ಯಕತೆ ಇತ್ತಾ. ಆದ್ದರಿಂದ ಯಾರೆ ಆಗಲಿ ಯೋಚಿಸಿ ಮಾತನಾಡಬೇಕು ಎಂದರು.