ತುರುವೇಕೆರೆ ತಾಲೂಕು ಕಚೇರಿಗೆ ಕೃಷ್ಣ ಬೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು
ಸಾರ್ವಜನಿಕರು ಸಚಿವರ ಮುಂದೆ ಸಾಲು ಸಾಲು ಸಮಸ್ಯೆ ಹೇಳಿಕೊಂಡರು. ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ ಕೃಷ್ಣೆಭೈರೇಗೌಡರು ಸಮಸ್ಯೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ ಕೃಷ್ಣ ಬೈರೇಗೌಡ
ತುಮಕೂರು(ನ.17): ತುರುವೇಕೆರೆ ತಾಲ್ಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದು(ಶುಕ್ರವಾರ) ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಿಢೀರ್ ಪ್ರತ್ಯಕ್ಷರಾದ ಸಚಿವರನ್ನು ಕಂಡ ಅಧಿಕಾರಿಗಳು ಕೆಲ ಕ್ಷಣ ಕಕ್ಕಾಬಿಕ್ಕಿಯಾದರು. ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದ ಸಚಿವರು ಮಾರ್ಗಮಧ್ಯದಲ್ಲಿ ತುರುವೇಕೆರೆ ತಾಲ್ಲೂಕು ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಸಾರ್ವಜನಿಕರು ಸಚಿವರ ಮುಂದೆ ಸಾಲು ಸಾಲು ಸಮಸ್ಯೆ ಹೇಳಿಕೊಂಡರು. ಸಾರ್ವಜನಿಕರ ಸಮಸ್ಯೆ ಆಲಿಸಿದ ಸಚಿವ ಕೃಷ್ಣೆಭೈರೇಗೌಡರು ಸಮಸ್ಯೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು.
ಈ ವೇಳೆ ಸಚಿವರ ಎದುರು ಜಮೀನಿನಲ್ಲಿ ಓಡಾಡಲು ರಸ್ತೆ ಇಲ್ಲ ಎಂದು ರೈತರೊಬ್ಬರು ಅಳಲು ತೋಡಿಕೊಂಡರು, ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಹೇಳಿದಾಗ ಜನರ ಎದುರೇ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.
ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ: ಬಿ.ವೈ.ವಿಜಯೇಂದ್ರ
ಐದು ಬಾರಿ ನೋಟಿಸ್ ನೀಡಿದ್ದೇನೆ ಎಂಬ ತಹಶೀಲ್ದಾರ್ ಉತ್ತರದಿಂದ ಸಿಟ್ಟೆದ್ದ ಸಚಿವರು, ಐದು ನೋಟಿಸ್ ನೀಡಿ ಇನ್ನೂ ಏತಕ್ಕೆ ಕಾಯ್ತಾ ಇದ್ದೀರಿ ಎಂದು ತಹಶಿಲ್ದಾರ್ ಕ್ಲಾಸ್ ತಗೆದುಕೊಂಡರು. ಕೂಡಲೇ ದಾರಿ ತೆರವುಗೊಳಿಸುವಂತೆ ತಹಶಿಲ್ದಾರ್ ರೇಣುಕುಮಾರ್ ಗೆ ಸೂಚನೆ ನೀಡಿದರು. ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಹಾಸನ ಕಡೆ ಸಚಿವ ಕೃಷ್ಣ ಬೈರೇಗೌಡ ಪ್ರಯಾಣ ಬೆಳೆಸಿದರು.