ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆಸಚಿವ ಶ್ರೀನಿವಾಸ ಪೀಜಾರಿ ತಡೆ ನೀಡಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ್ದಾರೆ. 

ಮಂಗಳೂರು (ಮಾ.31): ಕೊರೋನಾ ಹಿನ್ನೆಲೆ ನಿರ್ಬಂಧ ಹೇರಿದ ದಕ್ಷಿಣ ಕನ್ನಡ ಡೀಸಿ ಆದೇಶಕ್ಕೆ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ತಡೆ ನೀಡಿ ಆದೇಶಿಸಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ‌‌‌.ರಾಜೇಂದ್ರ ಆದೇಶಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಡೆ ನೀಡಿದ್ದು, ಈ ಆದೇಶದ ಬಗ್ಗೆ ಮರು ಸ್ಪಷ್ಟನೆ ನೀಡಲು ಆದೇಶ ನೀಡಿದ್ದಾರೆ. 

ಜಿಲ್ಲೆಯಾದ್ಯಂತ ಜಾತ್ರೆ, ಸಭೆ, ಸಮಾರಂಭ ನಿಷೇಧ ಮಾಡಿ ಡೀಸಿ ಡಾ.ಕೆ.ವಿ.ರಾಜೇಂದ್ರ ಆದೇಶ ನೀಡಿದ್ದರು.. ಆದರೆ ಸದ್ಯ ಯಕ್ಷಗಾನ, ಕೋಲ, ನೇಮ, ಧಾರ್ಮಿಕ ಕಾರ್ಯಕ್ರಮ ನಡೆಸಲು ಶ್ರೀನಿವಾಸ ಪೂಜಾರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕೊರೋನಾ ಕಂಟ್ರೋಲ್‌ಗೆ ದಕ್ಷಿಣ ಕನ್ನಡದಲ್ಲಿ ಡೀಸಿ ಸ್ಟ್ರಿಕ್ಟ್ ಆದೇಶ : ಯಾವುದಕ್ಕೆಲ್ಲಾ ನಿರ್ಬಂಧ .

ಬಯಲು ಪ್ರದೇಶದಲ್ಲಿ 500 ಜನರ ಒಳಗೆ ಕಾರ್ಯಕ್ರಮ ‌ನಡೆಸಲು ಸಚಿವರು ಸೂಚನೆ ನೀಡಿದ್ದು, ಜಿಲ್ಲಾಧಿಕಾರಿ ಆದೇಶಕ್ಕೆ ತಡೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಧಾರ್ಮಿಕ ಸ್ಥಳ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗೆ ಜಿಲ್ಲಾಧಿಕಾರಿ ನಿಷೇಧ ವಿಧಿಸಿದ್ದರು. ಧಾರ್ಮಿಕ ಉತ್ಸವಗಳೊಂದಿಗೆ ಜಾತ್ರೆ/ಮೇಳಗಳನ್ನು ನಡೆಸದಂತೆ ಆದೇಶಿಸಿದ್ದರು. 

ಆದರೆ ಜಿಲ್ಲಾಧಿಕಾರಿ ಆದೇಶ ಬದಲಿಸಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಕ್ರಮಗಳ ಸಡಿಲಿಕೆಗೆ ಸಾರ್ವಜನಿಕರ ಒತ್ತಡ ಹಿನ್ನೆಲೆ ಸಚಿವರು ಈ ಕ್ರಮ ಕೈಗೊಂಡಿದ್ದಾರೆ.