ಕುಮಾರಸ್ವಾಮಿ ಪೂರ್ತಿ ವಿಡಿಯೋ ಬಿಡುಗಡೆ ಮಾಡಿಲ್ಲ ಎಂಬ ಆತಂಕ ಇದೆ

ಮಾಜಿ ಸಿಎಂ ಕುಮಾರಸ್ವಾಮಿ ಮಂಗಳೂರು ಗಲಭೆಯ ಪೂರ್ತಿ ವಿಡಿಯೋ ಯಾಕೆ ಬಿಡುಗಡೆ ಮಾಡಿಲ್ಲ ಎಂಬ ಆತಂಕ ನಮಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

Minister Kota Srinivas Poojary Slams HD Kumaraswamy Over Mangalore Violence Video

ಶಿವಮೊಗ್ಗ [ಜ.11] : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಗಳೂರು ಗಲಭೆ ಬಗ್ಗೆ ಪೂರ್ಣ ಪ್ರಮಾಣದ ವಿಡಿಯೋ ಯಾಕೆ ಬಿಡುಗಡೆ ಮಾಡಲಿಲ್ಲ ಎನ್ನುವ ಆತಂಕ ಇದೆ ಎಂದು ಸಚಿವ ಕೋಟಾ ಶ್ರೀನಿವಾ ಪೂಜಾರಿ ಹೇಳಿದರು. 

ಶಿವಮೊಗ್ಗದಲ್ಲಿ ಮಾತನಾಡಿದ್ದ ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕುಮಾರಸ್ವಾಮಿ ಅವರು ಮಂಗಳೂರಿನ ಗಲಭೆ ಬಗ್ಗೆ ಅರ್ಧಂಬರ್ಧ ವಿಡಿಯೋವನ್ನೇಕೆ ಬಿಡುಗಡೆ ಮಾಡಿದರು.  ಪೂರ್ತಿ ಯಾಕೆ ಬಿಡುಗಡೆ ಮಾಡಿಲ್ಲ ಎನ್ನುವ ಆತಂಕ ಇದೆ ಎಂದು ಪ್ರಶ್ನೆ ಮಾಡಿದರು. 

ಮಂಗಳೂರು ಗಲಭೆ ಹೊಸ ವಿಡಿಯೋ: ಸುವರ್ಣ ನ್ಯೂಸ್ ಜತೆ ಕುಮಾರಸ್ವಾಮಿ ಮಾತು...

ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವನಾದ ನನಗೆ ಅಲ್ಲಿನ ಸಂಪೂರ್ಣ ಜವಾಬ್ದಾರಿ ಇದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಹಲವು ಸಭೆ ನಡೆಸಿದ್ದೇನೆ. ಗ್ರಾಮೀಣ ಭಾಗದ ಜನರನ್ನು ಭೇಟಿ ಮಾಡಿ ಸಿಎಎ ಕುರಿತು ಮಾತನಾಡಿದ್ದೇನೆ. ನಿಮ್ಮ ಮುಗ್ಧರ ಪಟ್ಟಿಯಲ್ಲಿ ಮುಸುಕುದಾರರು , ಕಲ್ಲು ತೂರಿದವರು, ಪೊಲೀಸರನ್ನು ಹೊಡೆದವರು ಬರುತ್ತಾರಾ ಎಂದು ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. 

ಯಾರ್ಯಾರಿಗೆ ಸಂಪುಟದಲ್ಲಿ ಸ್ಥಾನ.. ಕೆಲವರಿಗೆ ಕೋಕ್..ಕೆಲವರಿಗೆ ಶಾಕ್!...

ಶಾಂತಿ ಮತ್ತು ಸುವವ್ಯಸ್ಥೆ ಕಾಪಾಡುವುದರಲ್ಲಿ ವಿರೋಧ ಪಕ್ಷದವರ ಜವಬ್ದಾರಿ ಸಹ ಇದೆ. ನಮಲ್ಲಿ ಗಲಭೆ ಕುರಿತು ಯಾವ ಗೊಂದಲವಿಲ್ಲ. ನಿಮ್ಮಬಳಿ ದಾಖಲಾತಿ ಇದ್ದರೆ ಮ್ಯಾಜಿಸ್ಟ್ರೇಟ್ ಗೆ ಕೊಡಿ. ಅವರಿಗೆ ತನಿಖೆಗೆ ಆದೇಶಿಸಲಾಗಿದೆ  ಎಂದು ಸಚಿವ ಶ್ರೀನಿವಾಸ ಪೂಜಾರಿ ಹೇಳಿದರು. 

ಎಚ್‌ಡಿಕೆ ಆರೋಪ ಅಲ್ಲಗಳೆದ ಕಮಿಷನರ್:

"

Latest Videos
Follow Us:
Download App:
  • android
  • ios