Asianet Suvarna News Asianet Suvarna News

ತುಮಕೂರು: ದೇವರ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿ ಇಬ್ಬರು ಸಾವು, ಆಸ್ಪತ್ರೆಕ್ಕೆ ಸಚಿವ ರಾಜಣ್ಣ ಭೇಟಿ

ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ವಸ್ಥರನ್ನ ಭೇಟಿಯಾಗಿ ಕೆಎನ್ ರಾಜಣ್ಣ ಆರೋಗ್ಯ ವಿಚಾರಿಸಿದ್ದಾರೆ. ಅಸ್ವಸ್ಥರು ಮಧುಗಿರಿ ತಾಲೂಕು ಆಸ್ಪತ್ರೆ ಹಾಗೂ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

minister kn rajanna visited to hospital in tumakuru grg
Author
First Published Aug 27, 2024, 11:53 PM IST | Last Updated Aug 27, 2024, 11:53 PM IST

ತುಮಕೂರು(ಆ.27):  ದೇವರ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೂವರ ಸಾವನ್ನಪ್ಪಿದ ಪ್ರಕರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಇಂದು(ಮಂಗಳವಾರ) ಜಿಲ್ಲೆಯ ಮಧುಗಿರಿ ತಾಲೂಕಿನ ಬುಳ್ಳಸಂದ್ರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. 

ಸಚಿವ ಕೆ.ಎನ್. ರಾಜಣ್ಣ ಅವರು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಗ್ರಾಮದಲ್ಲಿ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಸಚಿವ ರಾಜಣ್ಣ ಮಾಹಿತಿಯನ್ನ ಪಡೆದುಕೊಂಡಿದ್ದಾರೆ.  ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ವಸ್ಥರನ್ನ ಭೇಟಿಯಾಗಿ ಕೆಎನ್ ರಾಜಣ್ಣ ಆರೋಗ್ಯ ವಿಚಾರಿಸಿದ್ದಾರೆ. ಅಸ್ವಸ್ಥರು ಮಧುಗಿರಿ ತಾಲೂಕು ಆಸ್ಪತ್ರೆ ಹಾಗೂ ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಒಳಮೀಸಲಾತಿ ನೀಡುವ ಬಗ್ಗೆ ಸದಾಶಿವ ಆಯೋಗ ರಚಿಸಿದ್ದು ಕಾಂಗ್ರೆಸ್ ಸರ್ಕಾರ: ಶಾಸಕ ಜಯಚಂದ್ರ

ಘಟನೆ ಹಿನ್ನಲೆ: 

ಕಳೆದ ಶನಿವಾರ ಬುಳ್ಳಸಂದ್ರ ಗ್ರಾಮದಲ್ಲಿ ದೇವರಿಗೆ ಹರಿಸೇವೆ ಕಾರ್ಯಕ್ರಮ ಮಾಡಲಾಗಿತ್ತು. ಈ ವೇಳೆ ಗ್ರಾಮಸ್ಥರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅನ್ನಪ್ರಸಾದದ ಸೇವಿಸಿದ ಹಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ರು. ಒಂದೇ ಗ್ರಾಮದಲ್ಲಿ ವೃದ್ಧೆಯರಿಬ್ಬರು ಸಾವನ್ನಪ್ಪಿದ್ರು. ಸುಮಾರು 18 ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಅದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿತ್ತು. ಈ ಪೈಕಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ 45 ವರ್ಷದ ಕಾಟಮ್ಮ ಸಾವನ್ನಪ್ಪಿದ್ರು. ಈ ಬೆನ್ನಲ್ಲೆ ತುಮಕೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ಗ್ರಾಮದಲ್ಲೇ ಬೀಡುಬಿಟ್ಟು ವಾಂತಿ ಭೇದಿ ಕಾಣಿಸಿಕೊಂಡವರಿಗೆ ಪ್ರಾಥಮಿಕ ಚಿಕಿತ್ಸೆ‌ ಕೊಡಲಾಗ್ತಿದೆ.

Latest Videos
Follow Us:
Download App:
  • android
  • ios