ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ವೆಂಕಟೇಶ್
ಪಶು ವೈದ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಜನಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸ್ವಲ್ಪ ಕಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಇಲಾಖೆಗೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಿಕೊಂಡು ಹೆಚ್ಚಿನ ರೀತಿಯಲ್ಲಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು: ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್
ಬೆಟ್ಟದಪುರ(ಅ.01): ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುಗಳು ಉಳ್ಳವರ ಪಾಲಾಗಿದ್ದು, ಅದನ್ನು ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜೊತೆಗೂಡಿ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿದ ನಂತರ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸುವ ಕಾರ್ಯ ಮಾಡಲಾಗುವುದು, ಅಲ್ಲಿಯವರೆಗೆ ಯಾವುದೇ ಬಿಪಿಎಲ್ ಕಾರ್ಡುಗಳನ್ನು ವಿತರಿಸಲು ಸಾಧ್ಯವಿಲ್ಲ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಹಾಗೂ ಹಾರೋಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನ ಸಂಪರ್ಕ ಸಭೆ ನಡಸಿ ಜನರಿಂದ ಗ್ರಾಮಗಳ ಅಭಿವೃದ್ಧಿಗೆ ಮನವಿ ಸ್ವೀಕರಿಸಿದ ನಂತರ ಅವರು ಮಾತನಾಡಿದರು. ಗ್ರಾಮಗಳಲ್ಲಿ ಗ್ರಾಪಂ ಸದಸ್ಯರು ತಮಗೆ ಬೇಕಾದ ಕಾಮಗಾರಿಗಳನ್ನು ಮಾಡುತ್ತಿದ್ದು, ತಮಗೆ ಬೇಕಾದವರಿಗೆ ಸೌಲಭ್ಯಗಳನ್ನು ಕೊಡುತ್ತಿದ್ದು, ಇನ್ನು ಮುಂದೆ ಗ್ರಾಪಂನಲ್ಲಿ ಪಿಡಿಒಗಳು ಮುಂದೆ ಅರ್ಹತೆ ಇರುವ ಜನರಿಗೆ ಸೌಲಭ್ಯ ಕಲಿಸಬೇಕೆಂದು ಅವರು ತಿಳಿಸಿದರು.
ಬಿಪಿಎಲ್ ಕಾರ್ಡ್‌ದಾರರಿಗೆ ಶಾಕ್: ಅನ್ನಭಾಗ್ಯದ ಹಣಕ್ಕೆ ಕತ್ತರಿ ಹಾಕಿದ ಸರ್ಕಾರ, 10 ಕೆ.ಜಿ. ಅಕ್ಕಿ ಕೊಡಲು ನಿರ್ಧಾರ
ತಾಲೂಕಿನಲ್ಲಿ ಪಶು ವೈದ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದರಿಂದ ಜನಜಾನುವಾರುಗಳಿಗೆ ಚಿಕಿತ್ಸೆ ನೀಡಲು ಸ್ವಲ್ಪ ಕಷ್ಟವಾಗಿದ್ದು, ಮುಂದಿನ ದಿನಗಳಲ್ಲಿ ಇಲಾಖೆಗೆ ಬೇಕಾದ ಸಿಬ್ಬಂದಿಗಳನ್ನು ನೇಮಿಸಿಕೊಂಡು ಹೆಚ್ಚಿನ ರೀತಿಯಲ್ಲಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದೆಂದು ಅವರು ತಿಳಿಸಿದರು.
ಗ್ರಾಮಗಳಾದ ಅಲ್ಪನಾಯಕನಹಳ್ಳಿ, ಗೋರಹಳ್ಳಿ, ಕುಳ್ಳಯ್ಯನಕೊಪ್ಪಲು ಚಪ್ಪರದಹಳ್ಳಿ, ಗಂಗನಕುಪ್ಪೆ, ಹಾರನಹಳ್ಳಿ, ಅಂಬ್ಲಾರೆ, ಬಿಲಗುಂದ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ತಮ್ಮ ಗ್ರಾಮಗಳಿಗೆ ಬೇಕಾದ ಅಭಿವೃದ್ಧಿಯ ಬಗ್ಗೆ ಮನವಿ ಸ್ವೀಕರಿಸಿದರು.
ಕಾಂಗ್ರೆಸ್ ಅಧ್ಯಕ್ಷ ಸೋಮೇಗೌಡ, ರಹ್ಮದ್ ಜಾನ್ ಬಾಬು, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮುಖಂಡರಾದ ರಾಮೇಗೌಡ, ರಾಜೇಶ್, ಪುಟ್ಟಸ್ವಾಮಿಗೌಡ ಹಾಗೂ ತಾಲೂಕು ಅಧಿಕಾರಿಗಳಾದ ಇಒ ಸುನಿಲ್ ಕುಮಾರ್, ಕೃಷಿ ಇಲಾಖೆಯ ಪ್ರಸಾದ್, ಆಹಾರ ಇಲಾಖೆಯ ಸಣ್ಣ ಸ್ವಾಮಿ, ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಮಮತಾ, ವಿದ್ಯುತ್ ಇಲಾಖೆಯ ಪ್ರಶಾಂತ್, ಗ್ರಾಪಂ ಅಧ್ಯಕ್ಷ ಗಿರೀಶ್, ಗ್ರಾಪಂ ಅಧ್ಯಕ್ಷ ಶಶಿಕಲಾ, ಲೋಕೋಪಯೋಗಿ ಇಲಾಖೆಯ ಕುಮಾರ್, ದಿನೇಶ್, ಜಿಪಂ ಮಲ್ಲಿಕಾರ್ಜುನ್, ಮೇಘ, ಕಂದಾಯ ಇಲಾಖೆಯ ಬೆಟ್ಟದಪುರ ಉಪ ತಹಶೀಲ್ದಾರ್ ಶಶಿಧರ್ ಕಂದಾಯ ನಿರೀಕ್ಷಕ ಅಜ್ಮಲ್ ಪಾಷ, ಉಪ ತಹಸೀಲ್ದಾರ್ ಮಹೇಶ್, ಕಂದಾಯ ನಿರೀಕ್ಷಕ ಆನಂದ್, ಚಪ್ಪರದಹಳ್ಳಿ ಪಿಡಿಎಫ್ ಶ್ರೀದೇವಿ ಹಾಗೂ ಎಲ್ಲ ಗ್ರಾಮಗಳ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.