ಮೈಸೂರಿನಲ್ಲಿ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರು ಮಹಿಳಾ ಅಧಿಕಾರಿಯೊಬ್ಬರಿಗೆ ತಾನು ಹೇಳಿದಂತೆ ಕೆಲಸ ಮಾಡದಿದ್ದರೆ ಬೇರೆಡೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಪ್ರಾಂಶುಪಾಲರೊಬ್ಬರಿಗೆ ಸಚಿವರು ಅವಾಜ್ ಹಾಕಿರುವ ಘಟನೆ ನಡೆದಿದೆ.

ಮೈಸೂರು (ಮಾ.11): ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ರಾಜ್ಯ ಸರ್ಕಾರದ ಸಚಿವರುಗಳಿಗೆ ಅಧಿಕಾರದ ಮದ ಏರಿರುವುದು ಅವರ ಮಾತುಗಳಲ್ಲೇ ಅರ್ಥವಾಗುತ್ತದೆ. ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಮಾತನಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ಹೊಸ ಸೇರ್ಪಡೆ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್‌. ನಾವ್ ಹೇಳಿದಂಗೆ ಕೆಲಸ ಮಾಡೋ ಹಾಗಿದ್ರೆ ಇಲ್ಲಿರಿ, ಇಲ್ಲ ನಡೀರಿ ಎಂದು ಮಹಿಳಾ ಅಧಿಕಾರಿ ಮೇಲೆ ಸಚಿವ ಕೆ.ವೆಂಕಟೇಶ್ ದರ್ಪ ತೋರಿದ್ದಾರೆ. ತಾನೂ ಸೂಚಿಸಿದ ವ್ಯಕ್ತಿಗೆ ಕೆಲಸ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳಾ ಅಧಿಕಾರಿ ಮೇಲೆ ಸಚಿವ ಕಿಡಿಕಿಡಿಯಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆ ಪ್ರಿನ್ಸಿಪಾಲ್ ಮಂಜುಳಾಗೆ ಕೆ.ವೆಂಕಟೇಶ್‌ ಆವಾಜ್‌ ಹಾಕಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ ಗ್ರಾಮದಲ್ಲಿರುವ ಶಾಲೆ ಇದಾಗಿದೆ. 'ಏನಮ್ಮ ಏನ್ ತಿಳ್ಕೊಂಡಿದಿಯ. ಮಹದೇವಪ್ಪ ಕಡೆಯವಳು ಅಂತ ಏನೇನೋ ಮಾತಾಡ್ತಿಯಂತೆ. ಮಹದೇವಪ್ಪನ ಇಲ್ಲಿಗೆ ಎಂ.ಎಲ್.ಎ ನಾ ಅಥವಾ ಮಂತ್ರಿನಾ?' ಎಂದು ದೊಡ್ಡ ಸ್ವರದಲ್ಲಿ ಆವಾಜ್‌ ಹಾಕಿದ್ದಾರೆ.

'ನನ್ನ ಮಗ್ನೆ ಜೆಡಿಎಸ್‌ನವರಿಗೆ ಕೆಲಸ ಕೊಡ್ತೀಯ?..' ಅಧಿಕಾರಿಗೆ ಸಚಿವ ವೆಂಕಟೇಶ್ ಧಮ್ಕಿ, ಆಡಿಯೋ ವೈರಲ್!

ತಲೆ ಹರಟೆ ಎಲ್ಲ ಮಾಡಬೇಡಿ. ನಾವ್ ಹೇಳಿದಂಗೆ ಕೆಲಸ ಮಾಡೋ ಹಾಗಿದ್ರೆ ಇಲ್ಲಿರಿ, ಇಲ್ಲ ನಡೀರಿ ಎಂದು ಪಶು ಸಂಗೋಪನೆ ಸಚಿವರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಜಿಲ್ಲಾ ಪಂಚಾಯತ ಇಂಜಿನಿಯರ್‌ಗೂ ಇದೇ ರೀತಿಯಲ್ಲಿ ಕೆ. ವೆಂಕಟೇಶ್‌ ಆವಾಜ್‌ ಹಾಕಿರೋದು ಸುದ್ದಿಯಾಗಿತ್ತು.

ರಸ್ತೆಯಿಲ್ಲದ ಹಾಡಿಗೆ ವಿದ್ಯುತ್ ಬಂತು: ಚಾಮರಾಜನಗರದ 31 ಹಾಡಿಗಳಿಗೆ ಕರೆಂಟ್‌