ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ| ಮುಂಬರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಜೆಡಿಎಸ್ ಸಹಕಾರದ ಪ್ರಶ್ನೆಯೇ ಬರಲ್ಲ| ನಾಯಕತ್ವ ಬದಲಾವಣೆ ಆಗಲ್ಲ. ಇದು ಸುಳ್ಳು ಸುದ್ದಿ: ಈಶ್ವರಪ್ಪ|
ದಾವಣಗೆರೆ(ಡಿ.12): ಕುರುಬರಿಗೆ ಎಸ್‌ಟಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಯಕರನ್ನು ಸೇರಿಸಿ ಒಂದು ಕಮಿಟಿಯನ್ನ ಮಾಡಿದ್ದೇವೆ. ಕೇಂದ್ರದಲ್ಲಿ ಎಲ್ಲಾ ಸಚಿವರನ್ನು ಹಾಗೂ ನಾಯಕರನ್ನು ಭೇಟಿ ಮಾಡಲಾಗಿದೆ. ಮೀಸಲಾತಿ ನೀಡುವಂತೆ ಕೋರಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಸಂಬಂಧಿಸಿದಂತೆ ಇಂದು ದಾವಣಗೆರೆಯಲ್ಲಿ ಇಂದು(ಶನಿವಾರ) ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಸಚಿವ ಕೆ.ಎಸ್. ಈಶ್ವರಪ್ಪ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈಗಾಗಲೇ ಬೆಂಗಳೂರು, ಹಾವೇರಿ, ಸೇರಿದಂತೆ ರಾಜ್ಯದ ವಿವಿಧ ಕಡೆ ಸಮಾವೇಶ ಮಾಡಲಾಗಿದೆ. ದಾವಣಗೆರೆ ಸೇರಿದಂತೆ ಮೂರು ಜಿಲ್ಲೆ ಗಳ ಬೃಹತ್ ಸಮಾವೇಶ ನಡೆಯುತ್ತದೆ . ಅದರ ಪೂರ್ವ ಭಾವಿ ಸಭೆ ಇಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಸ್ವಾಮೀಜಿಗಳ ಪಾದಯಾತ್ರೆಯ ಬಳಿಕ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಫೆಬ್ರವರಿ 7 ರಂದು ನಡೆಯುವ ಸಮಾವೇಶದಲ್ಲಿ ಹತ್ತು ಲಕ್ಷ ಜನರನ್ನ ಸೇರಿಸಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಕಷ್ಟ ಸಾಧ್ಯ
ಕೆಎಸ್ಆರ್‌ಟಿಸಿ ಸಿಬ್ಬಂದಿಯನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಕಷ್ಟ ಸಾಧ್ಯ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ರಾಜ್ಯದ ಬಜೆಟ್‌ನ ಆದಾಯದಲ್ಲಿ ಶೇ. 56 ರಷ್ಟು ಆದಾಯ ಸರ್ಕಾರಿ ನೌಕರರ ಸಂಬಳ ವೇತನಕ್ಕೆ ಹೋಗುತ್ತದೆ. ಶೇ 44 ರಷ್ಟರಲ್ಲಿ ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತದೆ. ಕೊರೋನಾ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದು ಡಿಮ್ಯಾಂಡ್ ಮಾಡುವ ಸಂದರ್ಭ ಅಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತದೆ. ನಿಮಗೂ ತೊಂದರೆಯಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಿಎಂಗೆ ಸ್ವಾಮೀಜಿ ಡೆಡ್‌ಲೈನ್: ಯಡಿಯೂರಪ್ಪನವರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಈಶ್ವರಪ್ಪ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಜೆಡಿಎಸ್ ಸಹಕಾರದ ಪ್ರಶ್ನೆಯೇ ಬರಲ್ಲ. ನಾಯಕತ್ವ ಬದಲಾವಣೆ ಆಗಲ್ಲ. ಇದು ಸುಳ್ಳು ಸುದ್ದಿಯಾಗಿದೆ. ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಉಪಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆ. ನನಗೆ ದೆಹಲಿ ಮಾಹಿತಿ ಅಂತಾ ಹೇಳಿದ್ರು ಈಗ ಏನಾಯಿತು. ಸಿದ್ದರಾಮಯ್ಯ ಅಂದ್ರೆ ಸುಳ್ಳಿಗೆ ಇನ್ನೊಂದು ಹೆಸರಾಗಿದೆ. ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ ಸಿಎಂ ಆಗಬೇಕು ಎಂದು ಹಗಲುಗನಸು ಕಾಣುತ್ತಿದ್ದಾರೆ. ಮುಂದೆಯೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದ್ದಾರೆ.
ಮಧ್ಯರಾತ್ರಿ ಭೇಟಿ ಡಿಕೆಶಿಗೆ ಗೊತ್ತು
ಸಿಎಂ ಬಿಎಸ್‌ವೈ ಹಾಗೂ ಸಿದ್ದರಾಮಯ್ಯ ನಡುರಾತ್ರಿ ಭೇಟಿ ಆಗುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಡುರಾತ್ರಿ ಬೇಟಿ ಡಿಕೆಶಿಗೆ ಗೊತ್ತು. ನಮಗೆ ರಾತ್ರಿ ಭೇಟಿ ಬಗ್ಗೆ ಗೊತ್ತಿಲ್ಲ ಎಂದ ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 12, 2020, 1:46 PM IST