ಬ್ಯಾಡಗಿ( ಜ.16):  ಬಿಜೆಪಿ ಸಿದ್ಧಾಂತವಿರುವ ಪಕ್ಷ, ಆದರೆ ಬ್ಲಾಕ್‌ಮೇಲ್‌ ಅಂದ್ರೇನೆ ಸಿದ್ದರಾಮಯ್ಯ, ಬ್ಲಾಕ್‌ಮೇಲ್‌ ಬಗ್ಗೆ ಅವರೇ ಹೇಳಲಿ ಎಂದು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಪಡೆಯುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಹೋರಾಟ ಕಾರ್ಯಕ್ರಮದ ನಿಮಿತ್ತ ಕಾಗಿನೆಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬ್ಲಾಕ್‌ಮೇಲ್‌ ಗಿರಾಕಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ವಿಚಾರಕ್ಕೆ ಬ್ಲಾಕ್‌ಮೇಲ್‌ ಪದಗಳು ಬಳಕೆಯಾಗುತ್ತಿವೆ ಗೊತ್ತಿಲ್ಲ, ಮಂತ್ರಿ ಸ್ಥಾನ ಸಿಗದಂತಹ ಕೆಲವರು ಪಕ್ಷದ ವಿರುದ್ಧ ಮಾತನಾಡಿದ್ದಾರೆ, ಅದು ಸತ್ಯವೂ ಕೂಡ ಎಂದರು.

ವಿಶ್ವನಾಥ್‌ಗೂ ಮಂತ್ರಿ ಮಾಡಲು ಒತ್ತಾಯಿಸುತ್ತೇವೆ: ಆರ್‌.ಶಂಕರ್‌

ಪಕ್ಷದಲ್ಲಿನ ಅಸಮಾಧಾನವನ್ನು ಸರಿ​ಪ​ಡಿಸಿ ಮುಂದೆ ಹೋಗುವ ಶಕ್ತಿ ಪಕ್ಷದ ಮುಖಂಡರಿಗಿದೆ, ರಾಜಕೀಯ ಪಕ್ಷಗಳಲ್ಲಿ ಇದೊಂದು ಸಾಮಾನ್ಯ ಪ್ರಕ್ರಿಯೆ, ಎಲ್ಲವನ್ನೂ ಸರಿಪಡಿಸಿ ಸ್ವಚ್ಛ ಹಾಗೂ ಸುಭದ್ರ ಸರ್ಕಾರ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.