ಹಾಸನ (ಜ.27):  ಮದ್ಯದಂಗಡಿಯಲ್ಲಿ ಯಾರಾದರೂ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಕೆಲ ದಿವಸಗಳಲ್ಲೆ ಸಭೆ ನಡೆದು ಅಬಕಾರಿ ಇಲಾಖೆಯಲ್ಲಿ ಬದಲಾವಣೆ ತರಲಾಗುವುದು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಎಚ್ಚರಿಸಿದರು.

ನಗರದ ಯೂಥ್‌ ಹಾಸ್ಟೆಲ್‌ನಲ್ಲಿ ಮಾಧ್ಯಮದೊಂದಿಗೆ ಮತನಾಡಿದ ಅವರು, ಕೆಲವು ದಿನಗಳಲ್ಲಿ ಅಬಕಾರಿ ಇಲಾಖೆಯಲ್ಲಿ ಏನು ಬದಲಾವಣೆ ತರುತ್ತೇನೆ ಕಾದು ನೋಡಿ ಎಂದರು.

ನನಗೆ ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರು ಅದಕ್ಕೆ ಜೀವತುಂಬುವ ಶಕ್ತಿ ನನ್ನಲ್ಲಿದೆ. ಯುವ ಪೀಳಿಗೆಯು ಹಫೀಮು, ಗಾಂಜಾ, ಡ್ರಗ್ಸ್‌ ನಿಂದ ಹಾಳಾಗುತ್ತಿದ್ದಾರೆ. ಪೊಲೀಸರಿಂದ ತನಿಖೆ ಮಾಡಿಸಿ ಅವರನ್ನು ಬಲಿ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಲಸಿಕೆ ಪಡೆದವರ ಮೇಲೆ ಮದ್ಯದ ಪರಿಣಾಮ ಏನು?

ಇನ್ನು ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಅ​ಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದೇನೆ. ಏನು ಬದಲಾವಣೆ ತರಲು ಯೋಚನೆ ಮಾಡಿದ್ದೇನೆ, ಎಂಬುದರ ಬಗ್ಗೆ ಸಭೆ ನಂತರ ಘೋಷಣೆ ಮಾಡುವುದಾಗಿ ಹೇಳಿದರು. ಸರ್ಕಾರಕ್ಕೆ ಆದಾಯ ತರುವ ಜೊತೆಗೆ ಉತ್ತಮ ಮದ್ಯ ದೊರೆಯುವಂತೆ ಮಾಡುತ್ತೇನೆ. ಖಾತೆ ಬದಲಾವಣೆಯಿಂದ ಯಾವ ವ್ಯತ್ಯಾಸವೇನಿಲ್ಲ. ಯಾವುದೇ ಸಮಸ್ಯೆ ಬಂದರು ಆಯಾ ಸಚಿವರ ಗಮನಕ್ಕೆ ತರುವ ಕೆಲಸ ಮಾಡಲಾಗುವುದು.

ಆಹಾರ ಖಾತೆಯನ್ನು ಕೋವಿಡ್‌ ಸಂದರ್ಭದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿತ್ತು. ನಾನು ಹೆದರಲಿಲ್ಲ, ಎಲ್ಲಿ ಸಮಸ್ಯೆ ಇದೆ ಫೋನ್‌ ಬಂದ ಕೂಡಲೇ ಹೋಗಿ ಸ್ಪಂದಿಸಿದ್ದೇನೆ. ಖಾತೆ ಬದಲಾವಣೆ ಆದ ಮೇಲು ರೇಷನ್‌ ಕಾರ್ಡ್‌ ಸಮಸ್ಯೆ ಬಗ್ಗೆ   ಹೆಚ್ಚು ಜನ ಫೋನ್‌ ಮಾಡಿದ್ದು, ಅ​ಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಈ ಕೆಲಸದಲ್ಲಿ ನನಗೆ ತೃಪ್ತಿ ಇದೆ. ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿಯಿದೆ.

ಅಬಕಾರಿ ಇಲಾಖೆಯಲ್ಲಿ ಇನ್ನೊಂದು ವರ್ಷದಲ್ಲಿ ಮಹತ್ತರ ಬದಲಾವಣೆ ತರುತ್ತೇನೆ. ಹೊಸ ರೂಪ ಕೊಡುವ ಕೆಲಸ ಮಾಡುತ್ತೇನೆ. ಕಾನೂನು ಮೀರಿ ಲೈಸನ್ಸ್‌ ಕೊಟ್ಟಿದ್ದರೆ ಅದನ್ನು ರದ್ದು ಮಾಡುತ್ತೇನೆ. ಅ​ವೇಶನ ಕಳೆದ ಮೇಲೆ ಅ​ಕಾರಿಗಳೊಂದಿಗೆ ಸಭೆ ಮಾಡುತ್ತೇನೆ. ಕೊರೊನ ಬಂದ ನಂತರ ಎಲ್ಲಾ ಕಡೆ ಕೆಲಸ ನಿಧಾನವಾಗಿದೆ. ಈಗ ಎಲ್ಲಾ ಸರಿ ಹೋಗುತ್ತಾ ಬಂದಿದೆ ಎಂದರು. ಮುಖ್ಯಮಂತ್ರಿಗಳು ಮತ್ತು ದೇವೇಗೌಡರ ಮಾತುಕತೆ ನಂತರ ಎಲ್ಲಾ ಸರಿ ಹೋಗುತ್ತದೆ ಎಂದ ಅವರು, ಮುಖ್ಯಮಂತ್ರಿ ಗಳು ಎಂದು ದ್ವೇಷದ ರಾಜಕಾರಣ ಮಾಡಿರುವುದಿಲ್ಲ. ಎಲ್ಲ ಜಿಲ್ಲೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಹೇಳಿದರು.