'ರಾಹುಲ್ ಗಾಂಧಿ ಬಾಲ್ಯಾವಸ್ಥೆಯಲ್ಲಿದ್ದು, ಯಾವ ವಿಷಯ ಹೇಳಬೇಕೆಂಬ ಪರಿಜ್ಞಾನವಿಲ್ಲ'
ರಾಹುಲ್ ಗಾಂಧಿ ಯಾವಾಗ ಏನು ಮಾತಾಡುತ್ತಾರೆ. ಅದರ ಹಿಂದೆ-ಮುಂದೆ ಏನನ್ನು ಅರಿಯದೇ ಮಾತಾಡುವ ರಾಜಕಾರಣಿ ಯಾರಾದರೂ ಇದ್ದರೆ ಅದುವೇ ರಾಹುಲ್ ಗಾಂಧಿ ಎಂದ ಶೆಟ್ಟರ್| ರಾಹುಲ್ ಗಾಂಧಿಯಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಇದರಿಂದ ಕಾಂಗ್ರೆಸ್ ಸತ್ಯಾನಾಶವಾಗಲಿದೆ| ಮೇಕ್ ಇನ್ ಇಂಡಿಯಾ ಅಲ್ಲ ರೇಪ್ ಇನ್ ಇಂಡಿಯಾ ಎಂಬ ಹೇಳಿಕೆ ನೀಡಿ, ಭಾರತ ದೇಶಕ್ಕೆ ಮಾಡಿದ ಅಪಮಾನ ಮಾಡಿದ್ದಾರೆ|
ಜಮಖಂಡಿ(ಡಿ.16): ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು, ಅವರಿಗೆ ಯಾವ ವಿಷಯ ಹೇಳಬೇಕೆಂಬ ಪರಿಜ್ಞಾನವಿಲ್ಲದಂತಾಗಿದೆ. ಅವರಷ್ಟು ಅಪ್ರಬುದ್ಧ ಯಾರೂ ಇಲ್ಲ. ರಾಹುಲ್ ಗಾಂಧಿ ಅಪರೂಪದ ನಾಯಕ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ವ್ಯಂಗ್ಯವಾಡಿದ್ದಾರೆ.
ಅವರು ಇಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಯಾವಾಗ ಏನು ಮಾತಾಡುತ್ತಾರೆ. ಅದರ ಹಿಂದೆ-ಮುಂದೆ ಏನನ್ನು ಅರಿಯದೇ ಮಾತಾಡುವ ರಾಜಕಾರಣಿ ಯಾರಾದರೂ ಇದ್ದರೆ ಅದುವೇ ರಾಹುಲ್ ಗಾಂಧಿ. ಅವರಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಇದರಿಂದ ಕಾಂಗ್ರೆಸ್ ಸತ್ಯಾನಾಶವಾಗಲಿದ್ದು, ಮೇಕ್ ಇನ್ ಇಂಡಿಯಾ ಅಲ್ಲ ರೇಪ್ ಇನ್ ಇಂಡಿಯಾ ಎಂಬ ಹೇಳಿಕೆ ನೀಡಿ, ಭಾರತ ದೇಶಕ್ಕೆ ಮಾಡಿದ ಅಪಮಾನ ಮಾಡಿದ್ದಾರೆ. ಹೀಗಾಗಿ ಕೂಡಲೇ ರಾಹುಲ್ ಗಾಂಧಿ ಈ ದೇಶದ ಜನತೆಯ ಕ್ಷಮೆ ಬೇಡಬೇಕು ಎಂದು ಒತ್ತಾಯಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ರೀತಿ ಮಾತಾಡಿದರೆ ವಿದೇಶಕ್ಕೆ ಯಾವ ಮೆಸೇಜ್ ಹೋಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಅಲ್ಲದೇ ಇನ್ನೊಂದು ಘನಘೋರ ಅಪರಾಧವನ್ನು ರಾಹುಲ್ ಗಾಂಧಿ ಮಾಡಿದ್ದು, ವೀರ ಸಾರ್ವಕರ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ವೀರ ಸಾರ್ವಕರ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಇಡೀ ದೇಶಕ್ಕೆ ಗೊತ್ತಿದೆ. ರಾಹುಲ್ ಗಾಂಧಿ ವೀರ ಸಾರ್ವಜರ ಅವರ ಬಗ್ಗೆ ಅಧ್ಯಯನ ಮಾಡಿಕೊಳ್ಳಬೇಕು. ವೀರ ಸಾರ್ವಕರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಕ್ಕೆ ಕ್ಷಮೆ ಬೇಡಬೇಕು ಎಂದು ಆಗ್ರಹಿಸಿದರು.
ಶಿವಸೇನೆ ನಡೆ ನಾಚಿಕೆಗೇಡು:
ಇತ್ತೀಚೆಗೆ ವೀರ ಸಾರ್ವಕರ ಅವರಿಗೆ ಭಾರತರತ್ನ ನೀಡಬೇಕೆಂದು ಹೇಳುತ್ತಿರುವ ಶಿವಸೇನೆ ತನ್ನ ಮಿತ್ರ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೀರ ಸಾರ್ವಕರ ಬಗ್ಗೆ ಕೀಳಾಗಿ, ಕೆಟ್ಟದ್ದಾಗಿ ಮಾತನಾಡುತ್ತಿದ್ದಕ್ಕೆ ಶಿವಸೇನೆ ಕೂಡಲೇ ಸ್ಪಷ್ಟೀಕರಣ ನೀಡಬೇಕು. ಅಧಿಕಾರ ದಾಹಕ್ಕೆ ಕಾಂಗ್ರೆಸ್-ಎನ್‌ಸಿಪಿ ಜೊತೆಗೆ ಕೈ ಜೋಡಿಸಿದ ಶಿವಸೇನೆ ನಡೆ ಬಗ್ಗೆ ನಾಚಿಗೆ ಪಡಬೇಕಾಗುತ್ತದೆ ಎಂದು ಕಿಡಿಕಾರಿದರು.
ಸ್ಪಷ್ಟನೆ ನೀಡಲಿ:
ಮಹಾರಾಷ್ಟ್ರದಲ್ಲಿ ಶಿವಸೇನೆ- ಕಾಂಗ್ರೆಸ್-ಎಸ್‌ಸಿಪಿ ಅಧಿಕಾರಕ್ಕೆ ಬಂದ ನಂತರ ಬೆಳಗಾವಿ ಗಡಿ ಸಮಸ್ಯೆ, ಜಾತಿ ಸಮಸ್ಯೆ ಬಗ್ಗೆ ವಿನಾ ಕಾರಣ ಕ್ಯಾತೆ ತೆಗೆಯುವುದರಿಂದ ಶಿವಸೇನೆ ಬಗ್ಗೆ ಕಾಂಗ್ರೆಸ್ ನಡೆ ಎನೂ ಎಂಬುದನ್ನು ಜನತೆಗೆ ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದರು.
ಬಿಜೆಪಿ ಹೈಕಮಾಂಡದೊಂದಿಗೆ ಚರ್ಚಿಸಿ, ಶೀಘ್ರದಲ್ಲಿ ಸಚಿವ ಸಂಪುಟ ರಚನೆ ನಡೆಯಲಿದೆ. ಡಿಸಿಎಂ ಇನ್ನೂ ಎಷ್ಟು ಎಂದು ಕೇಳಿದ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಜಾರಿಕೊಂಡರು. ಡಿಸಿಎಂ ಹೆಚ್ಚಿಸುವ ಬಗ್ಗೆ ಪಕ್ಷ ನಿರ್ಧಾರ ನೀಡಲಿದೆ. ವೈಯಕ್ತಿಕ ಹೇಳಿಕೆಗೆ ಸರ್ಕಾರ ಜವಾಬ್ದಾರಿಯಲ್ಲ, ಇವತ್ತು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರು ರಾಜೀನಾಮೆಯನ್ನು ಕೊಟ್ಟು ಹೊರಗಡೆ ಬಂದ ಮೇಲೆ ಅವರ ಒಂದು ತ್ಯಾಗದಿಂದ ಭಾರತಿಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿದೆ.
ಈಚೆಗೆ ನಡೆದ ಉಪಚುನಾವಣೆಯಲ್ಲಿ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮುಖಾಂತರ ಇವತ್ತು ಒಂದು ಸ್ಥಿರ ಸರ್ಕಾರ ನೀಡಲು ಸಾಧ್ಯವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸುಭದ್ರ ಸರ್ಕಾರ ಇನ್ನೂ ಮೂರುವರೆ ವರ್ಷದವರೆಗೆ ಮುಂದುವರಿಯಲು ಈಗ ಅನುಕೂಲವಾಗಿದೆ. ಉತ್ತರ ಕರ್ನಾಟಕ ಈ ಭಾಗದ ನೀರಾವರಿ ಯೋಜನೆಗೆ ಹೆಚ್ಚು ಚಾಲನೆ ಕೊಡುವಂತಹ ಕೆಲ ಸವನ್ನು ಬಿಜೆಪಿ ಸರ್ಕಾರ ಯಾವತ್ತು ಮಾಡುತ್ತದೆ. ಬಿಜೆಪಿಯು ಒಂದು ಅಭಿವೃದ್ಧಿ ಪರವಾದಂತಹ ಪಕ್ಷ, ಆ ಹಿನ್ನೆಲೆಯಲ್ಲಿ ಸುಭದ್ರ ಸರ್ಕಾರ ಈ ರಾಜ್ಯದಲ್ಲಿ ಬಂದಿದೆ ಎಂದು ಹೇಳಿದರು.