ಹುಬ್ಬಳ್ಳಿ(ಜ.15): ಮುಖ್ಯಮಂತ್ರಿ ಸ್ಥಾನ ಅಂದಮೇಲೆ ಬಹಳ ಒತ್ತಡ ಇರುತ್ತದೆ. ಯಡಿಯೂರಪ್ಪನವರ ಪ್ರಯತ್ನದಿಂದ 17 ಜನ ಶಾಸಕರು ರಾಜೀನಾಮೆ ಕೊಟ್ಟಿದ್ದರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶಾಸಕ ಸ್ಥಾನ ತ್ಯಜಿಸಿ ನಮ್ಮ ಜೊತೆ ಬಂದ 17 ಜನರಿಗೆ ಸಚಿವ ಸ್ಥಾನ ಕೊಡಬೇಕಿದೆ. ನಮ್ಮ ಸಲುವಾಗಿ ತ್ಯಾಗ ಮಾಡಿ ಬಂದವರಿಗೆ ಮೊದಲು ಅವಕಾಶ ಕೊಡಬೇಕು. ಉಳಿದವರಿಗೆ ಯಾವುದಾದರೂ ಸ್ಥಾನ ಉಳಿದಾಗ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಷ್ಟೊಂದು ಒತ್ತಡದ ನಡುವೆಯೂ ಯಡಿಯೂರಪ್ಪನವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ನಾವೆಲ್ಲಾ ಮಂತ್ರಿಗಳು ಬಿಜೆಪಿ ಹಾಗೂ ಯಡಿಯೂರಪ್ಪನವರ ಬೆಂಬಲಕ್ಕಿದ್ದೇವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಡಿಯೂರಪ್ಪನವರು ಯಾವುದೇ ಒತ್ತಡಕ್ಕೆ ಒಳಗಾಗದೆ ಸರ್ಕಾರ ನಡೆಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಸಂಪುಟ ರಚನೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಬೇರೆಯವರು ಕೇವಲ ಸಲಹೆ ಕೊಡಬಹುದು. ಆದರೆ, ಇಂತಹವರನ್ನೇ ಮಂತ್ರಿ ಮಾಡಿ ಅಂತಾ ಹೇಳೋದು ತಪ್ಪು. ಮಂತ್ರಿ ಮಾಡದಿದ್ದರೆ ವಿರೋಧಿಸುತ್ತೇವೆ ಅಂತಾ ಹೇಳೋದು ಅಪಾರ್ಥಕ್ಕೆ ದಾರಿ ಮಾಡಿಕೊಡುತ್ತದೆ. ಇದು ಮುಖ್ಯಮಂತ್ರಿಗಳ ಪರಮಾಧಿಕಾರ ಪ್ರಶ್ನಿಸಿದಂತೆ ಆಗುತ್ತದೆ ಎಂದು ಹೇಳಿದ್ದಾರೆ.