Asianet Suvarna News Asianet Suvarna News

ಹುಬ್ಬಳ್ಳಿ: ಬ್ಲ್ಯಾಕ್ ಫಂಗಸ್‌ಗೆ ಚುಚ್ಚುಮದ್ದಿನ ಕೊರತೆ, ಜಗದೀಶ್‌ ಶೆಟ್ಟರ್‌ ಪ್ರತಿಕ್ರಿಯೆ

* ಕಿಮ್ಸ್‌ನಲ್ಲಿ ಬೇರೆ ಜಿಲ್ಲೆಯ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ 
* ಕಿಮ್ಸ್‌ನಲ್ಲೇ ಇದ್ದವರಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ
* ಸರ್ಕಾರ ಕೇವಲ 100 ವಯಲ್ಸ್ ನೀಡಿದೆ
 

Minister Jagadish Shettar talks Over Black Fungus Treatment at KIMS in Hubballi grg
Author
Bengaluru, First Published May 24, 2021, 3:39 PM IST

ಹುಬ್ಬಳ್ಳಿ(ಮೇ.24): ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ 102 ಜನರು ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರಿಗೂ ಚುಚ್ಚುಮದ್ದು ಅಗತ್ಯವಿದೆ. ಸರ್ಕಾರ ಕೇವಲ 100 ವಯಲ್ಸ್ ನೀಡಿದೆ. ಕಿಮ್ಸ್ ವೈದ್ಯರ ಪ್ರಕಾರ 2 ಸಾವಿರ ವಯಲ್ಸ್ ಬೇಕು. ರಾಜ್ಯಕ್ಕೆ ಎಷ್ಟು ಬಂದಿದೆ ನೋಡಬೇಕು. ಅಂಪೋಟೆರಿಸನ್-ಬಿ ಅಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಇಲ್ಲದೆ ಇರುವುದು ಸಮಸ್ಯೆ ತಂದಿದೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಾಗೂ ಡಿಸಿಎಂ ಅಶ್ವಥ್ ನಾರಯಣ್ ಅವರ ಜೊತೆ ಮಾತನಾಡಿದ್ದೇನೆ. ನಮಗೆ ಹೆಚ್ಚು ವಯಲ್ಸ್ ಬೇಕು ಎಂದು ಹೇಳಿದ್ದೇನೆ. ಕಿಮ್ಸ್‌ನಲ್ಲಿ ವರ್ಷಕ್ಕೆ ನಾಲ್ಕೈದು ಬ್ಲ್ಯಾಕ್ ಫಂಗಸ್ ಕೇಸ್ ಬರುತ್ತಿದ್ದವು. ಆದರೆ ಸದ್ಯ ನಿರೀಕ್ಷೆ ಮೀರಿ ಕೇಸ್ ಬರುತ್ತಿವೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ: ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು, ಕಿಮ್ಸ್‌ಗೆ ಸಿಕ್ಕಿದ್ದು ಅರೆಕಾಸಿನ ಮಜ್ಜಿಗೆ

ಕಿಮ್ಸ್‌ನಲ್ಲಿ ಬೇರೆ ಜಿಲ್ಲೆಯ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಸಚಿವ ಶೆಟ್ಟರ್‌, ಕಿಮ್ಸ್‌ನಲ್ಲೇ ಇದ್ದವರಿಗೆ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಹೀಗಾಗೇ ಬೇರೆ ಜಿಲ್ಲೆಯವರಿಗೆ ಅವಕಾಶ ನೀಡುತ್ತಿಲ್ಲ‌ ಎಂದಿದ್ದಾರೆ.

ಬೆಳಗಾವಿಯಲ್ಲಿ ಎರಡು ಮೆಡಿಕಲ್ ಕಾಲೇಜುಗಳು ಇವೆ. ಅಲ್ಲೆ ಅವರಿಗೆ ಚಿಕಿತ್ಸೆ ನೀಡಬೇಕು. ಏನೇ ಬಂದರೂ ಕಿಮ್ಸ್‌ಗೆ ಕಳುಹಿಸಿ ಎನ್ನುವ ರೂಢಿ ಇದೆ. ಹೀಗಾಗೇ ಆಯಾ ಜಿಲ್ಲೆಯಲ್ಲೇ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios