Asianet Suvarna News Asianet Suvarna News

ಹುಬ್ಬಳ್ಳಿ: ಬ್ಲ್ಯಾಕ್‌ ಫಂಗಸ್‌ಗೆ ಚುಚ್ಚುಮದ್ದು, ಕಿಮ್ಸ್‌ಗೆ ಸಿಕ್ಕಿದ್ದು ಅರೆಕಾಸಿನ ಮಜ್ಜಿಗೆ

* ಕಿಮ್ಸ್‌ನ ಬೇಡಿಕೆ ಇದ್ದಿದ್ದು 2 ಸಾವಿರ ವಯಲ್ಸ್‌
* ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಬಂಧಿಕರು ಅಗತ್ಯ ಚುಚ್ಚುಮದ್ದಿಗಾಗಿ ಹುಡುಕಾಟ 
* ಕಿಮ್ಸ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಖ್ಯೆ 94 ಕ್ಕೆ ಏರಿಕೆ

Lack of Amphotericin B Injection at KIMS in Hubballi grg
Author
Bengaluru, First Published May 24, 2021, 12:00 PM IST

ಹುಬ್ಬಳ್ಳಿ(ಮೇ.24): ​ಅಂಪೊಟೋರೊಸಿಯನ್‌ ಚುಚ್ಚುಮದ್ದಿಗೆ ಕಿಮ್ಸ್‌ನ ಬೇಡಿಕೆ ಇದ್ದಿದ್ದು 2 ಸಾವಿರ ವಯಲ್ಸ್‌, ಬಂದಿದ್ದು 100 ವಯಲ್ಸ್‌ಗಿಂತಲೂ ಕಡಿಮೆ!

ಹೌದು, ಕಿಮ್ಸ್‌ನಲ್ಲಿ ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಖ್ಯೆ ಬರೋಬ್ಬರಿ 94 ತಲುಪಿದೆ. ಪ್ರತಿಯೊಬ್ಬರಿಗೆ ಕನಿಷ್ಠ 40-60 ವಯಲ್‌ ಬೇಕು. ಅಂದರೆ ಈಗ ಕನಿಷ್ಠ 3600 ವಯಲ್ಸ್‌ ಅಂಪೊಟೋರೊಸಿಯನ್‌ ಚುಚ್ಚುಮದ್ದು ಬೇಕಾಗಿದೆ. ರೋಗಿಗಳ ಸಂಖ್ಯೆ 50 ಇದ್ದಾಗ ಕಿಮ್ಸ್‌ 2 ಸಾವಿರ ಚುಚ್ಚುಮದ್ದಿಗೆ ಬೇಡಿಕೆ ಇಟ್ಟಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ತನಗೆ ಬಂದಿರುವ ಅಂಪೊಟೋರೊಸಿಯನ್‌ ಚುಚ್ಚುಮದ್ದಲ್ಲಿ 80-100 ವಯಲ್ಸ್‌ಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಿಕೊಟ್ಟಿದೆ.

ಬ್ಲ್ಯಾಕ್‌ ಫಂಗಸ್‌: ಬೇರೆ ಜಿಲ್ಲೆಯವರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಇಲ್ಲ..!

ಈ ಬಗ್ಗೆ ಮಾತನಾಡಿದ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ನಮಗೆ ಬಂದಿರುವ ಅಂಪೊಟೋರೊಸಿಯನ್‌ ವಯಲ್ಸ್‌ ಕೇವಲ 7-8 ರೋಗಿಗಳಿಗೆ ಮಾತ್ರ ಸಾಕಾಗುತ್ತದೆ. ಚುಚ್ಚುಮದ್ದಿನ ಕೊರತೆ ಮುಂದುವರಿಯಲಿದೆ. ಆದರೆ, ನಾಡಿದ್ದು ಇನ್ನೊಂದಿಷ್ಟು ಚುಚ್ಚುಮದ್ದನ್ನು ಕಳುಹಿಸಿಕೊಡುವುದಾಗಿ ಸರ್ಕಾರ ತಿಳಿಸಿದೆ. ಅದಕ್ಕಾಗಿ ಕಾಯುತ್ತಿದ್ದೇವೆ. ಅದಲ್ಲದೆ ಕೆಪಿಎಂಇ ಪೋರ್ಟಲ್‌ನಲ್ಲೂ ಅಂಪೊಟೋರೊಸಿಯನ್‌ ಚುಚ್ಚುಮದ್ದಿಗೆ ಇಂಡೆಂಟ್‌ ಸಲ್ಲಿಸಲಾಗಿದೆ. ಇಲ್ಲಿಂದಲೂ ಒಂದಿಷ್ಟು ಬರುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಇನ್ನು, ಬ್ಲ್ಯಾಕ್‌ ಫಂಗಸ್‌ ರೋಗಿಗಳ ಸಂಬಂಧಿಕರು ಅಗತ್ಯ ಚುಚ್ಚುಮದ್ದಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಈಗಾಗಲೆ ಬ್ಲ್ಯಾಕ್‌ ಫಂಗಸ್‌ಗೆ ತುತ್ತಾಗಿದ್ದ ರೋಗಿಯೊಬ್ಬರು ಬಹು ಅಂಗಾಗ ವೈಫಲ್ಯದಿಂದ ಮೃತಪಟ್ಟಿರುವುದು ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
 

Follow Us:
Download App:
  • android
  • ios