ಧಾರವಾಡ(ನ.01): ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗದಿಯಾಗಿಲ್ಲ. ಎಲ್ಲಿಯವರೆಗೆ ಡೇಟ್‌ ಫಿಕ್ಸ್ ಆಗಲ್ಲವೋ ಅಲ್ಲಿಯವರೆಗೆ ಅಭ್ಯರ್ಥಿ ಯಾರು ಅಂತ ಹೇಳಲಿಕ್ಕೆ ಆಗೋದಿಲ್ಲ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ಫಿಕ್ಸ್‌ ಆಗಿಲ್ಲ, ಈ  ಕ್ಷಣದವರೆಗೂ ಟಿಕೆಟ್ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.  

ಮತ್ತೆ ಲಾಕ್‌ಡೌನ್ ಮಾತು: ಈ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಾನು ಯಾರಿಗೂ ಒತ್ತಡ ಹಾಕಿಲ್ಲ, ನನಗೆ ಏನೂ ಗೊತ್ತಿಲ್ಲ, ಊಹಾಪೂಹದ ಪ್ರಶ್ನೆಗಳಿಗೆ ಉತ್ತರಿಸುವ ಹಾಗಿಲ್ಲ, ನಾನು ಟಿಕೆಟ್ ಬಗ್ಗೆ ಯಾರಿಗೂ ದುಂಬಾಲು ಬಿದ್ದಿಲ್ಲ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ಮರಣದಿಂದ ಬೆಳಗಾವಿ ಲೋಕಸಭಾ ಉಪಚುನಾವಣೆ ನಡೆಯಬೇಕಿದೆ. ಇನ್ನೂ ದಿನಾಂಕವೇ ನಿಗದಿಯಾಗಿಲ್ಲ ಈಗಲೇ ಅಭ್ಯರ್ಥಿಯ ಬಗ್ಗೆ ಇಲ್ಲ ಸಲ್ಲದ ಊಹಾಪೋಹಗಳು ಕೇಳಿಬರುತ್ತಿವೆ.