ಸರ್ಕಾರ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ| ಏನಾದರೂ ತಪ್ಪುಗಳಾದರೆ ವಿರೋಧ ಪಕ್ಷದಲ್ಲಿದ್ದುಕೊಂಡು ಸರ್ಕಾರಕ್ಕೆ ಸಲಹೆ ಸೂಚನೆ ನೀಡಬೇಕು. ಅದು ಬಿಟ್ಟು ಇದು ತುಘಲಕ್‌ ಸರ್ಕಾರ ಎಂದೆಲ್ಲ ಟೀಕೆ ಮಾಡುವುದು ಸರಿಯಲ್ಲ| ಟೀಕೆ ಮಾಡುವ ಸಕಾಲವಲ್ಲ: ಶೆಟ್ಟರ್‌| 

ಹುಬ್ಬಳ್ಳಿ(ಏ.24): ಕೋವಿಡ್‌ ಸಂದರ್ಭದಲ್ಲಿ ರಾಜಕೀಯಕ್ಕಾಗಿ ಟೀಕೆ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಸೂಕ್ತ ಸಲಹೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಲಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳಿರುತ್ತವೆ. ಏನಾದರೂ ತಪ್ಪುಗಳಾದರೆ ವಿರೋಧ ಪಕ್ಷದಲ್ಲಿದ್ದುಕೊಂಡು ಸರ್ಕಾರಕ್ಕೆ ಸಲಹೆ ಸೂಚನೆ ನೀಡಬೇಕು. ಅದು ಬಿಟ್ಟು ಇದು ತುಘಲಕ್‌ ಸರ್ಕಾರ ಎಂದೆಲ್ಲ ಟೀಕೆ ಮಾಡುವುದು ಸರಿಯಲ್ಲ. ಟೀಕೆ ಮಾಡುವ ಸಕಾಲವಲ್ಲ ಎಂದು ನುಡಿದರು. 

'ತಜ್ಞರ ಶಿಫಾರಸ್ಸಿನ ಮೇಲೆ ಸೆಮಿಲಾಕ್‌ಡೌನ್‌ ಜಾರಿ'

ಸ​ಚಿವ ಶ್ರೀರಾ​ಮುಲು ಚುನಾವಣೆ ಪ್ರಚಾರದ ಪ್ರಶ್ನೆಗೆ, ಇಂತಹ ಸಂದ​ರ್ಭ​ಗ​ಳಲ್ಲಿ ನೂ​ರಾರು ಜ​ನ​ರನ್ನು ಸೇ​ರಿ​ಸಿ​ಕೊಂಡು ಪ್ರ​ಚಾರ ಮಾ​ಡು​ವುದು ಸ​ರಿ​ಯಲ್ಲ. ಸ​ಚಿ​ವರು ಇ​ದನ್ನು ಕೈ​ಬಿಟ್ಟು ಸ​ರ್ಕಾ​ರದ ನಿ​ರ್ದೇ​ಶ​ನ ಪಾ​ಲಿ​ಸ​ಬೇಕು ಎಂದು ಸೂಚಿಸಿದ್ದಾರೆ.