Asianet Suvarna News Asianet Suvarna News

ಚೀನಾದಿಂದ ಹೊರಬರಲು ಮುಂದಾದ MNC ಕಂಪನಿಗಳು: ಕರ್ನಾಟಕದತ್ತ ಸೆಳೆಯಲು ಕಾರ್ಯಪಡೆ

ಎಂಎನ್‌ಸಿ ಹೂಡಿಕೆದಾರರ ಆಕರ್ಷಿಸಲು ಕಾರ್ಯಪಡೆ: ಸಚಿವ ಶೆಟ್ಟರ್‌| ಕಂಪನಿಗಳನ್ನ ಕರ್ನಾಟಕದತ್ತ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಕೆ|

Minister Jagadish Shettar Says Task Force Team Will be create To attract MNC investors in Karnataka
Author
Bengaluru, First Published May 10, 2020, 7:31 AM IST

ಧಾರವಾಡ(ಮೇ.10): ಕೊರೋನಾ ವಿಶ್ವವ್ಯಾಪಿ ಹರಡುತ್ತಿರುವ ಮಧ್ಯೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಹೊರಬರಲು ಮುಂದಾಗಿದ್ದು, ಇವರನ್ನು ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್‌, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೊರೋನಾ ಹರಡುವಿಕೆ ನಂತರ ಚೀನಾದಿಂದ ಜಪಾನ್‌, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳ ನೂರಾರು ಅಂತಾರಾಷ್ಟ್ರೀಯ ಹೂಡಿಕೆದಾರರು ಹೊರ ಬಂದು ಕರ್ನಾಟಕದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. 

ಲಂಡನ್‌ನಲ್ಲಿ ಟೆಕ್ಕಿ ಆತ್ಮಹತ್ಯೆ: ಇಂದು ಬೆಂಗಳೂರಿಗೆ ಶವ

ಅವರನ್ನು ಸೆಳೆಯಲು ಉದ್ಯಮಿಗಳಾದ ನಂದನ್‌ ನಿಲೇಕಣಿ, ಕಿರಣ್‌ ಮುಜುಂದಾರ್‌ ಷಾ, ಇಸ್ಫೋಸಿಸ್‌ನ ಕಿರಣ್‌ ಹಾಗೂ ಕೈಗಾರಿಕೋದ್ಯಮಿಗಳ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ ಎಂದರು.
 

Follow Us:
Download App:
  • android
  • ios