ಯಾದಗಿರಿ(ಸೆ.02): ಡ್ರಗ್‌ ಮಾಫಿಯಾ ಹಣದಿಂದ ಸಮ್ಮಿಶ್ರ ಸರ್ಕಾರ ಪತನವಾಯ್ತು ಎಂಬುದಾಗಿ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಎಚ್ಡಿಕೆ ಅವರು ಕಾಲಕಾಲಕ್ಕೆ ತಮ್ಮ ಹೇಳಿಕೆ ನೀಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮಂಗಳವಾರ ಮಧ್ಯಾಹ್ನ ಯಾದಗಿರಿ ಸಮೀಪದ ಸೈದಾಪೂರದ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಲೆಂದು ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರ ಬಿದ್ದಾಗಲೇ ಎಚ್‌.ಡಿ.ಕುಮಾರಸ್ವಾಮಿ ಅವರು ಡ್ರಗ್‌ ಮಾಫಿಯಾ ಬಗ್ಗೆ ಹೇಳಬೇಕಿತ್ತು. ಇದೆಲ್ಲ ಈಗ ಅವರಿಗೆ ನೆನಪಾಯಿತೇ?. ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಈ ಹಿಂದೆ ಸಿದ್ದರಾಮಯ್ಯನವರ ತಂತ್ರಗಾರಿಕೆ ಎಂದು ದೂಷಿಸಿದ್ದ ಎಚ್ಡಿಕೆ, ಈಗ ಡ್ರಗ್‌ ಮಾಫಿಯಾದ ಬಗ್ಗೆ ಚರ್ಚೆಯಾಗುತ್ತಿದ್ದಂತೆಯೇ ಅದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ತಮ್ಮ ಮಾತುಗಳನ್ನು ಅವರು ಬದಲಾಯಿಸುತ್ತಾರೆ ಎಂದು ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿದರು.

'ನನ್ನ ಮಗ ಡ್ರಗ್‌ ಮಾಫಿಯಾದಲ್ಲಿದ್ದರೂ ಸುಮ್ನೆ ಬಿಡಲ್ಲ'

ಡ್ರಗ್‌ ಮಾಫಿಯಾದಲ್ಲಿ ಯಾರೇ ಇದ್ದರೂ ಸರ್ಕಾರ ಅವರನ್ನು ಬಿಡುವುದಿಲ್ಲ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶೆಟ್ಟರ್‌ ಪ್ರತಿಕ್ರಿಯಿಸಿದರು.