Asianet Suvarna News Asianet Suvarna News

ಕಾವೇರಿ ವಿಚಾರದಲ್ಲಿ ಸುಖಾಸುಮ್ಮನೆ ರಾಜಕೀಯವಾಗಿ ಹೇಳಿಕೆ ಕೊಡಬಾರದು: ಸಚಿವ ಮಹದೇವಪ್ಪ

ಬಿಜೆಪಿ- ಜೆಡಿಎಸ್ ಇಬ್ಬರು ಅಧಿಕಾರದಲ್ಲಿದ್ದವರು. ಅವರಿಗೂ ನ್ಯಾಯಾಲಯದ ಸ್ಥಿತಿಗಳು ಗೊತ್ತಿವೆ. ಎಲ್ಲಾ ರೀತಿಯಾಗಿ ಸಮರ್ಥವಾದ ವಾದವನ್ನ ಮಂಡಿಸಿದ್ದೇವೆ. ರಾಜಕೀಯ ಕಾರಣಕ್ಕಾಗಿ ಈ ವಿಚಾರವಾಗಿ ಏನೇನೋ ಆರೋಪ ಮಾಡಬೇಡಿ ಎಂದ ಸಚಿವ ಡಾ.ಎಚ್.ಸಿ. ಮಹದೇವಪ್ಪ 

Minister HC Mahadevappa Talks Over Kaveri Issue grg
Author
First Published Sep 25, 2023, 4:00 AM IST

ಮೈಸೂರು(ಸೆ.25): ಕಾವೇರಿ ನೀರು ವಿಚಾರದಲ್ಲಿ ಸುಖಾಸುಮ್ಮನೆ ರಾಜಕೀಯವಾಗಿ ಹೇಳಿಕೆ ಕೊಡಬಾರದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಇಬ್ಬರು ಅಧಿಕಾರದಲ್ಲಿದ್ದವರು. ಅವರಿಗೂ ನ್ಯಾಯಾಲಯದ ಸ್ಥಿತಿಗಳು ಗೊತ್ತಿವೆ. ಎಲ್ಲಾ ರೀತಿಯಾಗಿ ಸಮರ್ಥವಾದ ವಾದವನ್ನ ಮಂಡಿಸಿದ್ದೇವೆ. ರಾಜಕೀಯ ಕಾರಣಕ್ಕಾಗಿ ಈ ವಿಚಾರವಾಗಿ ಏನೇನೋ ಆರೋಪ ಮಾಡಬೇಡಿ ಎಂದರು.

ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗದಂತೆ ಬಂದ್ ಗಳು ನಡೆಯಲಿ. ಜನರು ಪ್ರತಿಭಟನೆ ಮಾಡುವುದು ಅವರ ಹಕ್ಕು. ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು. ದಸರಾದ ಮೇಲೆ ಇದರ ಕರಿಛಾಯೇ ಬೀಳುವುದಿಲ್ಲ. ಸೆ.27ಕ್ಕೆ ಸುಪ್ರೀಂಕೋರ್ಟ್ ನಲ್ಲಿ ತೀರ್ಪಿರುವ ಕಾರಣ ನಮ್ಮ ಪರವಾಗಿ ಆದೇಶ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.

 

ಸುಖಾಸುಮ್ಮನೆ ಸಂಘಟನೆಗಳ ಬ್ಯಾನ್‌ ಇಲ್ಲ: ಸಚಿವ ಡಾ.ಜಿ.ಪರಮೇಶ್ವರ್‌

2018 ರಲ್ಲೇ ಬಿಜೆಪಿ- ಜೆಡಿಎಸ್ ಇವರಿಬ್ಬರ ಅನಧಿಕೃತ ಮೈತ್ರಿ ಬಗ್ಗೆ ಹೇಳಿದ್ದೆ. ಈಗ ಅದು ಅಧಿಕೃತವಾಗಿದೆ. ಅವರ ಮೈತ್ರಿಯಿಂದ ನಮಗೆ ಯಾವ ಸಮಸ್ಯೆಯಾಗುವುದಿಲ್ಲ. ಕಾಂಗ್ರೆಸ್ ಸದೃಢವಾಗಿದೆ ಎಂದರು.

ಸಾಂಪ್ರದಾಯಿಕ ದಸರಾ

ಅದ್ಧೂರಿ ದಸರೆಗೆ ಸಿಎಂ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆ ನೀಡಿದ್ದರು. ಬರಗಾಲ ಹಿನ್ನೆಲೆಯಲ್ಲಿ ಸರಳವೂ ಅಲ್ಲ, ಅದ್ಧೂರಿಯೂ ಅಲ್ಲ, ಸಾಂಪ್ರದಾಯಿಕ ದಸರಾ ಆಚರಣೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಾಂಪ್ರದಾಯಿಕ ದಸರಾ ಹಿನ್ನೆಲೆಯೇ ಬೇರೆ. ಈಗ ಆಗುತ್ತಿರುವುದೇ ಬೇರೆ. ಕಲೆ, ಕ್ರೀಡೆ, ಸಾಹಿತ್ಯ ಇತರ ಚರಿತ್ರೆ ಕಡಿಮೆಯಾಗುತ್ತಿದೆ. ಅದಕ್ಕೆ ಜೀವ ನೀಡುವ ಕೆಲಸ ಮಾಡಬಹುದು‌. ಎಲ್ಲಾ ‌ಕಾರ್ಯಕ್ರಮಗಳು ಇರಲಿವೆ. ಆದರೆ ದುಂದು ವೆಚ್ಚಕ್ಕೆ ಕಡಿವಾಣ ಹಾಕಲಾಗುವುದು. ಪ್ರಾಯೋಜಕತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ದೀಪಾಲಂಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow Us:
Download App:
  • android
  • ios