'ಶಾಲೆ ಆರಂಭಿಸುವುದು ಬೇಡ :ಇನ್ನೂ 3 ತಿಂಗಳು ಮುಂದೂಡಲಿ '

ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ

Minister H Nagesh Reacts Over School Open on This COVID 19 situation snr

ಕೋಲಾರ (ಸೆ.30):  ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಸರಿಯಲ್ಲ. ಮಕ್ಕಳಿಗೆ ಸೋಂಕು ಹರಡಿದರೆ ಅದನ್ನು ತಡೆಯುವುದು ಕಷ್ಟವಾಗುತ್ತದೆ. ಯಾವುದಕ್ಕೂ ಶಾಲಾ ಕಾಲೇಜುಗಳನ್ನು ಪ್ರಾರಂಭ ಮಾಡಬೇಕೆ ಬೇಡವೇ ಎಂಬುದರಲ್ಲಿ ಪೋಷಕರ ಅಭಿಪ್ರಾಯ ಕೇಳುವುದು ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌. ನಾಗೇಶ್‌ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಮಾಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಶಿಕ್ಷಣ ಸಚಿವರಾದ ಸುರೇಶ್‌ ಕುಮಾರ್‌ ಶಾಲೆ ಪ್ರಾರಂಭಿಸುವ ಕುರಿತು ತಜ್ಞರು ಹಾಗೂ ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ಬಂದಿಲ್ಲ. ಇತ್ತೀಚಿಗೆ ಹೆಚ್ಚಿನ ಟೆಸ್ಟ್‌ಗಳನ್ನು ಮಾಡುತ್ತಿರುವುದರಿಂದ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಆದರೂ ಅಷ್ಟೆಪ್ರಮಾಣದಲ್ಲಿ ಗುಣಮುಖರಾಗುತ್ತಿರುವುದು ಸಮಾಧಾನಕರ ವಿಷಯ ಎಂದರು.

ಕಾನೂನು ಶಾಲೆಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗಿಲ್ಲ ಮೀಸಲು ..

ಸೋಂಕಿನ ನಿಯಂತ್ರಣ ಕಡಿಮೆಯಾಗಿಲ್ಲ. ದಿನೇದಿನೇ ಹೆಚ್ಚಾಗುತ್ತಿದ್ದು, 8 ಸಾವಿರ ಪ್ರಕರಣಗಳು ಸರಾಸರಿಯಿದೆ. ಕಡಿಮೆ ಆದ ಬಳಿಕ ಆರಂಭ ಮಾಡುವುದು ಉತ್ತಮ. ಒಂದು ವೇಳೆ ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ಬಂದರೆ ಮುಗಿಯಿತು, ಎಲ್ಲರೂ ದುರಂತಕ್ಕೆ ಒಳಗಾಗುತ್ತಾರೆ. ಹೀಗಾಗಿ 2-3 ತಿಂಗಳು ಮುಂದೂಡಿದರೆ ಅನುಕೂಲವಾಗಲಿದೆ ಎಂದರು.

ಕೆ.ಸಿ. ವ್ಯಾಲಿ ನೀರು ಹರಿವಿನ ಪ್ರಮಾಣವನ್ನು ಹೆಚ್ಚಿಸಬೇಕು. ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಬೇಕು. ಕೋಲಾರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಅನುದಾನ ನೀಡಬೇಕು. ಕೊರೋನಾ ಹಿನ್ನೆಲೆಯಲ್ಲಿ ಜನರು ಹೆಚ್ಚಾಗಿ ಸೇರದಂತೆ ಆನ್‌ಲೈನ್‌ ಮೂಲಕ ಮದ್ಯ ಮಾರಾಟ ನಡೆಸುವ ಸಂಬಂಧ ಸುಪ್ರಿಂ ಕೋರ್ಟ್‌ ವರದಿ ನೀಡಿದ್ದರಿಂದಾಗಿ ನಾವು ಚಿಂತನೆ ನಡೆಸಿದ್ದೆವು ಹೊರತು, ಬೇರೆ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios