ಕೋಲಾರ [ಸೆ.12]: ಅಬಕಾರಿ ಇಲಾಖೆಯಲ್ಲಿ ಏನಾದ್ರು ಹೊಸ ಯೋಜನೆಗಳು ಇದೆಯಾ ಎಂದು ಕೇಳಿದ್ದಕ್ಕೆ ಸಚಿವ ನಾಗೇಶ್ ಫುಲ್ ಗರಂ ಆಗಿದ್ದಾರೆ.

ಕೋಲಾರದ ಮುಳುಬಾಗಿಲಿಗೆ ಇಂದು ತೆರಳಿದ್ದ ಅಬಕಾರಿ ಸಚಿವ ನಾಗೇಶ್ ನಾನು ಇಲ್ಲಿಗೆ ಬಂದಿದ್ದು ಬೇರೆ ಕೆಲಸಕ್ಕೆ, ಅದನ್ನು ಬಿಟ್ಟು ನನ್ನನ್ನು ಏನೂ ಕೇಳಬೇಡಿ. ನನ್ನ ಟೈಂ ವೇಸ್ಟ್ ಮಾಡಬೇಡಿ ಎಂದು ಕೋಪಗೊಂಡಿದ್ದಾರೆ. 

ಹೊಸ ಹೊಸ ಯೋಜನೆಗಳಲ್ಲಿ ನನ್ನ ಒಬ್ಬನ ತೀರ್ಮಾನ ಇರುವುದಿಲ್ಲ. ಸಿಎಂ ಜೊತೆ ಚರ್ಚಿಸಿಯೇ ಯೋಜನೆ ಜಾರಿಗೊಳಿಸುತ್ತೇನೆ ಎಂದು ಸಚಿವ ನಾಗೇಶ್ ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ದಿನಗಳ ಹಿಂದಷ್ಟೇ ಮನೆ ಮನೆಗೆ ಎಣ್ಣೆ ಸರಬರಾಜು ಮಾಡಲಾಗುವುದು ಎಂದು ಹೇಳಿ ತೀವ್ರ ವಿರೋಧ ಎದುರಿಸಿದ್ದು,  ಬಳಿಕ ಈ ಯೋಜನೆಯನ್ನು ವಾಪಸ್ ಪಡೆದಿದ್ದರು. ಈ ಸಂಬಂಧ ಎಲ್ಲೆಡೆ ಸಚಿವರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗಿ ಪ್ರತಿಭಟನೆಗಳನ್ನು ನಡೆಸಲಾಗಿತ್ತು.