ಚನ್ನರಾಯಪಟ್ಟಣ [ಮಾ.01]:  ಪಟ್ಟಣದಲ್ಲಿ ಇರುವ ತಮ್ಮ ಅತ್ತೆ, ಮಾವನ ನಿವಾಸಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಅವರ ಆಶೀರ್ವಾದ ಪಡೆದು ಕೆಲ ಹೊತ್ತು ಕುಶಲೋಪರಿ ಚರ್ಚೆ ಮಾಡಿದರು. ಗಾಯಿತ್ರಿ ಬಡಾವಣೆಯಲ್ಲಿರುವ ತಮ್ಮ ಅತ್ತೆ ಜಯಮ್ಮ, ಮಾವ ಎಸ್.ಎಂ. ರಂಗಪ್ಪನವರ (ಪತ್ನಿಯ ತಂದೆ-ತಾಯಿ) ಮನೆಗೆ ಭೇಟಿ ನೀಡಿ ಅವರ ಅಶೀರ್ವಾದ ಪಡೆದರು. 

ಗೋಪಾಲಯ್ಯನವರ ಪತ್ನಿ ಹೇಮಲತಾ ಅವರು ಜಯಮ್ಮ ಮತ್ತು ರಂಗಪ್ಪನವರ ಪುತ್ರಿಯಾಗಿದ್ದು, ಇವರು ಮೂಲತಃ ತಾಲೂಕಿನ ಶ್ರವಣಬೆಳಗೊಳದವರಾಗಿದ್ದಾರೆ. ಸದ್ಯ ಹೇಮಲತಾ ಅವರ ತಂದೆ, ತಾಯಿ ಪಟ್ಟಣದಲ್ಲಿ ವಾಸವಿದ್ದಾರೆ. ಶುಕ್ರವಾರ ರಾತ್ರಿ ಆಗಮಿಸಿದ ಸಚಿವರನ್ನು ಆರತಿ ಬೆಳಗಿ ಬರ ಮಾಡಿಕೊಳ್ಳಲಾಯಿತ್ತು. ನಂತರ ಹಿರಿಯರ ಅಶೀರ್ವಾದ ಪಡೆದು ಆರೋಗ್ಯ ವಿಚಾರಿಸಿ ಅವರೊಂದಿಗೆ ಕೆಲಕಾಲ ಕುಶಲೋಪರಿ ಮಾತನಾಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಮಾತನಾಡಿದ ಸಚಿವರು, ನನ್ನ ಪತ್ನಿಯ ಸಂಬಂಧಿಕರು ಪಟ್ಟಣದಲ್ಲಿದ್ದು, ಬೆಳಗ್ಗೆ  ಭೇಟಿ ಮಾಡಿ ಆಶೀರ್ವಾದ ಪಡೆಯಬೇಕಿತ್ತು. ಸಂಜೆ ಬರುವ ತೀರ್ಮಾನ ಮಾಡಿ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಭೇಟಿ ನೀಡಿದ್ದೇನೆ ಎಂದರು. 

ಗೋಪಾಲಯ್ಯನವರ ಪತ್ನಿ ಹೇಮಲತಾ ಅವರ ಅಣ್ಣಂದಿರಾದ ಎಸ್.ಆರ್.ಶೇಖರ್, ಎಸ್.ಆರ್. ರಮೇಶ್, ನಾಗರತ್ನ, ಮಮತಾ, ಮಂಜೇಗೌಡ, ಮುಖಂಡರಾದ ಎಚ್. ಎಸ್. ಶ್ರೀಕಂಠಪ್ಪ, ಅನಂದ್ ಕುಮಾರ್, ವೆಂಕಟೇಶ್, ಜೆ.ಎಸ್. ಜಯರಾಂ, ಸೇರಿ ಇತರರು ಇದ್ದರು.