ಕಲ್ಯಾಣ ಮಂದಿರವನ್ನು ಕೋವಿಡ್ ಕೇರ್ ಸೆಂಟರ್ ಆಗಿಸಿದ ಮುಂದಾದ ಈಶ್ವರಪ್ಪ
- ಕಲ್ಯಾಣ ಮಂದಿರವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲು ಮುಂದಾದ ಈಶ್ವರಪ್ಪ
- ಶುಭಮಂಗಳ ಸಮುದಾಯ ಭವನದಲ್ಲಿ ಸುಮಾರು 100 ಹಾಸಿಗೆ ಅಳವಡಿಸಲು ಸಿದ್ಧತೆ
- ಕೊವಿಡ್ ಲಕ್ಷಣಗಳಿಲ್ಲದೆ, ಪಾಸಿಟಿವ್ ಬಂದವರಿಗೆ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿದವರಿಗೆ ಇಲ್ಲಿ ತಾತ್ಕಾಲಿಕವಾಗಿ ಬೆಡ್ ವ್ಯವಸ್ಥೆ
ಶಿವಮೊಗ್ಗ (ಮೇ.18): ಹೆಚ್ಚುತ್ತಿರುವ ಕೊರೋನಾ ರೋಗಿಗಳು ಮತ್ತು ಎಲ್ಲರಿಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಟ್ರಸ್ಟ್‌ನ ಆಡಳಿತದಲ್ಲಿರುವ ಶುಭ ಮಂಗಳ ಕಲ್ಯಾಣ ಮಂದಿರವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಯಿಸಲು ಮುಂದಾಗಿದ್ದಾರೆ.
ಈಗಾಗಲೇ ಶುಭಮಂಗಳ ಸಮುದಾಯ ಭವನದಲ್ಲಿ ಸುಮಾರು 100 ಹಾಸಿಗೆಗಳನ್ನು ಸಿದ್ಧಪಡಿಸುವ ಕಾರ್ಯದ ಉಸ್ತುವಾರಿಯನ್ನು ಸಚಿವ ಈಶ್ವರಪ್ಪ ಅವರು ತಾವೇ ವಹಿಸಿಕೊಂಡಿದ್ದಾರೆ. ಪುತ್ರ ಕೆ.ಇ.ಕಾಂತೇಶ್ ಇದಕ್ಕೆ ಜೊತೆಯಾಗಿದ್ದಾರೆ.
'10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ'?
ಕೊವಿಡ್ ಲಕ್ಷಣಗಳಿಲ್ಲದೆ, ಪಾಸಿಟಿವ್ ಬಂದವರಿಗೆ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿದವರಿಗೆ ಇಲ್ಲಿ ತಾತ್ಕಾಲಿಕವಾಗಿ ಬೆಡ್ ವ್ಯವಸ್ಥೆ ಮಾಡಲಾಗುತ್ತದೆ. ರೋಗಿಗಳು ತಮ್ಮ ಮನೆಯಿಂದ ಬಟ್ಟೆತಂದರೆ ಸಾಕು. ಉಳಿದಂತೆ ಹಾಸಿಗೆ, ಹೊದಿಕೆ, ಪೇಸ್ಟ್, ಬ್ರಶ್, ಸೋಪು, ಶಾಂಪೂ ಸೇರಿದಂತೆ ಕಾಲಕಾಲಕ್ಕೆ ಬಿಸಿಯೂಟ, ಉಪಹಾರ, ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತದೆ.
ಈ ಸೌಲಭ್ಯಗಳು ಸಂಪೂರ್ಣ ಉಚಿತವಾಗಿರುತ್ತದೆ. ಮೆಟ್ರೋ ಆಸ್ಪತ್ರೆಯ ಸಹಕಾರವಿದೆ. ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ಪ್ರತಿದಿನ 3 ಪಾಳಿಯಲ್ಲಿ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ಮತ್ತು ಧೈರ್ಯ ತುಂಬುವ ಸಹಾಯ ಮಾಡುವ ಎಲ್ಲಾ ಕೆಲಸಗಳು ಇಲ್ಲಿ ನಡೆಯಲಿವೆ