ಐದು ವರ್ಷ ಕೋಮಾದಲ್ಲಿದ್ದ ಟ್ರಾಮಾ ಕೇರ್‌, ಸೂಪರ್‌ ಸ್ಪೇಷಾಲಿಟಿ, ತಾಯಿ- ಮಕ್ಕಳ ಆಸ್ಪತ್ರೆಗೆ ಮರುಜೀವ: ಡಾ. ಶರಣಪ್ರಕಾಶ ಪಾಟೀಲ್‌

ಕಲಬುರಗಿ(ಜು.10): ರಾಜ್ಯದ ಕಾಂಗ್ರೆಸ್‌ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಕಲಬುರಗಿಗೆ ಸಂಬಂಧಪಟ್ಟಂತೆ ಕಳೆದ 2017- 18ರಲ್ಲೇ ಘೋಷಣೆಯಾಗಿದ್ದ ಹಾಗೂ ಮಧ್ಯದಲ್ಲಿ ಬಿಜೆಪಿ ಸರ್ಕಾರದ 5 ವರ್ಷ ಅವಧಿಯಲ್ಲಿ ಕೋಮಾದಲ್ಲಿದ್ದ ಬಹುಮಖ್ಯ ಆಸ್ಪತ್ರೆ ಯೋಜನೆಗಳಿಗೆ ಈ ಬಾರಿ ಬಜೆಟ್‌ನಲ್ಲಿ ಮರುಜೀವ ನೀಡಲಾಗಿದೆ. ಬಹುಕೋಟಿ ಮೊತ್ತದ ಈ ಯೋಜನೆಗಳನ್ನು ಇನ್ನಾರು ತಿಂಗಳಲ್ಲಿ ಅನುಷ್ಠಾನಕ್ಕೆ ತರುವ ಯೋಚನೆ ತಮ್ಮದಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಕಂದಾಯ ವಿಭಾಗಕ್ಕೊಂದು ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಮಾಡಬೆಕೆಂದು 2017 ರಲ್ಲೇ ಘೋಷಣೆ ಮಾಡಲಾಗಿದ್ದರೂ ನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆ ಹಾಗೇ ಕೈಬಿಟ್ಟಿತ್ತು. ಈ ಬಜೆಟ್‌ನಲ್ಲಿ ಕಲಬುರಗಿ, ಬೆಳಗಾವಿ ಹಾಗೂ ಮೈಸೂರಲ್ಲಿ 155 ಕೋಟಿ ರು ವೆಚ್ಚದಲ್ಲಿ ಸೂಪರೇಏ ಸ್ಪೇಶಾಲಿಟಿ ಆಸ್ಪತ್ರೆ ತಲೆ ಎತ್ತಲಿವೆ. ಈಗಾಗಲೇ ಕಲಬುರಗಿ ಆಸ್ಪತ್ರೆಗೆ ವಿಶೇಷಾಧಿಕಾರಿ ನೇಮಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶರಣಪ್ರಕಾಶ ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆಯು ನ್ಯೂರೋ, ಆರ್ಥೋ, ಪಿಡಿಯಾಟ್ರಿಕ್‌, ಗ್ಯಾಸ್ಟೊ್ರೕ, ಪ್ಲಿಸ್ಟಿಕ್‌ ಸರ್ಜರಿ ಸೇರಿದಂತೆ 8 ವಿಭಾಗಗಳನ್ನು ಹೊಂದಿರಲಿದೆ. ಇದಿರಂದ ಬಡವರಿಗೆ ಉತ್ಕೃಷ್ಟಚಿಕಿತ್ಸೆ ಹತ್ತಿರವಾಗಲಿದೆ ಎಂದರು.

ಅನ್ಯ ಇಲಾಖೆಗಳಿಗೆ ಹೋಗಿರುವ ಪಾಲಿಕೆ ಸಿಬ್ಬಂದಿ ನಿಯೋಜನೆ ತಕ್ಷಣ ರದ್ದು: ಪ್ರಿಯಾಂಕ್‌ ಖರ್ಗೆ

ಕಲಬುರಗಿ ಹಾಗೂ ಮೈಸೂರಲ್ಲಿ ಟ್ರಾಮಾ ಕೇರ್‌ ಸೆಂಟರ್‌ ಆರಂಭಿಸಬೇಕೆಂದು 2018 ರಲ್ಲೇ ಘೋಷಣೆ ಮಾಡಿದ್ದರೂ ಬಿಜೆಪಿ ಸರ್ಕಾರ ಇದನ್ನು ಅಲಕ್ಷಿಸಿತ್ತು. ಇದೀಗ ಮತ್ತೆ ನಾವು ಈ ಯೋಜನೆಗೆ 30 ಕೋಟಿ ರು ಹೆಚ್ಚುವರಿ ಹಣ ಕೊಟ್ಟು ಸೆಂಟರ್‌ 3 ತಿಂಗಳಲ್ಲಿ ಆರಂಭಿಸುತ್ತಿದ್ದೇವೆಂದರು. ಜಿಮ್ಸ್‌ ವೈದ್ಯವಿದ್ಯಾಲಯದ ಬೋಧನಾ ಆಸ್ಪತ್ರೆಯಲ್ಲೇ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ವಿಶೇಷ ಸುಟ್ಟಗಾಯಗಳ ಚಿಕಿತ್ಸಾ ವಾರ್ಡ್‌ ತೆರೆಯಲಾಗುತ್ತಿದೆ.

ಕಲಬುರಗಿ ಸೇರಿದಂತೆ ಬೆಳಗಾವಿ, ದಾವಣಗೇರೆ, ಹುಬ್ಬಳ್ಳಿ, ದಕ್ಷಿಣ ಕನ್ನಡ, ಮೇಸೂರು ಇಲ್ಲಿ ರಾಜೀವಗಾಂಧಿ ಆರೋಗ್ಯ ವಿವಿ ಸಹಯೋಗದಲ್ಲಿ ಆಧುನಿಕ ಕೌಶಲ್ಯ ಪ್ರಯೋಗಾಲಯ ಮತ್ತು ಸಶೋಧನಾ ಕೇಂದ್ರ ತೆರೆಯಲಾಗುತ್ತಿದೆ. ಪ್ರತಿ ಘಟಕಕ್ಕೆ 30 ಕೋಟಿ ರು ವೆಚ್ಚ ಮಾಡಲಾಗುತ್ತಿದೆ. ಇದಲ್ಲದೆ ಅಲೈಡ್‌ ಸೈನ್ಸ್‌ ಕಾಲೇಜು, ಕಲಬುರಗಿ ಮೈಸೂರಲ್ಲಿ ಆರಂಭಿಸಲಾಗುತ್ತಿದೆ.

ಕಲಬುರಗಿಯಲ್ಲಿ 2018 ರಲ್ಲೇ ಘೋಷಿಸಲಾಗಿದ್ದು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವಾಗಿದ್ದರೂ ಸಹ ಹಿಂದಿನ ಬಿಜೆಪಿ ಸರ್ಕಾರ ಹಾಗೇ ಯೋಜನೆ ಅಲಕ್ಷಿಸಿತ್ತು. ತಾವಿದಕ್ಕೆ ಮತ್ತೆ ಮರುಜೀವ ನೀಡುತ್ತಿರೋದಾಗಿ ಹೇಳಿದರಲ್ಲದೆ ಈ ಯೋಜನೆಗೆ 70 ಕೋಟಿ ರು ಹಣ ಮೀಸಲಿಡಲಾಗಿದೆ ಎಂದರು.

ಕಲಬುರಗಿ, ರಾಯಚೂರು, ಬೆಂಗಳೂರು, ಹುಬ್ಬಳ್ಳಿ, ಬೆಂಗಳೂರು, ಮೈಸೂರುಗಳಲ್ಲಿ ನಿಮ್ಹಾನ್ಸ್‌ ನೆರವಿನ ಹಬ್‌ ಆಂಡ್‌ ಸ್ಪೋಕ್‌ ಆಧಾರದಲ್ಲಿ ಆನ್‌ಲೈನ್‌ ಹೃದ್ರೋಗ ಸಲಹಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಚಿತ್ರದುರ್ಗದಲ್ಲಿ ವೈದ್ಯಕೀಯ ವಿದ್ಯಾಲಯ ಇದೇ ವರ್ಷದಿಂದ ಆರಂಭಿಸುವ ಮೂಲಕ 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ ಸಾಗಿದೆ. ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯ ಸುವರ್ಣ ಸಂಭ್ರಮದ ಈ ಅವಧಿಯಲ್ಲಿ ಕಲಬುರಗಿ ಪೆರಿಫೆರಲ್‌ ಕ್ಯಾನವ್ಸರ್‌ ಕೇಂದ್ರದ ಮೇಲ್ದರ್ಜೆಗೇರಿಸಲು ಒಂದು ಕೋಟಿ ರು ಮೀಸಲಿಡಲಾಗಿದೆ ಎಂದರು.

ಮಳಖೇಡ ಕಾಗಿಣಾ ಸೇತುವೆ ಕಾಮಗಾರಿಗೆ ವೇಗ

ಮಳಖೇಡ ಬಲಿ ಕಾಗಿಣಾ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಉಕಂಟುತ್ತ ಸಾಗಿರುವ ಬಗ್ಗೆ ಜನರಿಂದ ದೂರು ಬರುತ್ತಿವೆ. ಈ ಸೇತುವೆ ಕೆಲಸ ಗುತ್ತಿಗೆದಾರರ ಜೊತೆ ಮಾತನಾಡಿದ್ದೇನೆ. ಸರ್ಕಾರದ ಹಂತದಲ್ಲೂ ಈ ವಿಚಾರವಾಗಿ ಗಮನ ಸೆಳೆಯುವೆ. ಮುಂದಿನ 3 ತಿಂಗಳಲ್ಲಿ ಸೇತುವೆ ಕಾಮಗಾರಿ ಪೂ ರ್ಣಗೊಳ್ಳಲಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳ ಕಾರ್ಯಕ್ಷಮಕತೆ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಕ ಭಾಗದಲ್ಲಿ ಕಲಬುರಗಿಗೆ ಫೋಕಸ್‌ ಮಾಡ್ತಿಲ್ಲ, ಎಲ್ಲಾ ಜಿಲ್ಲೆಗಳ ಪ್ರಗತಿಗೆ ಸಮಾನ ಒತ್ತು ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮತ್ತೆ ಮುನ್ನಲೆಗೆ ಮೀಸಲಾತಿ ಹೋರಾಟ, ವೀರಶೈವ ಲಿಂಗಾಯತರ ಮೀಸಲಾತಿಗಾಗಿ ಮೋದಿ, ಶಾ ಭೇಟಿಗೂ ರೆಡಿ ಎಂದ ಶ್ರೀಗಳು

ಮೊದಲು ಕೆಲಸ ಮಾಡಿ ತೋರಿಸಿದ ಬಳಿಕ ಮಾತನಾಡುವ ಜಾಯಮಾನ ನನ್ನದಾಗಿದ್ದು, ನನ್ನ ರಾಜಕೀಯ ಗುರುಗಳಾದ ಮಲ್ಲಿಕಾರ್ಜುನ ಖರ್ಗೆಯವರು ಇಂಥದ್ದೊಂದು ಕಾರ್ಯಶೈಲಿ ಕಲಿಸಿಕೊಟ್ಟಿದ್ದಾರೆ. ಯಾವುದೇ ಕೆಲಸವನ್ನು ಮಾಡಿದ ನಂತರ ಮಾತನಾಡಿದರೆ ಮಾತ್ರ ನಮಗೆ ಗೌರವ ಇರುತ್ತದೆಯೇ ಹೊರತು ಕೇವಲ ಮಾತನಾಡಿ ಕೆಲಸ ಮಾಡದೆ ಹೋದರೆ ಏನೂ ಪ್ರಯೋಜನವಿಲ್ಲ ಎಂದು ಖರ್ಗೆ ಸಾಹೇಬರು ನಮಗೆಲ್ಲರಿಗೂ ಪಾಠ ಕಲಿಸಿದ್ದಾರೆ. ಹೀಗಾಗಿ, ಅವರು ತೋರಿದ ದಾರಿಯಲ್ಲೇ ತಾವು ಸಾಗುತ್ತಿರೋದಾಗಿ ಹೇಳಿದರು.

ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌, ಡಾ.ಕಿರಣ ದೇಶಮುಖ, ಲಿಂಗರಾಜ ದ್ವಯರು, ಲತಾ ರಾಠೋಡ, ಮಹಾಂತೇಶ್‌ ಕವಲಗಿ, ಮಲ್ಲಿಕಾರ್ಜುನ ಪೂಜಾರಿ ಇದ್ದರು.