ಕೊರೋನಾ ವಿರುದ್ಧ ಹೋರಾಟ: ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಸುಧಾಕರ್ ಅಭಿನಂದನೆ
ಕೊರೋನಾ ನಿರ್ವಹಣೆಗೆ ಸರ್ಕಾರ ಮಾತ್ರವಲ್ಲದೇ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಆದ್ದರಿಂದ ವಿವಿಧ ಸಂಘ ಸಂಸ್ಥೆಗಳು ಕೊರೋನಾದ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದ ಸಚಿವ ಸುಧಾಕರ್
ಬೆಂಗಳೂರು(ನ.04): ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ರಾಜ್ಯದ ವಿವಿಧ ಅಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ, ವೈದ್ಯ ಸಿಬ್ಬಂದಿ ಮತ್ತು ಪಲ್ಸ್ ಅಕ್ಸಿಮೀಟರ್ ಗಳನ್ನು ಒದಗಿಸಿದ ಅಜೀಂ ಪ್ರೇಮ್ ಜಿ ಪ್ರತಿಷ್ಠಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೋನಾ ನಿರ್ವಹಣೆಗೆ ಸರ್ಕಾರ ಮಾತ್ರವಲ್ಲದೇ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಆದ್ದರಿಂದ ವಿವಿಧ ಸಂಘ ಸಂಸ್ಥೆಗಳು ಕೊರೋನಾದ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಮುಂದಾಗಬೇಕು ಎಂದು ಸುಧಾಕರ್ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
ಪ್ರೇಮ್ ಜಿ ಪ್ರತಿಷ್ಠಾನವು 150 ಹಾಸಿಗೆಗಳ ಸಾಮರ್ಥ್ಯದ ಚರಕ ಸೂಪರ್ ಸ್ಪೇಷಾಲಿಟಿ ಅಸ್ಪತ್ರೆಗೆ ’ಡಾಕ್ಟರ್ಸ್ ಫಾರ್ ಯು’ ತಂಡದಿಂದ ಸಿಬ್ಬಂದಿ ನೆರವನ್ನು ನೀಡಿದೆ. ಕೋವಿಡ್ ಪರೀಕ್ಷೆಗಳನ್ನು ನಡೆಸಿ ಐಸಿಎಂಆರ್ ಪ್ರಮಾಣಿತ ಫಲಿತಾಂಶವನ್ನು ನೀಡುತ್ತಿದೆ. ಹಾಗೆಯೇ ಕೊರೋನಾ ಪರೀಕ್ಷೆ ಅಗತ್ಯವಾದ ಐದು ಲಿಕ್ವಿಡ್ ಹ್ಯಾಡ್ಲಿಂಗ್ ಸಿಸ್ಟಮ…ಗಳನ್ನು ಬಿಎಂಸಿಆರ್‌ಐ, ನಿಮ್ಹಾನ್ಸ್, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳಿಗೆ ನೀಡಿದೆ. 3 ಆರ್‌ಟಿಪಿಸಿಆರ್ ಯಂತ್ರ, 4 ಆರ್‌ಎನ್‌ಎ ತೆಗೆಯುವ ಯಂತ್ರಗಳನ್ನು ಬಿಎಂಸಿಆರ್‍ಐ, ಬೌರಿಂಗ್ ಮತ್ತು ಲೇಡಿ ಕರ್ಜನ್ ಅಸ್ಪತ್ರೆಗೆ ನೀಡಿದೆ.
ಶುಭ ಸಸುದ್ದಿ: ಖಾಲಿಯಾಗ್ತಿದೆ ಕಿಮ್ಸ್‌ನ ಕೊರೋನಾ ವಾರ್ಡ್..!
ಕೊರೋನಾ ಪೀಡಿತರಿಗೆ ಉಸಿರಾಟ ಸಮಸ್ಯೆ ಪತ್ತೆ ಹಚ್ಚಲು ನೆರವಾಗುವ ದೃಷ್ಟಿಯಿಂದ ಪ್ರೇಮ್ ಜಿ ಪ್ರತಿಷ್ಠಾನವು ಉಚಿತವಾಗಿ ಹಂಚಲು ಬಿಬಿಎಂಪಿಯ ಪೂರ್ವ ವಲಯಕ್ಕೆ 800, ಮಹದೇವಪುರಕ್ಕೆ 500, ಬೊಮ್ಮನಹಳ್ಳಿಗೆ 800 ಮತ್ತು ದಾಸರಹಳ್ಳಿಗೆ 655 ಸೇರಿ ಒಟ್ಟು 4,755 ಪಲ್ಸ್ ಆಕ್ಸಿಮೀಟರ್‌ಗಳನ್ನು ಒದಗಿಸಿದೆ.
ಕೊರೋನಾ ವಾರಿಯರ್ ಡಾ. ಬಾಲಾಜಿಗೆ ನೆರವು
ನೂರಕ್ಕೂ ಅಧಿಕ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊರೋನಾ ಸೋಂಕಿಗೊಳಗಾಗಿ ಗಂಭೀರ ಆರೋಗ್ಯ ಸ್ಥಿತಿ ಎದುರಿಸುತ್ತಿರುವ ಮೂತ್ರಪಿಂಡ ತಜ್ಞ ಡಾ. ಬಾಲಾಜಿ ಪ್ರಸಾದ್ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ .25 ಲಕ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. ಬಾಲಾಜಿ ಪ್ರಸಾದ್ ಅವರ ಶ್ವಾಸಕೋಶಕ್ಕೆ ಹಾನಿಯಾಗಿದ್ದು ಶ್ವಾಸಕೋಶ ಕಸಿ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಅವರು ಶೇಷಾದ್ರಿಪುರ ಅಪೋಲೊ ಅಸ್ಪತ್ರೆಯಲ್ಲಿ 37 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು 26 ದಿನಗಳಿಂದ ವೆಂಟಿಲೇಟರ್ ನಲ್ಲಿದ್ದಾರೆ.