ಹಿರಿಯೂರು: ದಲಿತರ ಮೇಲೆ ಹಲ್ಲೆ, ಸಚಿವ ಡಿ. ಸುಧಾಕರ್‌ ಮಧ್ಯಪ್ರವೇಶ

ಅರೆಬೆತ್ತಲೆ ಮೆರವಣಿಗೆ ನಡೆಸಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು, ಅಡವಿರಾಮಜೋಗಿಹಳ್ಳಿ ಘಟನೆ ಹಿನ್ನೆಲೆ ನಡೆದ ಮೆರವಣಿಗೆ ವೇಳೆ ಪೊಲೀಸರು-ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ. 

Minister D Sudhakar Intervenes in Protest For Assault on Dalit in Chitradurga grg

ಹಿರಿಯೂರು(ಆ.13): ಹಿರಿಯೂರು ತಾಲೂಕಿನ ಅಡವಿರಾಮಜೋಗಿಹಳ್ಳಿಯಲ್ಲಿ ನಡೆದಿದೆ ಎನ್ನಲಾದ ದಲಿತರ ಮೇಲಿನ ಹಲ್ಲೆ ಪ್ರಕರಣಕ್ಕೆ ನಡೆಯುತ್ತಿದ್ದ ಪ್ರತಿಭಟನೆ ತಣ್ಣಗಾಗಿದೆ. ಜಿಲ್ಲಾ ಉಸ್ತವಾರಿ ಸಚಿವ ಡಿ.ಸುಧಾಕರ್‌ ಶನಿವಾರ ಧರಣಿ ನಿರತರ ಬಳಿಗೆ ತೆರಳಿ ಮಾತುಕತೆ ನಡೆಸಿದ ನಂತರ ದಲಿತ ಮುಖಂಡರು ಪ್ರತಿಭಟನೆ ವಾಪಾಸ್‌ ಪಡೆದರು.

ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ಬೆಳಿಗ್ಗೆ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆ ಮುಂಭಾಗದ ಅಂಬೇಡ್ಕರ್‌ ಪ್ರತಿಮೆ ಬಳಿಯಿಂದ ಅರೆಬೆತ್ತಲೆ ಹೊರಟ ಪ್ರತಿಭಟನಾಕಾರರು ತಾಲೂಕು ಕಚೇರಿ ಬಳಿಗೆ ಸಾಗಿದರು.

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಕಾರು ಡಿಕ್ಕಿ, ಐವರ ದುರ್ಮರಣ

ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿಕ ಚಕಮಕಿ ನಡೆಯಿತು. ಒಂದು ಹಂತದಲ್ಲಿ ತಳ್ಳಾಟಗಳೂ ದಾಖಲಾದವು. ನ್ಯಾಯಯುತವಾಗಿ ಪ್ರತಿಭಟನೆ ಮಾಡಲು ಸಹ ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಳೆದ ಮೂರು ದಿನಗಳಿಂದ ಆ ಊರಿನ ಜನರ ಭಯ ಹೋಗಲಾಡಿಸಿ, ದಲಿತರಿಗೆ ರಕ್ಷಣೆ ನೀಡಿ ಹಲ್ಲೆ ನಡೆಸಿದವರನ್ನು ಬಂಧಿಸಿ ಎಂದು ಶಾಂತಿಯುತವಾಗಿ ಧರಣಿ ಕುಳಿತಿದ್ದೇವೆ. ಆದರೆ ಇದುವರೆಗೂ ಒಬ್ಬೇ ಒಬ್ಬನನ್ನು ಬಂಧಿಸುವ ಕೆಲಸವಾಗಿಲ್ಲ. ಇಲ್ಲಿವರೆಗೂ ಬರೀ ಆಶ್ವಾಸನೆ ಕೊಡುವುದು, ಪ್ರತಿಭಟನಾಕಾರರ ದಿಕ್ಕು ತಪ್ಪಿಸುವ ಕಾರ್ಯಗಳಾಗುತ್ತಿವೆಯೇ ಹೊರತು ಹಲ್ಲೆಗೊಳಗಾದ ದಲಿತರಿಗೆ ಸಮಾಧಾನವಾಗುವಂತಹ ಯಾವ ನಿರ್ಧಾರಗಳು ನಡೆದಿಲ್ಲ ಎಂದು ಆರೋಪಿಸಿದರು.

ನಮ್ಮ ಧರಣಿಯ ಮುಂದುವರೆದ ಭಾಗವಾಗಿ ಅಂಬೇಡ್ಕರ್‌ ಪ್ರತಿಮೆ ಬಳಿಯಿಂದ ಅರೆಬೆತ್ತಲೆ ಮೆರವಣಿಗೆ ಬಂದಿದ್ದೇವೆ. ಆದರೆ ಕಾನೂನು ಮೀರದೆ ಪ್ರತಿಭಟಿಸಲು ಸಹ ಅವಕಾಶ ನೀಡದಿದ್ದರೆ ಹೇಗೆ ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆಗೆ ಧರಣಿ ನಿರತರ ಬಳಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್‌ ತಪ್ಪಿತಸ್ಥರಿಗೆ ಶಿಕ್ಷೆ ಆಗಿಯೇ ಆಗುತ್ತದೆ. ನಾನು ಮತ್ತು ನಮ್ಮ ಸರ್ಕಾರ ಸದಾ ದಲಿತರ ಹಿತ ಕಾಯುವ ಕೆಲಸ ಮಾಡಿದ್ದೇವೆ. ನೊಂದವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ನಮ್ಮದು ಎಂದು ಪ್ರತಿಭಟನಾಕಾರರ ಮನವೊಲಿಸಿದರು. ಪ್ರತಿಭಟನೆಯನ್ನು ಹಿಂಪಡೆಯಲು ವಿನಂತಿಸಿದರು.

ಸಚಿವರ ಮಾತಿಗೆ ಒಪ್ಪಿದ ದಲಿತಪರ ಒಕ್ಕೂಟದ ಸದಸ್ಯರು ಪ್ರತಿಭಟನೆ ಹಿಂಪಡೆದರು. ದಲಿತಪರ ಒಕ್ಕೂಟದ ತಾಲೂಕು ಅಧ್ಯಕ್ಷ ತಿಮ್ಮರಾಜು, ಗೌರವಾಧ್ಯಕ್ಷ ಜೀವೇಶ್‌, ಮುಖಂಡರಾದ ಶ್ರೀನಿವಾಸ್‌ ಮೂರ್ತಿ, ರಘುನಾಥ್‌, ಘಾಚ್‌ ರವಿ, ಹೆಗ್ಗೆರೆ ಮಂಜುನಾಥ್‌, ಘಾಟ್‌ ಚಂದ್ರಪ್ಪ, ಶ್ರೀಧರ್‌, ವೀಣಾ, ಕರ್ಣ ಕುಮಾರ್‌, ಹರ್ತಿಕೋಟೆ ಬಾಬು, ಮಂಜುನಾಥ್‌, ಗಿರೀಶ್‌ , ರಂಗಸ್ವಾಮಿ, ಕೇಶವಮೂರ್ತಿ,ರಾಘವೇಂದ್ರ, ಓಂಕಾರ್‌ ಮಟ್ಟಿ ಮುಂತಾದವರು ಹಾಜರಿದ್ದರು.

ಚಿತ್ರದುರ್ಗ ಜಿಲ್ಲೆಯ ಮೋರಾರ್ಜಿ ದೇಸಾಯಿ ವಸತಿ ಶಾಲೆ ಊಟದಲ್ಲಿ ಅವ್ಯವಹಾರ..!

ದಲಿತರ ಮೇಲೆ ಹಲ್ಲೆ ನಡೆಸಿದವರ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳು ಶನಿವಾರ ಹಿರಿಯೂರಿನಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದವು. ಪ್ರತಿಭಟನಾ ನಿರತರ ಬಳಿಗೆ ಆಗಮಿಸಿದ ಜಿಲ್ಲಾ ಉಸ್ತವಾರಿ ಸಚಿವರಿಗೆ ದಲಿತಪರ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದ ನಂತರ ಹೋರಾಟ ವಾಪಾಸ್‌ ಪಡೆದರು.

ಅಡವಿರಾಮಜೋಗಿಹಳ್ಳಿ ಗ್ರಾಮದ ಮಾದಿಗ ಜನಾಂಗದ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಡೆಸುತ್ತಿದ್ದ ಅರೆಬೆತ್ತಲೆ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಏಕಾಏಕಿ ನನ್ನ ಮೇಲೆ ನುಗ್ಗಿ ಬಂದು ಎಳೆದಾಡಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯಕ್ಷಮತೆ ತೋರದೆ ಹೋರಾಟ ಹತ್ತಿಕ್ಕುವ ಕಾರ್ಯ ನಡೆಯುತ್ತಿದೆ ಎಂದು ದಲಿತಸೇನೆ ಮಹಾನಾಯಕ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios