'ಟಿಪ್ಪು ಜಯಂತಿ ಮಾಡೋರು ಹಿಂದಿ ಬಗ್ಗೆ ವಿರೋಧ ಮಾಡ್ತಾರೆ'
ಟಿಪ್ಪು ಜಯಂತಿ ಆಚರಿಸುವ ಕಾಂಗ್ರೆಸಿನವರು ಹಿಂದಿಯನ್ನು ಮಾತ್ರ ವಿರೋಧಿಸುತ್ತಾರೆ ಹೀಗೆಂದು ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು (ಸೆ.17) : ಟಿಪ್ಪು ಜಯಂತಿ ಆಚರಣೆ ಮಾಡುವ ಕಾಂಗ್ರೆಸಿನವರು ಹಿಂದಿ ದಿವಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬಿಜೆಪಿ ಎಂದಿಗೂ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಕಾಂಗ್ರೆಸ್ ದಾಸ್ಯದ ನೆನಪಿಗಾಗಿ ಹೈದ್ರಾಬಾದ್ ಕರ್ನಾಟಕ ಎಂದೇ ಕರೆಯುತಿತ್ತು. ಆದರೆ ಬಿಜೆಪಿ ಕಲ್ಯಾಣ ಕರ್ನಾಟಕ ಎಂದು ಬದಲಾವಣೆ ಮಾಡಿತು ಎಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸಿದ್ದರಾಮಯ್ಯ ಉರ್ದು ದಿವಸ್ ಆಚರಣೆ ಮಾಡಿ ಬರುತ್ತಾರೆ. ಆದರೆ ಹಿಂದಿ ದಿವಸ್ ಆಚರಣೆಗೆ ವಿರೋಧ ಮಾಡ್ತಾರೆ. ಇದು ನಾಟಕ ಅಲ್ಲವೇ. ಕಾಂಗ್ರೆಸಿಗೆ ಕನ್ನಡ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಗಿಣಿ, ಸಂಜನಾ ಡ್ರಗ್ ಕಿಂಗ್ ಪಿನ್‌ಗಳಲ್ಲ : ಸಿ.ಟಿ ರವಿ ...
ಕನ್ನಡದ ಉಳಿವಿಗಾಗಿ ಮಾಡುವ ಎಲ್ಲಾ ಪ್ರಯತ್ನಕ್ಕೂ ನಮ್ಮ ಬೆಂಬಲವಿದೆ. ಆದರೆ ಕಾಂಗ್ರೆಸಿನವರು ಈಗ ಮಾಡುತ್ತಿರುವುದು ಕನ್ನಡದ ಉಳಿವಿಗೋ ಅಥವಾ ಹಿಂದಿ ದ್ವೇಷಕ್ಕೀ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದಿ ಕಾರಣಕ್ಕಾಗಿ ರಾಜ್ಯದ ಯಾವ ಕನ್ನಡ ಶಾಲೆಯೂ ಬಂದ್ ಆಗಿಲ್ಲ. ಇದಕ್ಕೆ ನಾನು ಸಾವಿರ ಉದಾಹರಣೆ ಕೊಡುತ್ತೇನೆ. ಆದರೆ ಇಂಗ್ಲೀಷ್ ಕಾರಣಕ್ಕೆ ಸಾವಿರಾರು ಶಾಲೆ ಬಂದ್ ಆಗಿವೆ ಎಂದರು.
ಇಂಗ್ಲಿಷ್ ಓಕೆ, ಹಿಂದಿ ದ್ವೇಷಿ ನಿಮ್ಮ ಉದ್ದೇಶವಾ...! ಹಿಂದಿಯನ್ನ ವಿರೋಧಿಸುವವರು ಸಂವಿಧಾನ, ಅಂಬೇಡ್ಕರ್‍ರನ್ನ ವಿರೋಧ ಮಾಡ್ತಾರೆ .ಅವತ್ತು ಒಪ್ಪಿಕೊಂಡ ಕಾಂಗ್ರೆಸ್ ಇವತ್ತು ಬಣ್ಣ ಬದಲಿಸಿದೆ ಅಂದ್ರೆ ಅದು ಗೋಸುಂಬೆತನ ಎಂದು ಸಿ ಟಿ ರವಿ ವಾಗ್ದಾಳಿ ನಡೆಸಿದರು.