Asianet Suvarna News Asianet Suvarna News

'ಜಮೀರ್‌ ಸಿಎಂ ಮನೆ ವಾಚ್‌ಮ್ಯಾನ್‌ ಆಗ್ಲಿ'

ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯ ವಾಚ್ ಮನೆ ಆಗಲಿ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ. 

Minister CT Ravi Slams Congress Leader Zameer Ahmed
Author
Bengaluru, First Published Sep 13, 2020, 3:42 PM IST

ಚಿಕ್ಕಮಗಳೂರು (ಸೆ.13): ಶಾಸಕ ಜಮೀರ್‌ ಅಹಮದ್‌ ನಿಜವಾಗಿಯೂ ಮಾತಿಗೆ ತಕ್ಕಂತೆ ನಡೆದುಕೊಳ್ಳುವುದಾದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮನೆ ಮುಂದೆ ವಾಚ್‌ಮ್ಯಾನ್‌ ಆಗ್ಲಿ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ಡ್ರಗ್ಸ್‌ ಮಾಫಿಯಾದಲ್ಲಿ ತಾವು ಭಾಗಿಯಾಗಿರುವುದು ಸಾಬೀತಾದರೆ ತಮ್ಮ ಆಸ್ತಿಯನ್ನು ಬರೆದುಕೊಡುವುದಾಗಿ ಹೇಳಿರುವ ಜಮೀರ್‌ ಅಹಮದ್‌ ಹೇಳಿಕೆಗೆ ಸಚಿವರು ಶನಿವಾರ ಪ್ರತಿಕ್ರಿಯೆ ನೀಡಿದರು.

'200 ಬಾಂಗ್ಲಾ ದೇಶಿಯರನ್ನು 8-10 ಬಸ್‌ಗಳಲ್ಲಿ ಕರೆದೊಯ್ದಿದ್ದ ಜಮೀರ್‌' ...

ಜಮೀರ್‌ ಅಹಮದ್‌ ಅವರು ತಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದೆ ಆಗಿದ್ದರೆ ಇಷ್ಟುಹೊತ್ತಿಗೆ ವಾಚ್‌ಮ್ಯಾನ್‌ ಆಗಬೇಕಾಗಿತ್ತು ಎಂದ ಸಿ.ಟಿ. ರವಿ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗೋದಿಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರ ಮನೆಯ ವಾಚ್‌ಮ್ಯಾನ್‌ ಆಗುತ್ತೇನೆಂದು ಹೇಳಿದ್ದರು. ಹಾಗೆ ಆಗದೇ ಇರುವವರು ಆಸ್ತಿ ಬರೆದು ಕೊಡ್ತರಾ? ಅವರ ಆಸ್ತಿ ಅಕ್ರಮ ಆಗಿದ್ದರೆ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅವರೇನು ಬರೆದುಕೊಡೋದು. ಅವರ ರಾಜಕೀಯ ಹೇಳಿಕೆ ಬಗ್ಗೆ ನಾವು, ರಾಜ್ಯದ ಜನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

ಮಾಹಿತಿ ನೀಡಬೇಕು:

ಡ್ರಗ್ಸ್‌ ದಂಧೆಗೆ ಸಂಬಂಧಿಸಿದಂತೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪೊಲೀಸರಿಗೆ ನೀಡಬೇಕು. ಮೊದಲು ಮಾದಕ ದ್ರವ್ಯದ ಬಗ್ಗೆ ಮಾಹಿತಿ ನೀಡಿದರೆ ಮುಚ್ಚಿಹಾಕುತ್ತಾರೆ ಎಂದು ಯಾರೂ ನೀಡುತ್ತಿರಲಿಲ್ಲ. ಈಗ ನಮ್ಮ ಸರ್ಕಾರ ಮೊದಲ ಬಾರಿಗೆ ಇಷ್ಟುಗಂಭೀರವಾಗಿ ಡ್ರಗ್ಸ್‌ ಜಾಲವನ್ನು ಬೇರುಸಹಿತ ಕಿತ್ತು ಹಾಕಲು ವಿಶೇಷ ಪಡೆಯನ್ನು ರಚಿಸಿ, ತನಿಖೆ ನಡೆಸುತ್ತಿದೆ. ಡ್ರಗ್ಸ್‌ ದಂಧೆ, ಅಕ್ರಮ ಚಟುವಟಿಕೆ ಬಗ್ಗೆ ಯಾರಾರ‍ಯರ ಬಳಿ ಮಾಹಿತಿ ಇದೆಯೋ ಪೊಲೀಸರಿಗೆ ನೀಡಬೇಕು ಎಂದು ಹೇಳಿದರು.

ಡ್ರಗ್ಸ್‌, ಹವಾಲ, ಭಯೋತ್ಪಾದನೆ ನಂಟು, ಲವ್‌ ಜಿಹಾದಿ ಹೇಗೆ ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂಬುದರ ಬಗ್ಗೆ ಹೇಳಿದ್ದಾರೆ. ಸ್ನೇಹ, ಡ್ರಗ್ಸ್‌ ನಂತರ ಲವ್‌ ಜಿಹಾದ್‌ ಈ ಬಗ್ಗೆ ಗಂಭೀರವಾಗಿ ಆರೋಪ ಮಾಡಿದ್ದಾರೆ. ಈ ಎಲ್ಲಾ ಮುಖಗಳ ಬಗ್ಗೆ ತನಿಖೆಯಾಗಬೇಕು. ಪ್ರಮೋದ್‌ ಮುತಾಲಿಕ್‌, ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ಆಧಾರದಲ್ಲಿ ಹೊಸ ಆಯಾಮದಲ್ಲಿ ತನಿಖೆ ನಡೆಸಬೇಕಾಗಿದೆ ಎಂದು ಸಿ.ಟಿ. ರವಿ ಹೇಳಿದರು.

Follow Us:
Download App:
  • android
  • ios