ಹೆಚ್ಚೇನು ಓದದ ರೇವಣ್ಣಗೆ ಶಿಕ್ಷಣ ಅಂದ್ರೇನೆ ಗೊತ್ತಿಲ್ಲ: ಸಚಿವ ಅಶ್ವತ್ಥ
* ಪ್ರಶ್ನೆಪತ್ರಿಕೆ ರಚನೆ ಸಮಿತಿಯಲ್ಲಿರುವ ಪ್ರೊ.ನಾಗರಾಜ್ ವಿಚಾರಣೆ
* ಆರೋಪಿ ಸೌಮ್ಯಾಗೆ ಪಿಎಚ್‌ಡಿ ಗೈಡ್ ಕೂಡ ಆಗಿರುವ ನಾಗರಾಜ್
* ಸೌಮ್ಯಾ ಜತೆ ನಾಗರಾಜ್‌ರನ್ನು ಮೈಸೂರಿಗೆ ಕರೆದೊಯ್ದು ತಪಾಸಣೆ
ಹಾಸನ(ಏ.27): ಹೆಚ್ಚೇನು ಓದದ ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನೆಂದೇ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೋದನ್ನೇ ಶಿಕ್ಷಣ ಎಂದು ಅಂದುಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ(CN Ashwathnarayan) ಲೇವಡಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರನ್ನು(HD Devegowda) ಕಂಡರೆ ಎಲ್ಲರಿಗೂ ಅಪಾರ ಗೌರವವಿದೆ. ಕುಮಾರಣ್ಣ(HD Kumaraswamy), ರೇವಣ್ಣ(HD Revanna0 ಅವರಿಗೆ ಯಾವ ರೀತಿ ಕೆಲಸ ನಡೆಸಬೇಕು, ಸುಧಾರಣೆ ಮಾಡಬೇಕು ಎನ್ನುವ ಬಗ್ಗೆ ಕಲ್ಪನೆ ಇಲ್ಲ. ನಾವು ಉನ್ನತ ಶಿಕ್ಷಣದಲ್ಲಿ(Higher Education) ಸಾಕಷ್ಟು ಸುಧಾರಣೆ ತಂದಿದ್ದೇವೆ. ಪಾಪ ರೇವಣ್ಣ ಅವರಿಗೆ ಇದೆಲ್ಲ ಗೊತ್ತಿಲ್ಲ. ಹಿಂದೆ ನಾವು ಮಾಡಲಾಗದ್ದನ್ನು ಬಿಜೆಪಿಯವರು ಮಾಡಿಬಿಟ್ಟರಲ್ಲ ಎಂದು ಸಹಿಸಿಕೊಳ್ಳಲು ಆಗುತ್ತಿಲ್ಲ. ಇವರ ವೇಗಕ್ಕೆ ನಾವಿಲ್ಲವಲ್ಲ, ಅಡ್ರೆಸ್‌ಗೆ ಇಲ್ಲದಂತಾಗುತ್ತೇನೆ, ಇಲ್ಲದಂಗೆ ಹೋಗಿಬಿಡುತ್ತೇನೆ ಎನ್ನುವ ಭಯ ಅವರದ್ದು. ಅವರು ಎಲ್ಲೂ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎಂದು ವ್ಯಂಗ್ಯವಾಡಿದರು.
Hassan Politics: ದೇವೇಗೌಡ್ರದ್ದು ದಲಿತ ವಿರೋಧಿ ಕುಟುಂಬ: ಶಾಸಕ ಪ್ರೀತಂ ಗೌಡ
ನನ್ನ ವಿಚಾರದಲ್ಲಿ ಮಾತನಾಡುವ ನೈತಿಕತೆ, ಬದ್ಧತೆ, ಅರ್ಹತೆ ರೇವಣ್ಣ ಅವರಿಗೆ ಇಲ್ಲ. ನನ್ನ ಬಗ್ಗೆ ಹೇಳಿಕೆ ಕೊಡುವ ಮೊದಲು ಅವರು ಒಳ್ಳೆಯ ಕಲ್ಪನೆ, ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಶ್ವತ್ಥ ನಾರಾಯಣ್ ಕಿಡಿಕಾರಿದರು.
ಅಣ್ಣ, ತಮ್ಮ ಹೊಡೆದಾಡ್ತಾರೆಂದು ಕಾಂಗ್ರೆಸ್‌ನಿಂದ ತಿರುಕನ ಕನಸು: ಎಚ್.ಡಿ.ರೇವಣ್ಣ
ಹೊಳೆನರಸೀಪುರ: ನಾವು ಅಣ್ಣ ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ. ದೇವೇಗೌಡರು ಬದುಕಿರುವವರೆಗೂ ನಾನಾಗಲಿ, ಕುಮಾರಣ್ಣ ಆಗಲಿ, ಅವರ ಮಕ್ಕಳಾಗಲಿ ಹೊಡೆದಾಡುತ್ತೇವೆ ಅಂತ ಕಾಂಗ್ರೆಸ್‌ನವರು (Congress) ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಲೇವಡಿ ಮಾಡಿದರು. ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ಜನತಾ ಜಲಧಾರೆ (Janat Jaladhare) ರಥಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ್ದರು.
ಸಾಲಮನ್ನಾ ಮಾಡೋದು ಬೇಡ, ಸರ್ಕಾರಿ ಶಾಲೆಗಳ ಕಡೆ ಹೋಗೋಣ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲೀಷ್ ಶಾಲೆ ತೆರೆದು ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಯಲ್ಲಿ ಖಾಸಗಿ ಶಾಲೆ ಮುಚ್ಚಿಸೋಣವೆಂದಿದ್ದೆ. ಆದರೆ ಸಾಲಮನ್ನಾ ಮಾಡಿದ್ದರು. ಮಕ್ಕಳ ಬದಲು ರೈತರಿಗೆ ಒಳ್ಳೆಯದಾಯಿತು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಈಗ ಬಿಜೆಪಿಯವರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಅಂತ ಹೇಳಿದ್ದರು.