Belagavi Violence: ಉದ್ಧವ್ ಠಾಕ್ರೆ ಅವರೊಬ್ಬ ಉದ್ಭವ ಠಾಕ್ರೆ: ಸಚಿವ ಸಿ.ಸಿ. ಪಾಟೀಲ
* ಎಂಇಎಸ್ ಸಂಘಟನೆ ಗೂಂಡಾಗಿರಿ ಮತ್ತು ದಬ್ಬಾಳಿಕೆಗೆ ಕಿಡಿ
* ಕರ್ನಾಟದಲ್ಲಿ ಈಗ ಗಂಭೀರವಾದ ಪರಿಸ್ಥಿತಿ ನಿರ್ಮಾಣ
* ಶಾಂತವಾಗಿದ್ದ ಪರಿಸ್ಥಿತಿ ಕದಡಲು ಶಿವಸೇನೆ ಕಾರಣ
ಗದಗ(ಡಿ.20): ಮಹಾರಾಷ್ಟ್ರ(Maharashtra) ಸಿಎಂ ಉದ್ಧವ್ ಠಾಕ್ರೆ(Uddhav Thackeray) ಟ್ವೀಟ್‌ಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ(CC Patil) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉದ್ಧವ್ ಠಾಕ್ರೆ ಅವರೊಬ್ಬ ಉದ್ಭವ ಠಾಕ್ರೆ. ಉದ್ಧಟತನ ಟ್ವೀಟ್ ಮಾಡಿದ್ದಾರೆ ಎಂದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ(Belagavi Assembly Session) ನಡೆಯಬಾರದು, ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ಅಭಿವೃದ್ಧಿಯಿಂದ ಕುಂಠಿತ ಆಗಬೇಕು ಎಂಬ ದುರುದ್ದೇಶ ಎಂಇಎಸ್‌ನದ್ದು(MES) ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ವೀಟ್‌ಗೆ ಖಂಡನೆ:
ಕರ್ನಾಟಕ(Karnataka) ನೆರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸದಾ ಉತ್ಸುಕವಾಗಿದೆ. ಆ ಉತ್ಸುಕತೆ ಮಹಾರಾಷ್ಟ್ರಕ್ಕೆ ಬೇಕಾಗಿಲ್ಲ. ಅವರು ತಮ್ಮ ಜನಪ್ರಿಯತೆ ಕಡಿಮೆಯಾದಾಗ, ಆಡಳಿತ ವಿರೋಧಿ ಅಲೆ ಎದ್ದಾಗ ಇಂತಹ ಹುನ್ನಾರಕ್ಕೆ ಕೈ ಹಾಕುತ್ತಾರೆ ಎಂದರು.
Belagavi Riot: ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ, ಗುಡುಗಿದ ಈಶ್ವರಪ್ಪ
ಠಾಕ್ರೆ ಈ ರೀತಿಯ ಹೇಳಿಕೆ ಕೈಬಿಡಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಶಾಂತಿಪ್ರಿಯರನ್ನು ಕೆರಳಿಸಬೇಡಿ ಎಂದು ಎಂಇಎಸ್ಹಾಗೂ ಮಹಾರಾಷ್ಟ್ರ ಸಿಎಂಗೆ ಖಡಕ್ಎಚ್ಚರಿಕೆ ನೀಡಿದರು.
ಠಾಕ್ರೆ ಸರ್ಕಾರ ವಜಾಗೊಳಿಸಿ, ಎಂಇಎಸ್ ನಿಷೇಧಿಸಿ
ರಾಮನಗರ(Ramanagara): ಕರ್ನಾಟಕದಲ್ಲಿ ಅಶಾಂತ ಪರಿಸ್ಥಿಗೆ ಕಾರಣರಾಗಿರುವ ಮಹಾರಾಷ್ಟ್ರದ ಉದ್ಧವ್ಠಾಕ್ರೆ ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿಗಳು(President Ram Nath Kovind) ತಕ್ಷಣ ವಜಾ ಮಾಡಬೇಕು ಹಾಗೂ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯ ಸರ್ಕಾರ ತಕ್ಷಣ ನಿಷೇಧಿಸಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್(Vatal Nagaraj) ಒತ್ತಾಯಿಸಿದರು.
ನಗರದ ಐಜೂರು ವೃತ್ತದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್) ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ಠಾಕ್ರೆ ವಿರುದ್ಧ ನಡೆದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟದಲ್ಲಿ ಈಗ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಕನ್ನಡ ಬಾವುಟಕ್ಕೆ ಬೆಂಕಿ ಇಡಲಾಗಿದೆ. ಇನ್ನೊಂದೆಡೆ ಸಂಗೊಳ್ಳಿ ರಾಯಣ್ಣನಿಗೆ(Sangolli Rayanna) ಅಪಮಾನ ಮಾಡಲಾಗಿದೆ. ಇದಕ್ಕೆಲ್ಲ ಕಾರಣ ಎಂ.ಇ.ಎಸ್ಸಂಘಟನೆ ಗೂಂಡಾಗಿರಿ ಮತ್ತು ದಬ್ಬಾಳಿಕೆ ಎಂದು ಕಿಡಿ ಕಾರಿದರು.
ಬೆಳಗಾವಿಯಲ್ಲಿ(Belagavi) ಉದ್ಧವವ್ ಠಾಕ್ರೆ ಅವರ ಶಿವಸೇನೆ(Shiv Sena) ಕಾರ್ಯಕರ್ತರು ಕನ್ನಡಿಗರ(Kannadigas) ವಾಹನಗಳಿಗೆ ಕಲ್ಲು ಹೊಡೆದು ಹಾನಿ ಮಾಡಿದ್ದಾರೆ. ಕನ್ನಡ ಬಾವುಟಕ್ಕೆ(Kannada Flag) ಬೆಂಕಿ ಹಚ್ಚಿದ್ದಾರೆ. ಶಾಂತವಾಗಿದ್ದ ಪರಿಸ್ಥಿತಿ ಕದಡಲು ಶಿವಸೇನೆ ಕಾರಣವಾಗಿದೆ. ಹೀಗಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ಠಾಕ್ರೆ ಸರ್ಕಾರವನ್ನು ರಾಷ್ಟ್ರಪತಿಗಳು ತಕ್ಷಣ ವಜಾ ಮಾಡಬೇಕು.ಉದ್ಧವ್ಠಾಕ್ರೆ ಒಂದು ನಿಮಿಷವೂ ಮುಖ್ಯಮಂತ್ರಿಗಳಾಗಿರಲು ಅಧಿಕಾರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಶಾಸಕರು ಮರಾಠಿಗರ ಗುಲಾಮರಾಗಿದ್ದಾರೆ. ಮರಾಠಿಗರ ಏಜೆಂಟರಾಗಿದ್ದಾರೆ. ಇವರೆಲ್ಲ ತಕ್ಷಣ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು. ಸಂಗೊಳ್ಳಿ ರಾಯಣ್ಣ ಈ ನಾಡಿಗೆ, ಈ ದೇಶಕ್ಕೆ ಸೇವೆ ಮಾಡಿದ್ದಾರೆ. ಅವರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಖಂಡಿಸಿದರು.
Belagavi Violence ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ, ಪುಂಡರಿಗೆ ತಕ್ಕ ಪಾಠ, ಬೆಳಗಾವಿ ಘಟನೆಗೆ ಬೊಮ್ಮಾಯಿ ಕಿಡಿ
ಎಂ.ಇ.ಎಸ್ ಸಂಘಟನೆಯನ್ನುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು(Basavaraj Bommai) ತಕ್ಷಣ ವಜಾ ಮಾಡಬೇಕು. ವಿಧಾನಸಭಾ ಕಲಾಪದಲ್ಲಿ ಸಮಗ್ರ ಚರ್ಚೆಯಾಗಲಿ. ನಿಲುವಳಿ ಸೂಚನೆ ಮಂಡಿಸಿ ರಾಜ್ಯ ಸರ್ಕಾರ ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ(Protest) ಕರುನಾಡು ಸೇನೆಯ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಜಯಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಬಾಯಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಉಸ್ಮಾನ್ಷರೀಫ್, ಪ್ರಮುಖರಾದ ಲೋಕೇಶ್, ಹೇಮಾವತಿ, ರೇಣುಕಾ, ಮರಿಸ್ವಾಮಿ, ಮಹೇಂದ್ರ, ಯಶೋಧ, ಜಗದೀಶ ಮತ್ತಿತರರು ಭಾಗವಹಿಸಿದ್ದರು.