ರೈತರ ಕಷ್ಟ ಕೇಳ್ಲಿಲ್ಲಂದ್ರ ಇಲ್ಯಾಕ್ ಬಂದಾನ್; ದನಾ ಕಾಯಾಕ್ ಹೋಗ್ ಅನ್ನು ಕೃಷಿ ಅಧಿಕಾರಿಗೆ ಸಚಿವ ತರಾಟೆ

ರೈತರ ಸಮಸ್ಯೆ ಕೇಳಲಿಲ್ಲಾ ಅಂದ್ರ ಇಲ್ಲಾ್ಯಕ್‌ ಬಂದಾನ, ದನಾ ಕಾಯಕ್‌ ಹೋಗನ್‌, ನೀನು ಅವ್ನ, ನಾ ಹೇಳೇನೋ ಇಲ್ಲ, ಪರಿಶೀಲನೆಯ ವೇಳೆಯಲ್ಲಿ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಲು ತಿಳಿಸಿದ್ದರೂ ಯಾಕೆ ಬಂದಿಲ್ಲ, ನೀನು ದನ ಕಾಯಕ್‌ ಹೋಗ್‌’ ಎಂದು ಅಧಿಕಾರಿಗೆ ಹಾಗೂ ಆಪ್ತ ಸಹಾಯಕರಿಗೆ ಲೆಫ್‌್ಟರೈಟ್‌ ತೆಗೆದುಕೊಂಡ ಘಟನೆ ನಡೆಯಿತು.

minister cc patil scolded the officer who did not come on time at kkoppala

ಗದಗ (ಸೆ.10) : ಜಿಲ್ಲೆಯಾದ್ಯಂತ ಈಚೆಗೆ ಸುರಿದ ಭಾರೀ ಮಳೆಗೆ ನರಗುಂದ ವಿಧಾನಸಭಾ ವ್ಯಾಪ್ತಿಯ ಹಲವಾರು ಗ್ರಾಮಗಳಿಗೆ ಅಲ್ಲಿಯ ಶಾಸಕ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಲವಾರು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಬೆಳಗ್ಗೆ ಗದಗ ತಾಲೂಕಿನ ಮದಗಾನೂರು ಗ್ರಾಮಕ್ಕೆ ಭೇಟಿ ನೀಡಿದ ಅವರು ಗ್ರಾಮದ ವಿವಿಧ ಭಾಗಗಳಿಗೆ ನೀರು ನುಗ್ಗಿ ಆಗಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳಿಗೆ ಆಗಿರುವ ಹಾನಿಯ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದರು.

ಅಭಿವೃದ್ಧಿಯ ಸಾಧನೆಯೇ ಮಾತನಾಡುವಂತಾಗಲಿ; ಸಚಿವ ಸಿ.ಸಿ.ಪಾಟೀಲ್

ನಂತರ ಹೊಂಬಳ ಗ್ರಾಮಕ್ಕೆ ಆಗಮಿಸಿದ ಸಚಿವರಿಗೆ ಗ್ರಾಮದ ಮುಖ್ಯ ವೃತ್ತದಿಂದ ಮಳೆ ನೀರು ಹರಿದು ಹೋಗಲು ಆಗದೇ ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಈ ಕುರಿತು ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರೆಲ್ಲಾ ಸೇರಿ ಗ್ರಾಮಸಭೆ ನಡೆಸಿ ಈ ಬಗ್ಗೆ ಸ್ಪಷ್ಟವಾದ ನಿರ್ಣಯ ತೆಗೆದುಕೊಳ್ಳಿ, ಆ ಮೇಲೆ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ಹೊಂಬಳ ಗ್ರಾಮದಿಂದ ಹಿರೇಹಂದಿಗೋಳ, ಚಿಕ್ಕಹಂದಿಗೋಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು 100 ಮೀಟರ್‌ನಲ್ಲಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಅಕ್ಕ ಪಕ್ಕದ ರೈತರ ಜಮೀನುಗಳು ಅತ್ಯಂತ ಬೆಲೆಬಾಳುವ, ಬಿತ್ತನೆ ಯೋಗ್ಯವಾಗಿದ್ದ ಮಣ್ಣೆಲ್ಲಾ ಕೊಚ್ಚಿಕೊಂಡು ಹೋಗಿದ್ದನ್ನು ಗಮನಿಸಿ ಮಮ್ಮಲ ಮರುಗಿದರು.

ಕಣ್ಣೀರಿಟ್ಟಮಹಿಳೆ

ಕಿತ್ತು ಹೋಗಿರುವ ರಸ್ತೆ ಕಾಮಗಾರಿ ವೀಕ್ಷಣೆಗೆ ಆಗಮಿಸಿದ ವೇಳೆಯಲ್ಲಿ ಮಹಿಳೆಯೋರ್ವಳು ನಮ್ಮ ಹೊಲವೆಲ್ಲಾ ಕೊಚ್ಚಿಕೊಂಡು ಹೋಗಿದೆ ಎಂದು ಹೇಳುತ್ತಿದ್ದ ವೇಳೆಯಲ್ಲಿ ದುಃಖ ತಡೆಯಲಾಗದೇ ಸಚಿವರ ಸಮ್ಮುಖದಲ್ಲಿಯೇ ಕಣ್ಣೀರು ಹಾಕಿ, ‘ನಾವ್‌ ಬಡವ್ರು ಅದೇವಿ, ಹೊಲಾ ಎಲ್ಲಾ ಕೊಚ್ಚಿಕೊಂಡ್‌ ಹೋಗೈತ್ರಿ, ಇನ್‌ ಮ್ಯಾಲೆ ಹೊಲಾ ಬಿತ್ತಾಕು ಬರುವುದಿಲ್ಲ, ಆ ಹೊಲಕ್‌ ಹೋಗಾಕ್‌ ದಾರಿ ಇಲ್ದಂಗ್‌ ಆಗೈತ್ರಿ, ನಮ್ಮ ತೊಂದ್ರಿ ಯಾರ್‌ ಬಗಿಹರಸಬೇಕ್ರಿ, ನಿಮ್ಮನ್ನು ನಂಬಿವಿ’ ಎಂದು

ಭೋರ್ಗರೆದು ಅತ್ತಾಗ, ಸಚಿವ ಸಿ.ಸಿ. ಪಾಟೀಲ ಸಮಾಧಾನ ಪಡಿಸಿ, ‘ನಿಮ್ಮ ಕಷ್ಟನನಗ್‌ ಅರ್ಥವಾಗತ್ತದೆ ತಾಯಿ, ಸಮಾಧಾನ ಮಾಡ್ಕೋ, ಎಷ್ಟುಸಾಧ್ಯವೋ ಅಷ್ಟೇ ಬೇಗ ಕೆಲಸ ಮಾಡಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ ಎಂದು ಸಮಾಧಾನ ಮಾಡಿದರು.

\ದನಾ ಕಾಯಕ್‌ ಹೋಗನ್‌:

ಹೊಂಬಳ ಗ್ರಾಮದಿಂದ ಅಲ್ಪ ದೂರದಲ್ಲಿಯೇ ಹಿರೇಹಳ್ಳದ ಪ್ರವಾಹದಿಂದ ಕಿತ್ತು ಹೋಗಿರುವ ರಸ್ತೆ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದ ವೇಳೆಯಲ್ಲಿ ರೈತರು ಶೇಂಗಾ ಹಾನಿಯಾಗಿರುವ ಬಗ್ಗೆ, ಗಿಡದಲ್ಲಿಯೇ ಕಾಯಿಗಳು ಮೊಳಕೆ ಒಡೆದಿರುವ ಬಗ್ಗೆ ಸಚಿವ ಸಿ.ಸಿ. ಪಾಟೀಲರಿಗೆ ಮಾಹಿತಿ ನೀಡಿ, ಅದನ್ನೆಲ್ಲಾ ತೋರಿಸಿದ ವೇಳೆಯಲ್ಲಿ, ಎಲ್ರೀ ಕೃಷಿ ಅಧಿಕಾರಿ ಎಂದರು, ಇಲ್ಲ ಸರ್‌ ಅವರು ದೂರದಲ್ಲಿದ್ದಾರೆ ಎಂದು ತಮ್ಮ ಆಪ್ತ ಹೇಳುತ್ತಿದ್ದಂತೆ ಕುಪಿತಗೊಂಡ ಸಚಿವ ಸಿ.ಸಿ. ಪಾಟೀಲ, ‘ರೈತರ ಸಮಸ್ಯೆ ಕೇಳಲಿಲ್ಲಾ ಅಂದ್ರ ಇಲ್ಲಾ್ಯಕ್‌ ಬಂದಾನ, ದನಾ ಕಾಯಕ್‌ ಹೋಗನ್‌, ನೀನು ಅವ್ನ, ನಾ ಹೇಳೇನೋ ಇಲ್ಲ, ಪರಿಶೀಲನೆಯ ವೇಳೆಯಲ್ಲಿ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಲು ತಿಳಿಸಿದ್ದರೂ ಯಾಕೆ ಬಂದಿಲ್ಲ, ನೀನು ದನ ಕಾಯಕ್‌ ಹೋಗ್‌’ ಎಂದು ಅಧಿಕಾರಿಗೆ ಹಾಗೂ ಆಪ್ತ ಸಹಾಯಕರಿಗೆ ಲೆಫ್‌್ಟರೈಟ್‌ ತೆಗೆದುಕೊಂಡ ಘಟನೆ ನಡೆಯಿತು.

ಗುತ್ತಿಗೆದಾರರ ಕಟ್ಟಡ ನಿರ್ಮಾಣ ವೇಳೆ ಕೆಂಪಣ್ಣ ಅಕ್ರಮ, ಸಮಯ ಬಂದಾಗ ಬಣ್ಣ ಬಯಲು: ಸಿ.ಸಿ.ಪಾಟೀಲ್‌

ರೈತರ ಬೆಳೆಹಾನಿಯ ಸರ್ವೇ ಕಾರ್ಯವನ್ನು ಅತ್ಯಂತ ನಿಖರವಾಗಿ ಹಿರಿಯ ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಮಾಡಬೇಕು. ಇದರಲ್ಲಿ ಏನಾದರೂ ಲೋಪಗಳು ಆದಲ್ಲಿ ಆಯಾ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಕಚೇರಿಯಲ್ಲಿ ಕುಳಿತು ಕಿರಿಯ ಅಧಿಕಾರಿಗಳಿಗೆ ಅಥವಾ ಯಾರದ್ದೋ ಕೈಯಲ್ಲಿ ಬೆಳೆ ಹಾನಿಯ ಸಮೀಕ್ಷೆ ನಡೆಸಿದಲ್ಲಿ ಅಂತಾ ಅಧಿಕಾರಿಗಳು ಮುಂದೆ ಕಠಿಣವಾದ ಕ್ರಮವನ್ನು ಎದುರಿಸಬೇಕಾಗುತ್ತದೆ. ವ್ಯಾಪಕ ಮಳೆಯಿಂದಾಗಿ ರೈತರಿಗೆ ಬೆಳೆಹಾನಿ, ಜಮೀನು, ಬದುವು ಒಳಗಟ್ಟಿಸಾಕಷ್ಟುಹಾನಿಯಾಗಿವೆ, ಇದರೊಟ್ಟಿಗೆ ಜಿಲ್ಲೆಯ ರಸ್ತೆ ಮತ್ತು ಸೇತುವೆಗಳಿಗೂ ಅಪಾರ ಹಾನಿ ಸಂಭವಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಪಾರ ಹಾನಿಯಾಗಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

ಸಿ.ಸಿ. ಪಾಟೀಲ ಲೋಕೋಪಯೋಗಿ ಸಚಿವರು

Latest Videos
Follow Us:
Download App:
  • android
  • ios