Asianet Suvarna News Asianet Suvarna News

ನರಗುಂದ: ಕೆರೆ ದಡದಲ್ಲಿ ವಾಸವಾಗಿರುವ ಜನರ ಕುಟುಂಬಗಳ ರಕ್ಷಣೆ

ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಸಚಿವ ಸಿ.ಸಿ. ಪಾಟೀಲ್‌ ಭೂಮಿ ಪೂಜೆ| 21ನೇ ವಾರ್ಡಿನ ಸಂಪೂರ್ಣ ಅಭಿವೃದ್ಧಿಗಾಗಿ ಶೀಘ್ರದಲ್ಲಿ 1 ಕೋಟಿ ರು.ಗಳನ್ನು ನೀಡಲಾಗುವುದು| ಈ ಭಾಗದಲ್ಲಿನ ಮರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಇಲ್ಲಿನ ಹಿರಿಯರ ಅಪೇಕ್ಷೆಯಂತೆ ದೇವಸ್ಥಾನಕ್ಕಾಗಿ ಶಾಸಕ ಅನುದಾನದಲ್ಲಿ 5 ಲಕ್ಷ ರು.ಗಳನ್ನು ನೀಡಲಾಗುವುದು|

Minister C C Patil Talks Over Protection of families
Author
Bengaluru, First Published Dec 22, 2019, 10:25 AM IST

ನರಗುಂದ(ಡಿ.22): ಕೆರೆ ದಡದಲ್ಲಿ ವಾಸವಾಗಿರುವ ಜನರ ಕುಟುಂಬಗಳನ್ನು ರಕ್ಷಿಸಿದ ನಂತರ ಅವರಿಗೆ ಕೊಟ್ಟ ಭರವಸೆಯಂತೆ ಓಣಿಯಲ್ಲಿ 46.60 ಲಕ್ಷ ರು. ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣದ ಜೊತೆಗೆ ಒಳಚರಂಡಿ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 17 ಲಕ್ಷ ರು.ಗಳನ್ನು ನೀಡುತ್ತಿದ್ದೇನೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ಅವರು ಇತ್ತೀಚೆಗೆ ಪಟ್ಟಣದ ಪುರಸಭೆಯ ವ್ಯಾಪ್ತಿಯ 21ನೇ ವಾರ್ಡಿನ ಹಾಲಬಾವಿ ಕೆರೆ ಓಣಿಯಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳ ಜಲಸಾರಿಗೆ ಇಲಾಖೆ ವತಿಯಿಂದ 46.60 ಲಕ್ಷ ರು.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಆನಂತರ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

21ನೇ ವಾರ್ಡಿನ ಸಂಪೂರ್ಣ ಅಭಿವೃದ್ಧಿಗಾಗಿ ಶೀಘ್ರದಲ್ಲಿ 1 ಕೋಟಿ ರು.ಗಳನ್ನು ನೀಡಲಾಗುವುದು. ಈ ಭಾಗದಲ್ಲಿನ ಮರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಅರ್ಧದಲ್ಲಿ ನಿಂತಿದ್ದು, ಇಲ್ಲಿನ ಹಿರಿಯರ ಅಪೇಕ್ಷೆಯಂತೆ ದೇವಸ್ಥಾನಕ್ಕಾಗಿ ಶಾಸಕ ಅನುದಾನದಲ್ಲಿ 5 ಲಕ್ಷ ರು.ಗಳನ್ನು ನೀಡಲಾಗುವುದು. ಹಾಲಬಾವಿ ಕೆರೆಯು ಹಲವಾರು ವರ್ಷಗಳಿಂದ ಮಲೀನವಾಗಿರುವುದರಿಂದ ಸುತ್ತಮುತ್ತಲು ವಾಸವಾಗಿರುವ ಜನತೆಯ ಆರೋಗ್ಯ ದೃಷ್ಟಿಯಿಂದ ಕೂಡಲೇ ಕೆರೆಯಲ್ಲಿನ ಹೊಲಸು ಹೂಳನ್ನು ತೆಗೆಯಲಾಗುವುದು ಎಂದು ಸಚಿವರು ಹೇಳಿದರು.

ಶಿವಾನಂದ ಮುತ್ತವಾಡ, ಟಿಎಪಿಸಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚನ್ನಬಸಪ್ಪ ಕುರಡಗಿ, ಹುಸೇನಸಾಬ ಗೋಟೂರ, ಅಶೋಕ ಪತ್ರಿ, ಎಸ್‌.ಎಸ್‌. ಪಾಟೀಲ, ಚಂದ್ರಗೌಡ ಪಾಟೀಲ, ಪ್ರಶಾಂತ ಜೋಶಿ, ದೇವರಾಜ ಕಲಾಲ, ಬಸಪ್ಪ ಅಮರಗೋಳ, ಮಹೇಶ ಬೋಳಶೆಟ್ಟಿ, ರಾಚನಗೌಡ ಪಾಟೀಲ, ಹನುಮಂತ ಹವಾಲ್ದಾರ, ಮಾರುತಿ ಅರ್ಬಾಣದ, ಪ್ರಕಾಶ ಹಾದಿಮನಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
 

Follow Us:
Download App:
  • android
  • ios