Asianet Suvarna News Asianet Suvarna News

'ಪ್ರಧಾನಿ ನರೇಂದ್ರ ಮೋದಿ ವಿಶ್ವದ ನೆಚ್ಚಿನ ನಾಯಕ'

ನರೇಂದ್ರ ಮೋದಿ ಎರಡು ಬಾರಿ ಅವರಿಗೆ ಬಹುಮತ ನೀಡಿದ್ದರಿಂದ ಇಂದು ದೇಶದಲ್ಲಿ ಮೋದಿವರು ತಮ್ಮ ಅಧಿಕಾರದ ಅವಧಿಯಲ್ಲಿ ಭಾರತ ದೇಶವನ್ನು ಅಭಿವೃದ್ದಿಯತ್ತ ತಗಿದುಕೊಂಡು ಹೋಗುತ್ತಿದ್ದಾರೆ: ಸಿ.ಸಿ.ಪಾಟೀಲ

Minister C C Patil Talks Over PM Narendra Modi
Author
Bengaluru, First Published Jun 12, 2020, 2:55 PM IST

ನರಗುಂದ(ಜೂ.12): ಭಾರತ ದೇಶದಲ್ಲಿ ಸ್ವಲ್ಪ ಅವಧಿಯಲ್ಲಿ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಇಂದು ವಿಶ್ವ ನೆಚ್ಚಿನ ನಾಯಕರಾಗಿದ್ದಾರೆಂದು ಗಣೆ ಮತ್ತು ಭೂ ವಿಜ್ಷಾನ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.

ಅವರು ಪಟ್ಟಣದ ಮಾರುತಿ ನಗರದಲ್ಲಿ 2ನೇ ಅವಧಿಯ ಮೊದಲನೆ ವರ್ಷದ ಪ್ರಧಾನಿ ಮೋದಿವರ ಸಾಧನೆ ಮತ್ತು ಅಭಿನಂದನ ಪತ್ರಗಳ ವಿತರಣಿ ಅಭಿಯಾನಕ್ಕೆ ಚಾಲನೆ ನೀಡಿ ಆನಂತರ ಮಾತನಾಡಿ ದೇಶದಲ್ಲಿ ಹಲವಾರು ಪಕ್ಷಗಳು ಜಾತಿ ಧರ್ಮಗಳ ಮಧ್ಯ ವಿಷ ಬೀಜ ಬಿತ್ತಿ ಈ ದೇಶವನ್ನು ಹಾಳು ಮಾಡವ ಹಂತಕ್ಕೆ ತಂದು ನಿಲ್ಲಸಿದ್ದರು.  ಭಾರತೀಯರು ಇದನ್ನು ಅರಿತುಕೊಂಡು ಬಿಜೆಪಿ ಪಕ್ಷದ ನರೇಂದ್ರ ಮೋದಿವರನ್ನು ಎರಡು ಬಾರಿ ಅವರಗೆ ಬಹುಮತ ನೀಡಿದ್ದರಿಂದ ಇಂದು ದೇಶದಲ್ಲಿ ಮೋದಿವರು ತಮ್ಮ ಅಧಿಕಾರದ ಅವಧಿಯಲ್ಲಿ ಭಾರತ ದೇಶವನ್ನು ಅಭಿವೃದ್ದಿಯತ್ತ ತಗಿದುಕೊಂಡು ಹೋಗುತ್ತಿದ್ದಾರೆ.  ಅಂಥ ನಾಯಕರ ತಮ್ಮ 2ನೇ ಅವಧಿಯ ಮೊದಲನೆ ವರ್ಷ ಹಲವಾರು ಸಾಧನೆ ಪತ್ರಗಳು ಮತ್ತು ಜನತಗೆ ಮೋದಿವರು ಅಭಿನಂದನೆ ಪತ್ರಗಳನ್ನು ಇಡೀ ದೇಶದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಪ್ರತಿ ಭೂತನಲ್ಲಿ 50 ರಿಂದ 100 ಮನೆಗಳಗೆ ಅವರ ಸಾಧನಾ ಪತ್ರವನ್ನು ನೀಡಲಾಗುವುದು ಎಂದರು.

ಗದಗ: ಹೊಳೆಆಲೂರಿಗೂ ವಕ್ಕರಿಸಿದ ಮಹಾಮರಿ ಕೊರೋನಾ..!

Minister C C Patil Talks Over PM Narendra Modi

ಮೋದಿವರು ಭಾರತ ದೇಶದಲ್ಲಿ ಪ್ರಧಾನಿಗಳಾದ ಮೇಲೆ ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದರುವ ರಾಮಮಂದಿರ, ಜಮ್ಮ ಕಾಶ್ಮೀರ, ತಲಾಖ್‌, ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸದ ರೀತಿ ನೋಡಿ ಇಂದು ಇಡೀ ವಿಶ್ವ ನಾಯಕರು ಮೋದವರನ್ನು ಮೆಚ್ಚಿಕೊಂಡಿದ್ದರಿಂದ ಇಂದು ಪ್ರಪಂಚಲ್ಲಿ ಭಾರತೀಯರ ಶಕ್ತಿ ಎಂಥಾದ್ದು ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆಂದು ಹೇಳಿದರು.

ನರಗುಂದ ಬಿಜೆಪಿ ಮಂಡಳಿ ಅಧ್ಯಕ್ಷ ಗುರಪ್ಪ ಆದಪ್ಪನವರು, ಮಲ್ಲಪ್ಪ ಮೇಟಿ, ಪಿರ್ಕಾಡ ಬ್ಯಾಂಕ ಅಧ್ಯಕ್ಷ ಎಂ.ಎಸ್.ಪಾಟೀಲ, ವಾಸು ಜೋಗಣ್ಣವರ, ಫಕೀರಪ್ಪ ಹಾದಿಮನಿ, ದೇವಣ್ಣ ಕಲಾಲ, ಚಂದ್ರಗೌಡ ಪಾಟೀಲ, ಸಿದ್ದು ಹೂಗಾರ, ಮಂಜು ಮೆಣಸಗಿ, ಬಸು ಪಾಟೀಲ, ರಾಚನಗೌಡ ಪಾಟೀಲ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

News In 100 Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios