ಗದಗ: ಹೊಳೆಆಲೂರಿಗೂ ವಕ್ಕರಿಸಿದ ಮಹಾಮರಿ ಕೊರೋನಾ..!

ವ್ಯಕ್ತಿಯ ಸಂಪರ್ಕದಲ್ಲಿದ್ದ ಮನೆಯವರನ್ನು ಹಾಗೂ ಕಾರು ಚಾಲಕ ಸೇರಿ ಸಂಪರ್ಕದಲ್ಲಿದ್ದ 9 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ| ಇನ್ನೂ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ| ಹೊಳೆಆಲೂರಿನ ಮೇಘರಾಜನಗರವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ| ಹೊಳೆಆಲೂರಿನ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಸಿ ಕಟ್ಟೆಚ್ಚರ|

Coronavirus Case Confirmed at HoleAluru in Gadag District

ಹೊಳೆಆಲೂರ(ಜೂ.07): ಇಲ್ಲಿಯ ಮೇಘರಾಜ ನಗರದ ನಿವಾಸಿ ಡಯಾಲಿಸಸ್‌ ಚಿಕಿತ್ಸೆಗೆ ತೆರಳಿದ ವೇಳೆಯಲ್ಲಿ ಕೊರೋನಾ ಪತ್ತೆಯಾಗಿದ್ದರಿಂದ ಹೊಳೆಆಲೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಿದೆ. ಗದುಗಿನ ಜಿಮ್ಸ್‌ ಆಸ್ಪತ್ರೆ ಚಿಕಿತ್ಸೆಗೆಂದು ತೆರಳಿದ್ದ ವೇಳೆ ಕೊರೋನಾ ಬಂದಿದ್ದು, ಆರೋಗ್ಯ ಇಲಾಖೆ ಖಚಿತಪಡಿಸಿದೆ.

ವ್ಯಕ್ತಿಯ ಸಂಪರ್ಕದಲ್ಲಿದ್ದ ಮನೆಯವರನ್ನು ಹಾಗೂ ಕಾರು ಚಾಲಕ ಸೇರಿ ಸಂಪರ್ಕದಲ್ಲಿದ್ದ 9 ಜನರನ್ನು ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ. ಇನ್ನೂ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಆದ್ದರಿಂದ ಹೊಳೆಆಲೂರಿನ ಮೇಘರಾಜನಗರವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ಹೊಳೆಆಲೂರಿನ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಸಿ ಕಟ್ಟೆಚ್ಚರ ವಹಿಸಲಾಗುತ್ತಿದೆ.

ಗದಗ ಮೃಗಾಲಯ: ಜೂ.8ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಹೊಳೆಆಲೂರಿಗೆ ಬರುವ ಸುತ್ತಮುತ್ತಲಿನ ಗ್ರಾಮಗಳ ಜನರು ಸಹಿತ ಹೊಳೆಆಲೂರಿಗೆ ಬರದೆ ಬಜಾರ ಬೀಕೊ ಎನ್ನುತ್ತಿತ್ತು. ಮೇಘರಾಜ ನಗರಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಶಿವಾನಂದ ಕಟಗಿ ಇಲ್ಲಿಯವರು ಯಾರು ಹೊರಗೆ ಬರದಂತೆ ಸೂಚಿಸಿದ್ದಾರೆ.

ತಹಸೀಲ್ದಾರ್‌ ಜೆ.ಬಿ.ಜನ್ನನಗೌಡ್ರ, ಎಇಒ ಸಂತೋಷ ಪಾಟೀಲ, ಪ್ರಭಾರಿ ಪಿಎಸ್‌ಐ ಮಹೇಶ ಹೆರಕಲ್‌, ಪಿಡಿಓ ಮಂಜುನಾಥ ಗಣಿ ಮುಂತಾದವರು ಇದ್ದು, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ.
 

Latest Videos
Follow Us:
Download App:
  • android
  • ios