ಶಿಗ್ಗಾಂವಿ(ನ.05): ಶಿಗ್ಗಾಂವಿಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಟೆಕ್ಸ್‌ಟೈಲ್‌ ಪಾರ್ಕ್( ಜವಳಿ ಉದ್ಯಮ) ನಿರ್ಮಾನಕ್ಕೆ ಬೇಕಾಗುವ ಜಮೀನಿನ ಕುರಿತು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂಡಸ್ಟ್ರೀಲ್‌ ಡಿಮಾಂಡ್‌ ಸರ್ವೇ ಮಾಡಲು ನೋಡಲ್‌ ಅಧಿಕಾರಿಗಳಿಂದ ಆಸಕ್ತಿ ಇರುವ ಕಂಪನಿಗಳಿಂದ ಅರ್ಜಿ ಆಹ್ವಾನಿಸಲಾಗುತ್ತದೆ.ಇದರಿಂದ ಡಿಮಾಂಡ್‌ ಸರ್ವೇ ಆಗುತ್ತದೆ. ಇದಕ್ಕೆ ಅನುಗುಣವಾಗಿ ಸೌಲಭ್ಯ, ಜಮೀನು, ರಸ್ತೆ, ನೀರು, ವಿದ್ಯುತ್‌ಚ್ಚಕ್ತಿ, ಮೂಲಭೂತ ಸೌಲಭ್ಯಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಿದೆ. ಮುಂಬರುವ ವರ್ಷ ಈ ಯೋಜನೆ ಪೂರ್ಣಗೊಂಡು ಜಿಲ್ಲೆಯಲ್ಲಿ ಉದ್ಯಮದೊಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

'ಅವ್ರನ್ನ ನಂಬಿದ್ರೆ ಸಿದ್ದರಾಮಯ್ಯ ಬಾಡಿಗೆ ಮನೆಯಲ್ಲೇ ಇರ್ಬೇಕಿತ್ತು '

ಸಂತ ಶಿಶುವಿನಾಳ ಶರೀಫರ ಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ಮಂಜೂರಾತಿ ಆಗಿದ್ದು ಡಿಪಿಆರ್‌ ಅನುಮೋದನೆ ಸಲ್ಲಿಸಲಾಗಿದ್ದು, ಅಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು. ಶರೀಫ್‌ ಶಿವಯೋಗಿಗಳ ಪ್ರಾಧಿಕಾರ ರಚಿಸುವ ಪ್ರಶ್ನೆಗೆ, ಹೊಸ ಪ್ರಾಧಿಕಾರ ರಚಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು.

ಶಿಗ್ಗಾಂವಿ ಬಸ್‌ ನಿಲ್ದಾಣದ ನವೀಕರಣಕ್ಕೆ 3 ಕೋಟಿ ನೀಡಿದ್ದು ಹೊಸ ವಿನ್ಯಾಸದಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಗೆ 30 ಕೋಟಿ ಅನುದಾನ ಮಂಜೂರಾಗಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಗ್ಗಾಂವಿ ಏತ ನೀರಾವರಿ ವಿದ್ಯುತ್‌ ಸಂಪರ್ಕ ಮಾಡುವ ಕಾರ್ಯ ನಡೆದಿದ್ದು ಎರಡು ತಿಂಗಳು ಬೇಕಾಗುತ್ತದೆ ಎಂದರು.