ಬಳ್ಳಾರಿ: ಎಲ್‌ಎಲ್‌ಸಿಗೆ ನೀರು ಹರಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ, ಸಚಿವ ಶ್ರೀರಾಮುಲು

ಕಾಲುವೆ ದುರಸ್ತಿಯಾಗಿ ನೀರು ಹರಿಸಿದ ಬಳಿಕವೇ ನಾನು ಇಲ್ಲಿಂದ ತೆರಳುತ್ತೇನೆ. ಸ್ಥಳದಲ್ಲಿ ಇದ್ದರೆ ಮಾತ್ರ ತ್ವರಿತವಾಗಿ ಕೆಲಸವಾಗುತ್ತದೆ. ಹೀಗಾಗಿ ಇಲ್ಲಿಯೇ ಮೊಕ್ಕಾಂ ಹೂಡಿದ್ದೇನೆ: ಶ್ರೀರಾಮುಲು 

Minister B Sriramulu Visited to LLC Canal in Ballari grg

ಬಳ್ಳಾರಿ(ನ.02):  ತಾಲೂಕಿನ ಭೈರದೇವನಹಳ್ಳಿ ಬಳಿಯ ಎಲ್‌ಎಲ್‌ಸಿ ಕಾಲುವೆಯ ಪಿಲ್ಲರ್‌ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಜಿಲ್ಲಾ ಸಚಿವ ಬಿ.ಶ್ರೀರಾಮುಲು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

 

ವೇದಾವತಿ ನದಿಗೆ ನಿರ್ಮಿಸಿರುವ ಸೇತುವೆಯ ಪಿಲ್ಲರ್‌ (ಆಧಾರಕಂಬ) ಅ.13 ರಂದು ಕೊಚ್ಚಿ ಹೋಗಿತ್ತು. ಇನ್ನು ಎರಡು ಪಿಲ್ಲರ್‌ಗಳು ಸಹ ಶಿಥಿಲಗೊಂಡಿದ್ದರಿಂದ ಕಾಲುವೆಗೆ ನೀರು ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಸುಮಾರು 20 ದಿನಗಳು ಕಳೆದರೂ ಕಾಲುವೆಗೆ ನೀರಿಲ್ಲದೆ ರೈತರು ತೀವ್ರ ಆತಂಕಗೊಂಡಿದ್ದರು. ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಸಚಿವ ಬಿ.ಶ್ರೀರಾಮುಲು, ಕಾಮಗಾರಿ ವೀಕ್ಷಣೆ ಮಾಡಿದರಲ್ಲದೆ, ಆಮೆಗತಿಯಲ್ಲಿ ಸಾಗಿದ ಕೆಲಸ ಕಂಡು ತುಂಗಭದ್ರಾ ಬೋರ್ಡ್‌ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಸಚಿವರ ಜೊತೆಗೆ ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಮತ್ತಿತರರಿದ್ದರು.

ಗಣಿನಾಡಲ್ಲಿ ರಸ್ತೆ ತುಂಬಾ ಗುಂಡಿ; ಊರು ತುಂಬಾ ಧೂಳು!

ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಅಲ್ಲಿಗೆ ತೆರಳಿರುವ ಸಚಿವ ಶ್ರೀರಾಮುಲು ರಾತ್ರಿ 8 ಗಂಟೆಯ ವರೆಗೂ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು, ಕಾಲುವೆ ದುರಸ್ತಿಯಾಗಿ ನೀರು ಹರಿಸಿದ ಬಳಿಕವೇ ನಾನು ಇಲ್ಲಿಂದ ತೆರಳುತ್ತೇನೆ. ಸ್ಥಳದಲ್ಲಿ ಇದ್ದರೆ ಮಾತ್ರ ತ್ವರಿತವಾಗಿ ಕೆಲಸವಾಗುತ್ತದೆ. ಹೀಗಾಗಿ ಇಲ್ಲಿಯೇ ಮೊಕ್ಕಾಂ ಹೂಡಿದ್ದೇನೆ. ಈ ಸೇತುವೆಯನ್ನು 1953ರಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಶಿಥಿಲಗೊಂಡಿದೆ. ಶಾಶ್ವತ ದುರಸ್ತಿಗೆ .300 ಕೋಟಿ ಬೇಕಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚಿಸುವೆ ಎಂದು ತಿಳಿಸಿದರು.
 

Latest Videos
Follow Us:
Download App:
  • android
  • ios