*  ಚೋರನೂರು ಗ್ರಾಮದಲ್ಲಿ ಪೊಲೀಸ್‌ ಠಾಣೆ ಕಟ್ಟಡಕ್ಕೆ ಭೂಮಿಪೂಜೆ*  ಕೊಟ್ಟ ಮಾತಿನಂತೆ ಮೀಸಲಾತಿ ಕೊಡಿಸುತ್ತೇವೆ*  ಮೀಸಲಾತಿ ಎಂಬುದು ಇಂದಿನ ಹೋರಾಟವಲ್ಲ. ಅನೇಕ ವರ್ಷಗಳಿಂದ ಈ ಹೋರಾಟ ನಡೆದುಕೊಂಡು ಬಂದಿದೆ 

ಸಂಡೂರು(ಮೇ.22): ಮೀಸಲಾತಿಗಾಗಿ ಯಾರೂ ಬೀದಿಗೆ ಬಂದು ಹೋರಾಡುವ ಆವಶ್ಯಕತೆ ಇಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡು ಪರಿಶಿಷ್ಟರಿಗೆ ನ್ಯಾಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ತಾಲೂಕಿನ ಚೋರನೂರು ಗ್ರಾಮದಲ್ಲಿ ಶನಿವಾರ ನೂತನ ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮೀಸಲಾತಿ ಎಂಬುದು ಇಂದಿನ ಹೋರಾಟವಲ್ಲ. ಅನೇಕ ವರ್ಷಗಳಿಂದ ಈ ಹೋರಾಟ ನಡೆದುಕೊಂಡು ಬಂದಿದೆ. ಇಂದು ಮೀಸಲಾತಿ ಬಗ್ಗೆ ಮಾತಾಡುವವರು ತಾವು ಅಧಿಕಾರದಲ್ಲಿದ್ದಾಗ ಏನೂ ಮಾಡಲು ಆಗಿಲ್ಲ. ಎಸ್‌ಸಿ ಸಮುದಾಯಕ್ಕೆ ಶೇ. 15ರಿಂದ 17 ಮೀಸಲಾತಿ, ಎಸ್‌ಟಿ ಸಮುದಾಯಕ್ಕೆ ಶೇ. 7.5 ಮೀಸಲಾತಿಯನ್ನು ಶ್ರೀರಾಮುಲು ಮಾಡುತ್ತಾನೆ ಎಂಬ ನಂಬಿಕೆಯಿಂದ ಸ್ವಾಮಿಗಳು ಧರಣಿ ಕುಳಿತಿದ್ದಾರೆ. ಡಾ. ಬಿ.ಆರ್‌. ಅಂಬೇಡ್ಕರ್‌ ಆಶಯದಂತೆ ಪರಿಶಿಷ್ಟಪಂಗಡದ ಹಿತಕಾಯಲು ನಾವು ಬದ್ಧರಾಗಿದ್ದೇವೆ. ಈ ಬಗ್ಗೆ ಸಾಕಷ್ಟು ಆಶ್ವಾಸನೆ ನೀಡಿದ್ದೇನೆ. ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕಾನೂನು ತೊಡಕಿನಿಂದ ಹಾಗೂ ಕೆಲವು ರಾಜ್ಯಗಳಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದಾಗ ಸುಪ್ರೀಂ ಕೋರ್ಚ್‌ನಲ್ಲಿ ಆದ ಕೆಲವು ತೊಡಕುಗಳಿಂದಾಗಿ ಹಿಂಜರಿದಿದ್ದೇವೆ. ನಮ್ಮ ಸರ್ಕಾರವು ಕಾನೂನಿನ ಪರಿಮಿತಿಯನ್ನು ನೋಡಿಕೊಂಡು ನಿರ್ಧರಿಸುತ್ತದೆ. ಮೀಸಲಾತಿ ಹೆಚ್ಚಳ ಮಾಡದವರು ಆ ಬಗ್ಗೆ ಮಾತಾಡುತ್ತಿದ್ದಾರೆ. ಮೀಸಲಾತಿಯನ್ನು ನಾನು ಕೊಡಿಸಿಯೇ ತೀರುತ್ತೇನೆ ಎಂದರು.

ಚೋರನೂರು ಠಾಣೆಯ ಕಟ್ಟಡವನ್ನು . 3 ಕೋಟಿ 77 ಲಕ್ಷದಲ್ಲಿ ನಿರ್ಮಿಸಲಾಗುತ್ತಿದೆ. ಪೊಲೀಸ್‌ ವ್ಯವಸ್ಥೆಯಲ್ಲಿ ಮೂಲಭೂತ ಸೌಲಭ್ಯಗಳು ಬಹಳ ಮುಖ್ಯ. ಇದರಿಂದ ಅಪರಾಧ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಜಿಲ್ಲೆಯಲ್ಲಿ ಎಫ್‌ಎಸ್‌ಎಲ್‌ ಲ್ಯಾಬರೇಟರಿ ಬಹಳ ದಿನಗಳ ಬೇಡಿಕೆಯಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಹಾಗೂ ಕೇಂದ್ರದ ಗೃಹಸಚಿವರು ಸ್ಪಂದಿಸಿದ್ದಾರೆ. ಜನಸಂಖ್ಯೆ ಆಧಾರದ ಮೇಲೆ ಪೊಲೀಸ್‌ ಶಕ್ತಿ ಕೂಡಾ ಹೆಚ್ಚಬೇಕಿದೆ. ಪೊಲೀಸ್‌ ಸಿಬ್ಬಂದಿಗೆ ಕ್ವಾರ್ಟರ್ಸ್‌ ಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು . 2 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.

ಶ್ರೀರಾಮುಲು ವಿರುದ್ದ ಅಕ್ರಮ ಭೂ ಕಬಳಿಕೆ ಆರೋಪ, ಸಂಪುಟದಿಂದ ಕೈಬಿಡುವಂತೆ ಆಗ್ರಹ

ಶಾಸಕ ಈ. ತುಕಾರಾಮ ಭಾಗವಹಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನದ ಕುರಿತು ಮಾಹಿತಿ ನೀಡಿರುವ ಅವರು, ಮೂರೂವರೆ ಕೋಟಿಯಲ್ಲಿ . 2.50 ಕೋಟಿಯನ್ನು ಜಿಲ್ಲಾ ಖನಿಜ ನಿಧಿಯಿಂದಲೂ ಮತ್ತು ಉಳಿದ ಅನುದಾನವನ್ನು ಇಲಾಖೆ ಅನುದಾನವನ್ನು ಒದಗಿಸಲಾಗುತ್ತಿದೆ ಎಂದರು.

ಸಂಸದ ದೇವೇಂದ್ರಪ್ಪ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್‌. ದಿವಾಕರ್‌, ಜಿ.ಟಿ. ಪಂಪಾಪತಿ, ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ, ಎಸ್‌ಪಿ ಸೈದುಲ್ಲಾ ಅದಾವತ್‌, ಡಿವೈಎಸ್ಪಿ ಮಲ್ಲೇಶ್‌ ದೊಡ್ಡಮನಿ, ತಹಸೀಲ್ದಾರ್‌ ಕೆ.ಎಂ. ಗುರುಬಸವರಾಜ್‌, ಸಿಪಿಐ ಎಂ.ಎಂ. ಡಪ್ಪಿನ್‌, ಮತ್ತಾಜನಹಳ್ಳಿ ಬಸವರಾಜ್‌,ನರಸಿಂಹ, ವಕೀಲರಾದ ಪರಶುರಾಮ್‌, ಜಿ. ಚನ್ನಬಸಪ್ಪ, ರಾಮಕೃಷ್ಣ, ಕಾಂಗ್ರೆಸ್‌ ಮುಖಂಡ ಜಯರಾಂ, ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷ ಟಿ.ಪಿ. ಸಿದ್ದನಗೌಡ, ಜಿ. Ðಣ್ಮುಖಪ್ಪ,ದೇವೇಂದ್ರಪ್ಪ, ಮುಖಂಡರಾದ ಯರ್ರಿಸ್ವಾಮಿ, ಗುರುರಾಜ್‌, ಶಿವನಗೌಡ, ನರೇಂದ್ರ ಪಾಟೀಲ್‌, ಸೀತಮ್ಮ ಕುಮಾರಸ್ವಾಮಿ, ಗಂಡಿ ಮಾರೆಪ್ಪ, ಸೋವೇನಹಳ್ಳಿ ಪುರುಷೋತ್ತಮ್‌,ದರೋಜಿ ರಮೇಶ್‌ ಇತರರು ಇದ್ದರು.