'ಪಾಕಿಸ್ತಾನಕ್ಕೆ ಜೈ ಅಂದವರಿಗೆ ಕಾಂಗ್ರೆಸ್‌-ಜೆಡಿಎಸ್‌ ಸಹಕಾರ ನೀಡ್ತಿವೆ'

ಕಾಂಗ್ರೆಸ್, ಜೆಡಿಎಸ್‌ಗೆ ಉತ್ತರ ಕರ್ನಾಟಕದ ನೆರೆ ಪೀಡಿತರ ಸಮಸ್ಯೆ ಚರ್ಚಿಸೋದು ಬೇಕಿಲ್ಲ| ಮನೆ ಮಠ ಕಳೆದುಕೊಂಡವರ ಬಗ್ಗೆ ಚರ್ಚೆ ಮಾಡಲು ಅವರಿಗೆ ಸಮಯವಿಲ್ಲ| ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ| 

Minister B Sriramulu Talks Over Congress JDS

ಕಲಬುರಗಿ(ಫೆ.19): ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಮಂಗಳವಾರ ನಡೆದಂತಹ ಸದನ ಕಲಾಪ ಬಹಿಷ್ಕಾರ ವಿಚಾರವಾಗಿ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆ ಎರಡು ಪಕ್ಷದವರಿಗೆ ಉತ್ತರ ಕರ್ನಾಟಕದ ನೆರೆ ಪೀಡಿತರ ಸಮಸ್ಯೆ ಚರ್ಚಿಸೋದು ಬೇಕಿಲ್ಲ, ಮನೆ ಮಠ ಕಳೆದುಕೊಂಡವರ ಬಗ್ಗೆ ಚರ್ಚೆ ಮಾಡಲು ಅವರಿಗೆ ಸಮಯವಿಲ್ಲ. ಪಾಕಿಸ್ತಾನಕ್ಕೆ ಜೈ ಅಂದವರಿಗೆ ಅವ್ರ ಸಹಕಾರ ಕೊಡ್ತಿದಾರೆ ಎಂದು ಆರೋಪಿಸಿದ್ದಾರೆ. 

ಕಲಬುರಗಿ ಸಂಚಾರದಲ್ಲಿರುವ ಶ್ರೀರಾಮುಲು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕೀಯ ಮಾಡ್ತಿದೆ. ನಮ್ಮ ಪಕ್ಷ ಎಲ್ಲಿಯೂ ಕಾಂಪ್ರಮೈಸ್ ಆಗಲ್ಲ, ಯಾರೇ ಇರಲಿ, ಎಂಥವರೇ ಇರಲಿ, ಪಾಕಿಸ್ತಾನಕ್ಕೆ ಜೈ ಅಂದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತಗೋತೀವಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದನದಲ್ಲಿ ತುಕುಡೆ ತುಕುಡೆ ಗ್ಯಾಂಗ್ ಪ್ರತಿಧ್ವನಿಸಿದ ವಿಚಾರವಾಗಿ ಮಾತನಾಡಿದ ಶ್ರೀರಾಮುಲು ಏನದು ತುಕುಡೆ ತುಕುಡೆ ಗ್ಯಾಂಗ್? ಕಾಂಗ್ರೆಸ್ ಮತ್ತು ಜೆಡಿಎಸ್ ಸಹವಾಸ ದೋಷ, ಇಬ್ಬರೂ ಕೂಡಿ ಸರ್ಕಾರ ಮಾಡಿದ್ದರು, ನಂತ್ರ ತುಕಡಿ ತುಕಡಿಯಾಗಿ ಬೇರೆಯಾಗಿ ಹೋದ್ರು, ಅವರಂತೆ ನಾವೂ ತುಕಡೆ ತುಕಡೆಯಾಗಬೇಕಂತ ನಿರೀಕ್ಷಿಸ್ತಾರೆ. ಅದು ಮಾತ್ರ ಆಗೋದಿಲ್ಲ, ಯಡಿಯೂರಪ್ಪ ಅವರೇ ನಮ್ಮ ಸಿಎಂ ಆಗಿ ಮುಂದುವರಿತ್ತಾರೆ ಎಂದರು. 

ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡುವಂತಿಲ್ಲ: 

ರಾಜ್ಯದಲ್ಲಿ ಸರ್ಕಾರಿ ವೈದ್ಯರ ಖಾಸಗಿ ಪ್ರ್ಯಾಕ್ಟೀಸ್ ನಿಷೇಧ ಮಾಡಿ ಕಾನೂನು ಜಾರಿಗೆ ತರಲಾಗುತ್ತಿದೆ. ಪ್ರೈವೇಟ್ ಪ್ರ್ಯಾಕ್ಟೀಸ್ ನಿಷೇಧಿಸಿ ಕಾನೂನು ಅದಾಗಿರಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾದವರು 24 ತಾಸುಗಳ ಕಾಲ ಅಲ್ಲೆ ಸೇವೆ ಕೊಡಬೇಕು. ಅದನ್ನು ಬಿಟ್ಟು ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡ್ತಾರೆ ಅಂದ್ರೆ ಹೇಗೆ ಒಪ್ಪೋದಕಾಗುತ್ತೆ ಹೇಳಿ ನೋಡೋಣ? ಖಾಸಗಿ ಪ್ರ್ಯಾಕ್ಟೀಸ್ ಮಾಡೋರು ನಮಗೆ ಬೇಡವೇ ಬೇಡ ಎಂದರು. 

ಕೆಪಿಎಸ್‌ಸಿ ಬಿಟ್ಟು ನೇರ ನೇಮಕಾತಿ ಮಾಡಲು ಸಿಎಂ ನಮಗೆ ಸ್ವಾತಂತ್ರ್ಯ ನೀಡಿದ್ದಾರೆ. ಹೀಗಿರಬೇಕಾದರೆ ಇಲ್ಲಿ ಯಾರು ಕೆಲಸ ಮಾಡ್ತಾರೋ ಅಂಥವರನ್ನೇ ತಗೋತೀವಿ, ಸರ್ಕಾರಿ ಆಸ್ಪತ್ರೆ ಬೇಡ ಅನ್ನೋರು ನಮಗೆ ಬೇಕಿಲ್ಲ. ಈಗ ಇದ್ದವರೂ ನೌಕರಿ ಬಿಟ್ಟು ಹೋಗಬಹುದು ಎಂದು ಶ್ರೀರಾಮುಲು ಹೇಳಿದ್ದಾರೆ.
 

ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios