ದಾವಣಗೆರೆ(ಜ.15): ಮಂತ್ರಿ ಸ್ಥಾನ ಸಿಗದಿದ್ದಾಗ ಸಿ.ಡಿ ಬಾಂಬ್‌ ಹೇಳ್ತಾರೆ. ಇಲ್ಲಿವರೆಗೆ ಇಲ್ಲದ ಸಿ.ಡಿ ಇವಾಗ ಹೇಗೆ ಬರುತ್ತದೆ? ಇದೊಂದು ತರಹ ಬ್ಲಾಕ್‌ಮೇಲ್‌ ಅಲ್ವಾ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಕಿಡಿಕಾರಿದ್ದಾರೆ. 

ಜಿಲ್ಲೆಯ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬ್ಲಾಕ್‌ಮೇಲ್‌ ಮಾಡಿದ್ದಾರೆ? ಯಾರು ವೈಟ್‌ಮೇಲ್‌ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಇಲ್ಲಿವರೆಗೂ ಇಲ್ಲದ ಸಿ.ಡಿ ಇವಾಗ ಹೇಗೆ ಬರುತ್ತೆ? ಸಿ.ಟಿ.ಯೋಗೇಶ್ವರ್‌ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಎಚ್‌.ವಿಶ್ವನಾಥ್‌ ಆ ರೀತಿ ಮಾತನಾಡಬಾರದು ಎಂದು ತಿಳಿಸಿದ್ದಾರೆ. 

‘ಪಂಚ​ರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆ: ಕುಮಾರಸ್ವಾಮಿ

ವಿಶ್ವನಾಥ್‌ ಅವರನ್ನು ಸಿಎಂ ಯಡಿಯೂರಪ್ಪ ಸಚಿವರಾಗಿ ಮಾಡುತ್ತಿದ್ದದರು. ಆದರೆ, ವಿಶ್ವನಾಥ್‌ ವಿರುದ್ಧ ನ್ಯಾಯಾಲಯ ತೀರ್ಪು ಬಂದಿದೆ. ಮೊದಲೇ ವಿಶ್ವನಾಥ್‌ ಅವರಿಗೆ ವಾತಾವರಣ ಸರಿ ಇಲ್ಲ. ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂಬುದು ಯಡಿಯೂರಪ್ಪ ಹೇಳಿದ್ದರು. ಆದರೂ ಸ್ಪರ್ಧೆ ಮಾಡಿ, ಸೋತರು. ಆದರೂ ಬಿಎಸ್‌ವೈ ದೊಡ್ಡ ಮನಸ್ಸು ಮಾಡಿ, ವಿಶ್ವನಾಥ್‌ ಅವರನ್ನು ಎಂಎಲ್‌ಸಿ ಮಾಡಿದ್ದಾರೆ ಎಂದು ಹೇಳಿದ್ದಾರೆ.