Asianet Suvarna News Asianet Suvarna News

‘ಪಂಚ​ರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆ: ಕುಮಾರಸ್ವಾಮಿ

2023ರ ವಿಧಾನಸಭಾ ಚುನಾವಣೆಗೆ ತಯಾರಿ ಶುರು| ಎಲ್ಲ ಕ್ಷೇತ್ರಗಳಲ್ಲೂ ಪ್ರವಾಸ| ಅನೇ​ಕ ನಾಯ​ಕರು ಜನತಾ ಪರಿ​ವಾರ ಸೇರುವ ಇಂಗಿತ| ಬಿಜೆಪಿ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ|  

Former CM H D Kumarawamy Talks Over JDS grg
Author
Bengaluru, First Published Jan 15, 2021, 1:02 PM IST

ರಾಮ​ನ​ಗರ(ಜ.15): ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಬದಲಾಯಿಸುತ್ತಿದ್ದಂತೆ ರಾಜ್ಯದಲ್ಲಿ ಹೊಸ ರಾಜಕೀಯ ಇನ್ನಿಂಗ್ಸ್‌ ಅನ್ನು ಪ್ರಾರಂಭಿಸಲು ಸಂಕಲ್ಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜಲವಿವಾದ, ಕೃಷಿ ಸೇರಿದಂತೆ ನಾಡಿನ ಐದು ಪ್ರಮುಖ ವಿಚಾರಗಳನ್ನೊಳಗೊಂಡ ‘ಪಂಚರತ್ನ’ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು 2023ರ ಸಾರ್ವ​ತ್ರಿಕ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಎದುರಿಸಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರವಾಸ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ರಾಮ​ನ​ಗರ ಕ್ಷೇತ್ರದ ಜಾಲ​ಮಂಗಲ ಗ್ರಾಮದ ಲಕ್ಷ್ಮೀ ನರ​ಸಿಂಹ​ಸ್ವಾಮಿ ದೇವಾ​ಲ​ಯ​ದಲ್ಲಿ ಪೂಜೆ ಸಲ್ಲಿಸಿದ ಅವರು ‘ಕನ್ನ​ಡ​ಪ್ರ​ಭ‘ದೊಂದಿಗೆ ಮಾತ​ನಾ​ಡಿ, ಜೆಡಿ​ಎಸ್‌ ಪಕ್ಷಕ್ಕೆ ಸ್ಪಷ್ಟಬಹು​ಮತ ನೀಡಿ​ದಲ್ಲಿ ಐದು ವರ್ಷ​ದಲ್ಲಿ ಮಾಡುವ ಪಂಚ​ರತ್ನ ಕಾರ್ಯ​ಕ್ರ​ಮಗಳ ಕುರಿತು ನಾಡಿನ ಜನ​ರಿಗೆ ಈಗಿ​ನಿಂದಲೇ ಮನ​ವ​ರಿಕೆ ಮಾಡಿ​ಕೊ​ಡು​ವು​ದಾಗಿ ತಿಳಿ​ಸಿ​ದರು. ಜಲ ವಿವಾದ, ಕೃಷಿ ಸೇರಿ​ದಂತೆ ನಾಡಿನ ಜ್ವಲಂತ ಸಮ​ಸ್ಯೆ​ಗ​ಳನ್ನು ಒಳ​ಗೊಂಡಿ​ರುವ ಪ್ರಮುಖ ಐದು ವಿಚಾ​ರ​ಗ​ಳಿಗೆ ಪಂಚ​ರತ್ನ ಕಾರ್ಯ​ಕ್ರ​ಮ ಎಂದು ಹೆಸ​ರಿಟ್ಟು ಜನರ ಎದು​ರಿಗೆ ಹೋಗು​ತ್ತೇವೆ. ಜೆಡಿ​ಎಸ್‌ ಸ್ವತಂತ್ರ​ವಾಗಿ ಬಹು​ಮ​ತ​ದೊಂದಿಗೆ ಅಧಿ​ಕಾ​ರಕ್ಕೆ ಬಂದಲ್ಲಿ ಒಂದು ವರ್ಷಕ್ಕೆ ಒಂದು ಕಾರ್ಯ​ಕ್ರ​ಮ​ದಂತೆ ಜ್ವಲಂತ ಸಮ​ಸ್ಯೆ​ಗ​ಳಿಗೆ ಶಾಶ್ವತ ಪರಿ​ಹಾರ ದೊರ​ಕಿ​ಸ​ಲಾ​ಗು​ವುದು ಎಂದರು.

ಇಬ್ಬರೂ ಜತೆಗಿರುವ ವಿಡಿಯೋ ನೋಡಿದ್ದೀರಾ, ಈಗ ಯಾರೆಂಬುದು ಗೊತ್ತಿಲ್ಲ ಅಂದ್ರೆ?: HDKಗೆ ಟಾಂಗ್

ಎಲ್ಲ ಕ್ಷೇತ್ರದಲ್ಲೂ ಪ್ರವಾಸ: 

ಜೆಡಿ​ಎಸ್‌ ಪಕ್ಷದ ಸಂಘ​ಟ​ನೆಗೆ ಮೊದಲ ಆದ್ಯತೆ ನೀಡು​ತ್ತೇನೆ. ನಾಳೆಯಿಂದಲೇ ಪಕ್ಷ ಸಂಘ​ಟಿ​ಸಲು ಚಾಲನೆ ನೀಡಿ ಬಿಜೆಪಿ-ಕಾಂಗ್ರೆಸ್‌ ನ ವೈಫ​ಲ್ಯ ಹಾಗೂ ಜೆಡಿ​ಎಸ್‌ ಜನ​ಪರ ಕಾರ್ಯ​ಕ್ರ​ಮ​ಗಳನ್ನು ಮನ​ವ​ರಿಕೆ ಮಾಡಿ​ಕೊ​ಡು​ತ್ತೇನೆ. ಯಾವ ಯಾವ ಕ್ಷೇತ್ರ​ಗ​ಳಲ್ಲಿ ಪ್ರವಾಸ ಕೈಗೊಳ್ಳುತ್ತೇನೆ ಎಂಬು​ದರ ಪಟ್ಟಿಸಿದ್ಧವಾ​ಗು​ತ್ತಿದೆ. ಯಾವ ಕ್ಷೇತ್ರ​ವನ್ನೂ ನಿರ್ಲ​ಕ್ಷಿ​ಸದೆ ಪ್ರತಿ​ಯೊಂದು ಕ್ಷೇತ್ರಕ್ಕೂ ಪ್ರವಾಸ ಕೈಗೊ​ಳ್ಳು​ತ್ತೇನೆ ಎಂದು ತಿಳಿ​ಸಿ​ದರು.

ಬಿಜೆಪಿ-ಕಾಂಗ್ರೆಸ್‌ ನಾಯ​ಕರು ಜೆಡಿ​ಎಸ್‌ಗೆ :

ಜೆಡಿ​ಎಸ್‌ ತೊರೆ​ಯು​ವ​ವರ ಸಂಖ್ಯೆ ಹೆಚ್ಚಾ​ಗಿದೆ ಎಂಬ ಅಪ​ಪ್ರ​ಚಾರ ನಡೆ​ಯು​ತ್ತಿದೆ. ಆದರೆ ಅನ್ಯಪಕ್ಷ​ಗ​ಳ​ಲ್ಲಿ​ರುವ ಜನತಾ ಪರಿ​ವಾ​ರ​ದ​ಲ್ಲಿದ್ದ ಬಹ​ಳಷ್ಟು ನಾಯಕರು ಜೆಡಿ​ಎಸ್‌ ಪಕ್ಷಕ್ಕೆ ಮರಳಿ ಬರಲು ಆಸಕ್ತಿ ತೋರು​ತ್ತಿ​ದ್ದಾರೆ. ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಇ​ಬ್ರಾಹಿಂ ಅವ​ರೊಂದಿಗೆ ಚರ್ಚೆ ನಡೆ​ಸಿ​ದ್ದು ಕಾಂಗ್ರೆಸ್‌ನ ಇನ್ನೂ ಅನೇ​ಕ ನಾಯ​ಕರು ಜನತಾ ಪರಿ​ವಾರ ಸೇರುವ ಇಂಗಿತ ವ್ಯಕ್ತ​ಪ​ಡಿ​ಸು​ತ್ತಿ​ದ್ದಾರೆ ಎಂದು ತಿಳಿ​ಸಿ​ದರು.  ಇದೇ ವೇಳೆ ಬಿಜೆಪಿ ವಿರುದ್ಧವೂ ಹರಿಹಾಯ್ದ ಅವರು, ಬಿಜೆಪಿ ಸರ್ಕಾರ ಹೋಗು​ತ್ತಿ​ರುವ ಮಾರ್ಗ ಆತ್ಮ​ಹತ್ಯೆ ಮಾಡಿ​ಕೊ​ಳ್ಳು​ವಂತಿದ್ದು ತಾವು ಮಾಡಿ​ದ್ದೆ​ಲ್ಲ​ವನ್ನು ಜನರು ಒಪ್ಪಿ​ಕೊ​ಳ್ಳು​ತ್ತಾ​ರೆಂದು ಭಾವಿ​ಸಿ​ದ್ದಾರೆ ಎಂದು ಟೀಕಿಸಿದರು.
 

Follow Us:
Download App:
  • android
  • ios