ಕೊಪ್ಪಳ(ಏ.19): ಲಾಕ್‌ಡೌನ್‌ನಲ್ಲಿ ನಾನಾ ಸಮಸ್ಯೆಗಳು ಆಗುತ್ತಿವೆ. ಸ್ವತಃ ನನ್ನ ಅಳಿಯನ ಮಗಳು ದೆಹಲಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾಳೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವ ಮುನ್ನ ಸಹಜವಾಗಿ ಮಾತನಾಡುತ್ತಾ, ಲಾಕ್‌ಡೌನ್‌ ಕುರಿತು ವಿವರಿಸುವಾಗ ಈ ರೀತಿ ಹೇಳಿದ್ದಾರೆ. ಐಎಎಸ್‌ ಕೋಚಿಂಗ್‌ ಮಾಡುತ್ತಿದ್ದ ಆಕೆ, ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಳೇ ಇದ್ದಾಳೆ. ಈಗ ವಿಮಾನವೂ ಇಲ್ಲ ಮತ್ತು ರೈಲು ಇಲ್ಲವಾದ್ದರಿಂದ ಕರೆತರಲು ಸಾಧ್ಯವಾಗಿಲ್ಲ ಎಂದು ಲಾಕ್‌ಡೌನ್‌ ಸಮಸ್ಯೆಯನ್ನು ಬಿಚ್ಚಿಟ್ಟರು.

ಕೊರೋನಾ ಪ್ರಯೋಗಾಲಯದಲ್ಲಿ ಕೊಪ್ಪಳದ ವಿಜ್ಞಾನಿ...!

ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಸಮಾಧಾನಕರ ವಿಷಯವೇ ಆಗಿದೆ. ಆದರೂ ಇಲ್ಲಿಯೂ ಸರ್ಕಾರ ಶೀಘ್ರದಲ್ಲಿಯೋ ಕೋವಿಡ್‌ ಲ್ಯಾಬ್‌ನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಈಗಾಗಲೇ 1.5 ಕೋಟಿ ಬಿಡುಗಡೆ ಮಾಡಲಾಗಿದೆ. ಆಗ ಇನ್ನಷ್ಟು ವೇಗವಾಗಿ ಪ್ರಯೋಗಾಲಯ ವರದಿ ಬರಲಿದೆ ಎಂದರು.