ಕೊಪ್ಪಳ(ಮೇ.28): ಕೊರೋನಾ ನಿಯಂತ್ರಣ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೇನು ಗೊತ್ತಿದೆ. ಅವರಾರ‍ಯಕೆ ಮಾತನಾಡುತ್ತಾರೆ. ಕೊರೋನಾ ಕುರಿತು ಅವರೇನಾದರೂ ಪಿಎಚ್‌.ಡಿ ಮಾಡಿದ್ದಾರೆಯೇ? ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಪ್ರಶ್ನಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ವಿರೋಧಿಸುವುದು ಅನಿವಾರ್ಯವೆನಿಸುತ್ತದೆ. ಪ್ರತಿಪಕ್ಷದ ನಾಯಕನಾಗಿ ವಿರೋಧಕ್ಕಾಗಿ ವಿರೋಧ ಮಾಡಿದ್ದಾರೆ ಅಷ್ಟೇ. ಭಾರತದಲ್ಲಿ ಕೊರೋನಾ ನಿಯಂತ್ರಣ ಕ್ರಮವನ್ನು ಜಾಗತಿಕವಾಗಿ ಶ್ಲಾಘಿಸಿದ್ದಾರೆ. ಕರ್ನಾಟಕದಲ್ಲೂ ಕೊರೋನಾ ನಿಯಂತ್ರಣದಲ್ಲಿದೆ. ಅಷ್ಟರ ಮೇಲೂ ಪ್ರತಿಪಕ್ಷಗಳಿಂದ ಇಂತಹ ಪ್ರತಿಕ್ರಿಯೆ ನಿರೀಕ್ಷಿತ ಎಂದರು.

ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಸರ್ಕಾರಕ್ಕೆ ಕೋಟಿ ಕೋಟಿ ಆದಾಯ

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‌ ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚದ ಕುರಿತು ಕೆಎಸ್‌ಆರ್‌ಟಿಸಿಗೆ .1 ಕೋಟಿ ಚೆಕ್‌ ನೀಡುವ ನಾಟಕವಾಡಿದ್ದರು. ನೇರವಾಗಿ ಕೆಎಸ್‌ಆರ್‌ಟಿಸಿಗೆ ಹಣ ಪಾವತಿಸಲು ಬರುವುದಿಲ್ಲ. ಕೇವಲ 1 ಕೋಟಿ ನೀಡಿದರೆ ಸಾಲದು, ನೂರಾರು ಕೋಟಿಯನ್ನು ಸಿಎಂ ಪರಿಹಾರ ನಿಧಿಗೆ ನೀಡಲಿ ಎಂದರು.