'ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ'
ಮೊದಲು ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಪಾಟೀಲ್| ಆರ್ ಆರ್ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ|
ಕೊಪ್ಪಳ(ನ.01): ಪದೇ ಪದೆ ರಾಜ್ಯ ಸರ್ಕಾರದ ವಿರುದ್ಧ ಗುಡುಗುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳುವುದೆಲ್ಲ ವೇದವಾಕ್ಯವಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಪರಿಹಾರ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಮತ್ತೆ ತಾರತಮ್ಯ ಮಾಡಿದೆ ಎನ್ನುವ ಶಾಸಕ ಯತ್ನಾಖ್ ಹೇಳಿಕೆಗೆ ಟಾಂಗ್ ನೀಡಿದ ಬಿ.ಸಿ. ಪಾಟೀಲ್, ಯತ್ನಾಳ್ ಹೇಳಿದಾಕ್ಷಣ ಎಲ್ಲವೂ ವೇದವಾಕ್ಯವಲ್ಲ. ನೆರೆ ಪರಿಹಾರ ವಿತರಣೆಯ ಪಟ್ಟಿಯನ್ನ ನೋಡಬೇಕು. ಎಲ್ಲಿ ಏಷ್ಟು ನೆರೆ ಹಾನಿಯಾಗಿದೆ. ಅಧಿಕಾರಿಗಳು ಎಷ್ಟು ವರದಿ ಕೊಟ್ಟಿದ್ದಾರೆ. ಸುಮ್ಮನೆ ಮೂಗುಮ್ಮಾಗಿ ಹೇಳೋದು ಸರಿಯಲ್ಲ. ಯತ್ನಾಳ್ ಅವರ ಮೇಲೆ ಸಮಯ ಬಂದಾಗ ಸಂಬಂಧಿಸಿದವರು ಖಂಡಿತ ಕ್ರಮಕೈಗೊಳ್ಳುತ್ತಾರೆ ಎಂದರು.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು
17 ಶಾಸಕರ ಭವಿಷ್ಯ ಎಕ್ಕುಟ್ಟು ಹೋಗುತ್ತೆ ಎಂದಿರುವ ಮಾಜಿ ಸಿಎಂ ಸಿದ್ದು ಅವರು, ಮೊದಲು ತಮ್ಮ ಸ್ಥಾನವನ್ನ ಭದ್ರ ಮಾಡಿಕೊಳ್ಳಲಿ. ತಮ್ಮ ಭವಿಷ್ಯ ಏನಾಗಲಿದೆ ಎನ್ನುವುದನ್ನು ನೋಡಿಕೊಳ್ಳಲಿ. ಆರ್ ಆರ್ ನಗರ, ಶಿರಾ ಸೇರಿ ನಾಲ್ಕೂ ವಿಧಾನ ಪರಿಷತ್ ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ. ಅದ್ಭುತ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
ಭತ್ತದ ಬೆಂಬಲ ಬೆಲೆ ನಿಗದಿಯಾಗಿದೆ. ನ.1 ರಿಂದ ನ.30 ರ ವರೆಗೂ ಖರೀದಿಗೆ ನೊಂದಣಿ ನಡೆಯುತ್ತದೆ. ನಂತರ ಖರೀದಿ ಆರಂಭ ಮಾಡಲಿದ್ದೇವೆ. ಮೆಕ್ಕೆಜೋಳ ಖರೀದಿ ಪಡಿತರ ವ್ಯವಸ್ಥೆಯಡಿ ಬರುವುದಿಲ್ಲ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೀವಿ. ಪಡಿತರ ವ್ಯವಸ್ಥೆಯಡಿ ತನ್ನಿ ಎಂದು, ಕೇಂದ್ರದಿಂದ ಎಂಎಸ್ ಪಿಯಡಿ ಖರೀದಿ ಮಾಡಿ ಎಂದರೆ ನಾವು ಖರೀದಿ ಮಾಡಲಿದ್ದೇವೆ ಎಂದರು. ಗಂಗಾವತಿ ನಗರಸಭೆ ಸದಸ್ಯನ ಕಿಡ್ನ್ಯಾಪ್ ವಿಚಾರ ರಾಜಕೀಯದಲ್ಲಿ ಅವೆಲ್ಲವೂ ಸಹಜ, ಕಿಡ್ನ್ಯಾಪ್ ಆಗ್ತಾರೆ. ಮತ್ತೆ ಬರ್ತಾರೆ. ಗಂಗಾವತಿ ಪ್ರಕರಣದಲ್ಲಿ ಪೊಲೀಸ್ ತನಿಖೆಯಲ್ಲಿ ಅದು ಗೊತ್ತಾಗಲಿದೆ ಎಂದರು.