ಕೆ.ಜಿ. ಹಳ್ಳಿ ಘಟನೆ ಖಂಡಿಸುತ್ತೇನೆ, ಯಾವ ಶಾಸಕರಿಗೂ ಆ ರೀತಿ ಆಗಬಾರದು: ಸಚಿವ ಸಿಂಗ್‌

ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ, ತನಿಖೆಯ ನಂತರ ಸತ್ಯಾಸತ್ಯೆತೆ ಬಯಲಾಗಲಿದೆ| ಎಸ್‌ಡಿಪಿಐ ನಿಷೇಧ ಕುರಿತು ಇದೇ 20 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ: ಸಚಿವ ಆನಂದ ಸಿಂಗ್‌| 

Minister Anand Singh Reacts on KG Halli Riot Case

ದಾವಣಗೆರೆ(ಆ.16): ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವವರು ಮುಖ್ಯಮಂತ್ರಿಗಳು.  ಯಾರು ಚೆನ್ನಾಗಿ ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ ಎಂದು ಮಾರ್ಕ್ಸ್ ಕೊಡುವವರೂ ಕೂಡ ಸಿಎಂ ಅಗಿದ್ದಾರೆ.  ನಾನು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಇಂದು(ಭಾನುವಾರ) ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ಸ್ವಾಮೀಜಿಗಳ ಆರ್ಶೀವಾದವನ್ನ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಕೆ.ಜಿ. ಹಳ್ಳಿ  ಘಟನೆಯನ್ನು ನಾನು ಖಂಡಿಸುತ್ತೇನೆ. ಯಾವ ಶಾಸಕರಿಗೂ ಆ ರೀತಿ ಆಗಬಾರದು. ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ ತನಿಖೆಯ ನಂತರ ಸತ್ಯಾಸತ್ಯತೆ ಬಯಲಾಗಲಿದೆ. ಎಸ್‌ಡಿಪಿಐ ನಿಷೇಧ ಕುರಿತು ಇದೇ 20 ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ತಿಳಿಸಿದ್ದಾರೆ.

ಜಾತಿ ನಿಂದನೆ: DHO ಸೇರಿ ಇಬ್ಬರ ಬಂಧನಕ್ಕೆ ದಸಂಸ ಆಗ್ರಹ

ಅರಣ್ಯ ಇಲಾಖೆ ಭೂಮಿಯಲ್ಲಿ ಕೃಷಿ ನಡೆಸುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಿಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ‌ ಕೋರ್ಟ್‌ನಲ್ಲಿದೆ. ಇನ್ನು ನಾಲ್ಕು ತಿಂಗಳ ನಂತರ ಪರಿಹಾರವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios