Asianet Suvarna News Asianet Suvarna News

Mining: ಕೆಆರ್‌ಎಸ್‌ನ 25 ಕಿ.ಮೀ. ವ್ಯಾಪ್ತೀಲಿ ಗಣಿಗಾರಿಕೆ ನಿಷೇಧ?

*  ಅಣೆಕಟ್ಟು ಸುರಕ್ಷತಾ ಪುನರ್‌ಪರಿಶೀಲನಾ ಸಮಿತಿ ವರದಿಯಲ್ಲಿ ಮಾಹಿತಿ
*  ಎಲ್ಲ ಗಣಿ ಚಟುವಟಿಕೆ ನಿಷೇಧಿಸುವಂತೆ ಸರ್ಕಾರಕ್ಕೆ ಸಲಹೆ 
*  ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಹಾಲಪ್ಪ ಆಚಾರ್‌
 

Mining Ban Near KRS Dam in Mandya grg
Author
Bengaluru, First Published Dec 18, 2021, 6:21 AM IST

ಮಂಡ್ಯ(ಡಿ.18): ವಿಶ್ವವಿಖ್ಯಾತ ಕೃಷ್ಣರಾಜ ಸಾಗರ(KRS) ಅಣೆಕಟ್ಟೆಯ 25 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು(Mining Activity) ನಿಷೇಧಿಸುವಂತೆ ಅಣೆಕಟ್ಟು ಸುರಕ್ಷತಾ ಪುನರ್‌ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ.  ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ರಾಕ್‌ ಮೆಕ್ಯಾನಿಕ್ಸ್‌(NIRM), ಪುಣೆಯ ಸೆಂಟ್ರಲ್‌ ವಾಟರ್‌ ಮತ್ತು ಪವರ್‌ ರೀಸರ್ಚ್‌ ಸ್ಟೇಷನ್‌ (CWRPS) ನವರು ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ(Report) ನೀಡುವವರೆಗೆ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.

ಗಣಿ ಸ್ಫೋಟದ ಬಗ್ಗೆ ಎನ್‌ಐಆರ್‌ಎಂ ತಜ್ಞರು ತಾಂತ್ರಿಕ ಪರಿಣಿತಿ ಸಾಧಿಸಿದ್ದು, ಇವರು ನೀಡುವ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಇವರ ವರದಿ ಅತಿ ಮುಖ್ಯವಾಗಿದೆ. ಸಿಡಬ್ಲ್ಯುಪಿಆರ್‌ಎಸ್‌ ಮತ್ತು ಎನ್‌ಐಆರ್‌ಎಂ ನೀಡುವ ವರದಿ ಆಧಾರದ ಮೇಲೆ ಅಣೆಕಟ್ಟೆ(Dam) ಸುತ್ತ ನಡೆಯುವ ಗಣಿಗಾರಿಕೆಯಲ್ಲಿ(Mining)  ಸ್ಫೋಟಕಗಳನ್ನು(Explosive) ಯಾವ ರೀತಿ ಬಳಸಬೇಕು, ಸ್ಫೋಟದ ತೀವ್ರತೆ ಎಷ್ಟಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅಣೆಕಟ್ಟು ಪುನರ್‌ ಪರಿಶೀಲನಾ ಸಮಿತಿ ವರದಿಯಲ್ಲಿ ತಿಳಿಸಿದೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಉಪ ಸಮಿತಿಯ 111ನೇ ಸಭೆಯಲ್ಲಿ ಸಿಎಸ್‌ಐಆರ್‌-ಸಿಐಎಫ್‌ಆರ್‌ರವರಿಂದ ಪ್ರಾಯೋಗಿಕ ಬ್ಲಾಸ್ಟ್‌ ಅಧ್ಯಯನ ಕೈಗೊಳ್ಳಲು ಸೂಚಿಸಲಾಗಿದ್ದು, 22 ಜುಲೈ 2021ರಂದು ನಡೆದ ನಿಗಮದ ಮಂಡಳಿಯ 73ನೇ ಸಭೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆ(KRS Dam) ವ್ಯಾಪ್ತಿಯಲ್ಲಿ ಪ್ರಾಯೋಗಿಕ ಬ್ಲಾಸ್ಟಿಂಗ್‌ ಪ್ರಸ್ತಾವನೆಯನ್ನು ಮುಂದೂಡಿಸಿದ್ದು, ಅಣೆಕಟ್ಟೆಯ ವಿನ್ಯಾಸ ರಚನೆಯ ಗುಣಮಟ್ಟಮತ್ತು ಭೌಗೋಳಿಕ ಅಧ್ಯಯನವನ್ನು ಮಾತ್ರ ಕೈಗೊಳ್ಳುವಂತೆ ಅನುಮೋದನೆ ನೀಡಿದೆ. ಈ ಅಧ್ಯಯನವನ್ನು ತುರ್ತು ಕಾಮಗಾರಿ ಎಂದು ಘೋಷಿಸಿದ್ದು, ಮೆ.ಪಾರ್ಸನ್‌ ಓವರ್‌ಸೀಸ್‌ ಪ್ರೈವೇಟ್‌ ಲಿಮಿಟೆಡ್‌ ಅವರಿಗೆ ವಹಿಸಲಾಗಿದ್ದು, 30 ಅಕ್ಟೋಬರ್‌ 2021 ರಂದು ಅಧ್ಯಯನವು ಪೂರ್ಣಗೊಂಡಿದೆ.

ಸಮಿತಿಯವರು ಸಿಡಬ್ಲ್ಯುಪಿಆರ್‌ಎಸ್‌ನವರನ್ನು ಸಂಪರ್ಕಿಸಿದಾಗ ಅಣೆಕಟ್ಟು ರಚನಾ ಸಾಮರ್ಥ್ಯ ಎಷ್ಟು ಪ್ರಮಾಣ ಗಣಿ ಸ್ಫೋಟದ ತೀವ್ರತೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂಬ ಬಗ್ಗೆ 2-ಡಿ ಮತ್ತು 3-ಡಿ ಫಿನಿಟ್‌ ಎಲಿಮೆಂಟ್‌ ಮೆಥೆಡ್‌ ಮೂಲಕ ತಿಳಿದುಕೊಳ್ಳುವರು. ಅಣೆಕಟ್ಟು ಗೋಡೆಯ ನಿರ್ಮಾಣ ಹೇಗಿದೆ, ಏನೆಲ್ಲಾ ವಸ್ತುಗಳನ್ನು ಬಳಕೆ ಮಾಡಿದ್ದಾರೆ, ಅಣೆಕಟ್ಟೆಯ ತಳಪಾಯ ಹೇಗಿದೆ. ಈ ಅಣೆಕಟ್ಟೆಎಷ್ಟುಪ್ರಮಾಣದ ಭೂಕಂಪದ ತೀವ್ರತೆಯನ್ನು ತಡೆದುಕೊಳ್ಳಲಿದೆ ಹಾಗೂ ಗಣಿ ಸ್ಫೋಟದ ತೀವ್ರತೆ ಎಷ್ಟು ಪ್ರಮಾಣದಲ್ಲಿರಬೇಕು ಎಂಬ ಬಗ್ಗೆ ವಿಸ್ತೃತವಾಗಿ ಅಧ್ಯಯನ ನಡೆಸಲಿದೆ. ಅಣೆಕಟ್ಟೆಯ ವಿನ್ಯಾಸ ಹಾಗೂ ಅದರ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವರು ಎಂದು ತಿಳಿಸಿದ್ದಾರೆ.

ಕೆಆರ್‌ಎಸ್‌ ಡ್ಯಾಂ ಬಳಿ ಗೋಡೆ ಕುಸಿತ : ಎಚ್ಚರಿಕೆ ಗಂಟೆ

ಸದ್ಯಕ್ಕೆ ಅಣೆಕಟ್ಟೆಯ ನಾರ್ತ್‌ ಬ್ಯಾಂಕ್‌ನಿಂದ ಕೇವಲ 5 ಕಿ.ಮೀ. ವ್ಯಾಪ್ತಿಯಲ್ಲಿ ಮಂಜೂರು ಮಾಡಲಾಗಿದ್ದ 8 ಗಣಿ ಗುತ್ತಿಗೆಗಳನ್ನು ರದ್ದುಪಡಿಸಿ ಸ್ಥಗಿತಗೊಳಿಸಲಾಗಿದೆಯೇ ವಿನಃ ಅಣೆಕಟ್ಟೆಯ ಸುರಕ್ಷತೆ ಸಂಬಂಧ ಎಷ್ಟುವಿಸ್ತೀರ್ಣದಲ್ಲಿ ಕ್ರಷರ್‌ ಅಥವಾ ಗಣಿಗಾರಿಕೆ ನಡೆಸಬಾರದು ಎಂಬ ಬಗ್ಗೆ ನಿಯಮ ರೂಪಿಸುವ ಯಾವುದೇ ತಜ್ಞರ ಸಮಿತಿಯನ್ನು ರಚಿಸಲಾಗಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಹಾಲಪ್ಪ ಆಚಾರ್‌(Halappa Achar) ಬಸಪ್ಪ ಅವರು ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಕೆಆರ್‌ಎಸ್‌ ಸುತ್ತ ಗಣಿಗಾರಿಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಕೆಆರ್‌ಎಸ್‌ ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಘಟಕಗಳ ಪರವಾನಗಿ ರದ್ದುಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿತ್ತು.

Follow Us:
Download App:
  • android
  • ios