ಮಂಗಳೂರು(ಮೇ 10): ಬಾಗಲಕೋಟೆಯಿಂದ ತನ್ನ ಪತ್ನಿ- ಮಗುವನ್ನು ಭೇಟಿಯಾಗಲು ವಲಸೆ ಕಾರ್ಮಿಕರೊಬ್ಬರು ಟ್ರಕ್‌ನಲ್ಲಿ ಮಂಗಳೂರಿನ ಉರ್ವಕ್ಕೆ ಆಗಮಿಸಿದ್ದು, ಆತಂಕಗೊಂಡ ಸ್ಥಳೀಯರು ನೀಡಿದ ಮಾಹಿತಿಯಂತೆ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವೆನ್ಲಾಕ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಲಾಕ್‌ಡೌನ್‌ ಘೋಷಣೆಗೆ ಮೊದಲು ಈ ಕಾರ್ಮಿಕ ಬಾಗಲಕೋಟೆಗೆ ತೆರಳಿದ್ದರು. ಅವರ ಪತ್ನಿ ಮತ್ತು ಮಕ್ಕಳು ಉರ್ವದ ಬಾಡಿಗೆ ಮನೆಯಲ್ಲೇ ಇದ್ದರು. ಲಾಕ್‌ಡೌನ್‌ ಬಳಿಕ ಬಾಗಲಕೋಟೆಯಿಂದ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೂ ಹೇಗಾದರೂ ಮಾಡಿ ಪತ್ನಿ- ಮಕ್ಕಳನ್ನು ನೋಡುವ ಬಯಕೆಯಿಂದ ಟ್ರಕ್‌ವೊಂದನ್ನು ಏರಿ ಮಂಗಳೂರಿಗೆ ಶುಕ್ರವಾರ ಬಂದಿದ್ದರು.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಈ ವಿಚಾರ ಸ್ಥಳೀಯರಿಗೆ ಗೊತ್ತಾಗಿದ್ದು, ಆತನನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಶನಿವಾರ ಅವರನ್ನು ತಪಾಸಣೆಗೆ ವೆನ್ಲಾಕ್‌ಗೆ ಕರೆದೊಯ್ಯಲಾಯಿತು.