Asianet Suvarna News Asianet Suvarna News

ಬೆಂಗಳೂರು: ಇನ್ಮುಂದೆ ನಮ್ಮ ಮೆಟ್ರೋ ಟಿಕೆಟ್ ಮೊಬೈಲ್‌ನಲ್ಲೇ ಲಭ್ಯ..!

ದಿನೇ ದಿನೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗ್ತಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ಮತ್ತಷ್ಟು ಪ್ರಯಾಣಿಕರನ್ನು ಸೆಳೆಯಲು ಹೊಸ ಪ್ಲಾನ್ ರೆಡಿ ಮಾಡಿದೆ. 

Metro Ticket Available on Mobile Phone in Bengaluru grg
Author
Bengaluru, First Published Aug 23, 2022, 10:22 PM IST

ಬೆಂಗಳೂರು(ಆ.23):  ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿಗೆ ಕೊಂಚ  ಬ್ರೇಕ್ ಹಾಕಿದ್ದೇ ನಮ್ಮ ಮೆಟ್ರೋ. ನಿತ್ಯ ಆಫೀಸಿಗೆ, ಶಾಲಾ ಕಾಲೇಜಿಗೆ ತೆರಳೋ ಸಾವಿರಾರು ಪ್ರಯಾಣಿಕರು‌ ಮೆಟ್ರೋ ಅವಲಂಭಿಸಿದ್ದಾರೆ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೇ ಸಿಗ್ನಲ್ ತೊಂದರೆ ಇಲ್ಲದೆ ಒಂದೆಡೆಯಿಂದ ಇನ್ನೊಂದೆಡೆಗೆ ವೇಗವಾಗಿ ಜನ ಮೆಟ್ರೋದಲ್ಲಿ ಟ್ರಾವೆಲ್ ಮಾಡ್ತಾರೆ. ದಿನೇ ದಿನೇ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗ್ತಿದೆ. ಹೀಗಾಗಿ ಬಿಎಂಆರ್‌ಸಿಎಲ್‌ ಮತ್ತಷ್ಟು ಪ್ರಯಾಣಿಕರನ್ನು ಸೆಳೆಯಲು ಹೊಸ ಪ್ಲಾನ್ ರೆಡಿ ಮಾಡಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡ್ತಾ ಬಂದಿರೋ ಬಿಎಂಆರ್‌ಸಿಎಲ್‌ ಇದೀಗ ಮತ್ತೊಂದು ಹೊಸ ಯೋಜನೆ ಜಾರಿ ಮಾಡಲು ಮುಂದಾಗಿದೆ.

ನಮ್ಮ ಮೆಟ್ರೋದಲ್ಲಿ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಅಂದ್ರೆ ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲಬೇಕು. ಆದ್ರೆ ಇನ್ಮುಂದೆ ಈ ಸಮಸ್ಯೆ ಇರೋದಿಲ್ಲ. ಬದಲಿಗೆ‌ ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿ ಮಾಡ್ಬಹುದು. 

Namma Metro: 2 ವರ್ಷದ ಬಳಿಕ ಲಾಭದ ಹಳಿಗೆ ‘ನಮ್ಮ ಮೆಟ್ರೋ’

ಯೆಸ್ ತಮ್ಮ ಸ್ಮಾರ್ಟ್ ಪೋನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ಬಳಿಕ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್ಲೈನ್ ಮೂಲಕ ಬಿಎಂಆರ್‌ಸಿಎಲ್‌ಗೆ ಜಮಾ ಆಗಲಿದೆ. 

2015ರ ಪೂರ್ವದಲ್ಲಿ ಅಳವಡಿಸಿದ ಎಎಫ್ಸಿ ಗೇಟ್ಗಳಲ್ಲಿ ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಹಳೆಯ ದ್ವಾರಗಳನ್ನು ಕ್ಯೂ ಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್ ವೇರ್ ಬದಲಿಸಲು ತಯಾರಿ ನಡೆಸಲಾಗ್ತಿದೆ. ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಿದ್ದು, ಇದೀಗ ಇಂತಹ ನೂತನ ವ್ಯವಸ್ಥೆಯನ್ನು ಮುಂದಿನ ತಿಂಗಳಿಂದ ನಮ್ಮ ಮೆಟ್ರೋದಲ್ಲಿ ತರಲು ಬಿಎಂಆರ್‌ಸಿಎಲ್‌ ಮುಂದಾಗಿದೆ.
 

Follow Us:
Download App:
  • android
  • ios