Asianet Suvarna News Asianet Suvarna News

Metro: ಹೊಸ ವರ್ಷಕ್ಕೆ ಮೆಟ್ರೋ ಗಿಫ್ಟ್‌: ಗುಂಪಾಗಿ ಹೋಗುವ ಪ್ರಯಾಣಿಕರಿಗೆ ಭರ್ಜರಿ ರಿಯಾಯಿತಿ

ಮೆಟ್ರೋದಲ್ಲಿ ಗುಂಪು ಗುಂಪಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ  ಪ್ರಯಾಣಿಕರಿಗೆ ನಮ್ಮ ಮೆಟ್ರೋ ಸಂಸ್ಥೆಯಿಂದ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದ್ದು, ಒಂದು ಗುಂಪು ಎಂದರೆ ಕನಿಷ್ಠ 25 ಜನಕ್ಕಿಂತ ಹೆಚ್ಚಿನ ಜನರಿರಬೇಕು ಎಂದು ಬಿಎಂಆರ್‌ಸಿಎಲ್‌ ಸಂಸ್ಥೆಯು ತಿಳಿಸಿದೆ.

Metro Gift for New Year Huge discount for group commuters sat
Author
First Published Dec 30, 2022, 6:45 PM IST

ಬೆಂಗಳೂರು (ಡಿ.30):  ಮೆಟ್ರೋದಲ್ಲಿ ಗುಂಪು ಗುಂಪಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ  ಪ್ರಯಾಣಿಕರಿಗೆ ನಮ್ಮ ಮೆಟ್ರೋ ಸಂಸ್ಥೆಯಿಂದ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿದೆ. ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದ್ದು, ಒಂದು ಗುಂಪು ಎಂದರೆ ಕನಿಷ್ಠ 25 ಜನಕ್ಕಿಂತ ಹೆಚ್ಚಿನ ಜನರಿರಬೇಕು ಎಂದು ಬಿಎಂಆರ್‌ಸಿಎಲ್‌ ಸಂಸ್ಥೆಯು ತಿಳಿಸಿದೆ.

ಈಗಾಗಲೇ ಸಿಲಿಕಾನ್‌ ಸಿಟಿಯಲ್ಲಿ ಟ್ರಾಫಿಕ್‌ ರಹಿತ ಪ್ರಯಾಣ ಮಾಡುವ ಉದ್ದೇಶದಿಂದ ಮೆಟ್ರೋ ರೈಲು ಅತ್ಯಂತ ಅನುಕೂಲ ಆಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರತಿನಿತ್ಯ ಮೆಟ್ರೋ ಪ್ರಯಾಣ ಮಾಡುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಲಿಒದೆ. ಈಗ ದಿನಕ್ಕೆ ೫ ಲಕ್ಷವರೆಗೂ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡುತ್ತಾರೆ. ಅದರಲ್ಲಿ ಒಂದು ಕುಟುಂಬ, ಸಂಘ ಸಂಸ್ಥೆಗಳ ಜನರು ಯಾವುದೇ ಸಭೆ, ಸಮಾರಂಭ ಅಥವಾ ಕಾರ್ಯಕ್ರಮಕ್ಕೆ ಗುಂಪಾಗಿ ಹೋಗುವುದಾದರೆ ಅವರಿಗೆ ಅನುಕೂಲ ಆಗುವಂತೆ ಮೆಟ್ರೋ ಟಿಕೆಟ್‌ ದರದಲ್ಲಿ ಶೇ.10 ರಿಂದ ಶೇ.20ರವರೆಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಮೆಟ್ರೋ ತಿಳಿಸಿದೆ. 

Namma Metro: ಹೊಸ ವರ್ಷಾಚರಣೆ ಹಿನ್ನೆಲೆ; ನಾಳೆ ತಡರಾತ್ರಿವರೆಗೂ ಮೆಟ್ರೋ ಸಂಚಾರ

ಮೆಟ್ರೋ ಗುಂಪುಗಳಿಗೆ ಈ ನಿಯಮ 1ನೇ ಜನವರಿ 2023 ರಿಂದ, ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ ರಿಯಾಯಿತಿಗಳನ್ನು ಅನ್ವಯ ಆಗುತ್ತದೆ. ನಮೂದಿಸಿದ ವಿವಿಧ ನಿಲ್ದಾಣಗಳಿಂದ ಪ್ರವೇಶಿಸಬಹುದು ಮತ್ತು ಒಂದೇ ನಿಲ್ದಾಣದಲ್ಲಿ ನಿರ್ಗಮಿಸಬೇಕು ಅಥವಾ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ನಮೂದಿಸಿದ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಬಹುದು.  ಇದು ಒಂದೇ ಪ್ರಯಾಣಕ್ಕೆ ಸೀಮಿತವಾಗಿರುತ್ತದೆ.

ಒಂದು ವಾರಕ್ಕಿಂತ ಮುಂಚೆ ಅರ್ಜಿ ಸಲ್ಲಿಸಿ: ಮಧ್ಯಮ ಮತ್ತು ದೊಡ್ಡ ಗುಂಪಿನಲ್ಲಿ ಪ್ರಯಾಣಿಸಲು, ಪ್ರಯಾಣದ ದಿನಾಂಕ, ಸಮಯ, ಪುಯಾಣಿಕರ ಸಂಖ್ಯೆ ಪ್ರವೇಶ ನಿಲ್ದಾಣ, ನಿರ್ಗಮನ ನಿಲ್ದಾಣ ಮತ್ತು ಪ್ರಯಾಣದ ಉದ್ದೇಶವನ್ನು ಸೂಚಿಸುವ ಮೂಲಕ, ಪ್ರಯಾಣದ ದಿನಾಂಕದಿಂದ ಕನಿಷ್ಟ 7 ದಿನಗಳ ಮುಂಚಿತವಾಗಿ, ನಿಗಮಕ್ಕೆ ಬರಹದ ಮೂಲಕ ವಿನಂತಿ ಸಲ್ಲಿಸಬೇಕು. ನಿಗಮವು ಪ್ರಯಾಣದ ವಿವರಗಳನ್ನು ಸೂಚಿಸುವ ಅಧಿಕಾರ ಪತ್ರ ಅಥವಾ ಗುಂಪು ಟಿಕೆಟ್‌ಗಳನ್ನು ನೀಡುತ್ತದೆ. ಅಧಿಕೃತ ನಿಗಮದ ಅಧಿಕಾರಿ ಅಂತಹ ಪ್ರಯಾಣಿಕರ ಗುಂಪನ್ನು ಎಣಿಸುವ ಹಾಗೂ ಹಸ್ತಚಾಲಿತ ವಿಧಾನಗಳ ಮೂಲಕ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಅನುಮತಿಸಲಾಗುತ್ತದೆ.

ಮುಂದಿನ ವರ್ಷದಲ್ಲಿ ವೈಟ್‌ಫೀಲ್ಡ್‌, ಏರ್‌ಪೋರ್ಟ್‌ಗೆ ಮೆಟ್ರೋ: ಸಿಎಂ ಬೊಮ್ಮಾಯಿ

ಪ್ರಯಾಣಿಕರ ಗುಂಪುಗಳ ವಿಂಗಡಣೆ ಮತ್ತು ಶೇಕಡಾ ದರ ರಿಯಾಯಿತಿ

  • ಸಣ್ಣ ಗುಂಪು: 25 ರಿಂದ 99 ಜನರು : ಶೇ.10
  • ಮಧ್ಯಮ ಗುಂಪು : 100 ರಿಂದ 1 ಸಾವಿರ ಜನ: ಶೇ.15 
  • ದೊಡ್ಡ ಗುಂಪು: ಕನಿಷ್ಠ 1 ಸಾವಿರ ಜನರಿಗಿಂತ ಹೆಚ್ಚಿನ ಜನರು: ಶೇ.20

ವಿನಾಯಿತಿ ಲಭ್ಯತೆ ಹೇಗೆ ಪಡೆಯಬೇಕು?
1. ಎರಡು ನಿಲ್ದಾಣಗಳ ನಡುವೆ ಪ್ರಯಾಣಿಸುವ 25 ರಿಂದ 99 ಸಂಖ್ಯೆಗಳ ಸಣ್ಣ ಗುಂಪು
• ಟೋಕನ್ ದರಕ್ಕಿಂತ ಶೇ.10 ರಷ್ಟು ರಿಯಾಯಿತಿ 
2. ಮಧ್ಯಮ ಗುಂಪು (ಗುಂಪಿನಲ್ಲಿ 100 ರಿಂದ 1000 ವ್ಯಕ್ತಿಗಳು): 
• ಟೋಕನ್ ದರಕ್ಕಿಂತ ಶೇ.15ರಷ್ಟು ರಿಯಾಯಿತಿ ಪ್ರಯಾಣಿಕರು ಒಟ್ಟಾಗಿ ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ಗಮ್ಯಸ್ಥಾನ ನಿಲ್ದಾಣದಿಂದ ಎಲ್ಲರೂ ಒಟ್ಟಾಗಿ ನಿರ್ಗಮಿಸಬೇಕು.
• ಪ್ರಯಾಣಿಕರಿಗೆ ಫ್ಲಾಟ್ ದರ 35 ರೂ. ಆಗಿರುತ್ತದೆ. 
3. ದೊಡ್ಡ ಗುಂಪು (ಗುಂಪಿನಲ್ಲಿ 1000 ಕ್ಕಿಂತ ಹೆಚ್ಚು ವ್ಯಕ್ತಿಗಳು
• ಟೋಕನ್ ದರಕ್ಕಿಂತ ಶೇ.20ರಷ್ಟು ರಿಯಾಯಿತಿ.
• ಪ್ರಯಾಣಿಕರಿಗೆ ಫ್ಲಾಟ್ ದರ ರೂ 30 ರೂ. ಆಗಿರುತ್ತದೆ.

Follow Us:
Download App:
  • android
  • ios